ಬೆಂಗಳೂರು[ಫೆ.13]: ‘ಫೆ.8ರಂದು ಶುಕ್ರವಾರ ಬಜೆಟ್‌ ಮಂಡನೆಗೂ ಮೊದಲು ಸರ್ಕಾರ ಬೀಳಲಿದೆ ಎಂದು ಬಿಜೆಪಿಯವರು ಹೇಳಿದ್ದರು. ನಾನು ಮುಹೂರ್ತ ಇಟ್ಟು 12.30ಕ್ಕೆ ಬಜೆಟ್‌ ಅಧಿವೇಶನ ಶುರುಮಾಡಿ, 12.40ಕ್ಕೆ ಬಜೆಟ್‌ ಮಂಡಿಸಿ. ಬಿಜೆಪಿಯವರೇ ಎದ್ದು ಹೊರಗೆ ಹೋಗುತ್ತಾರೆ ಎಂದು ಹೇಳಿದ್ದೆ. ನಾನು ಹೇಳಿದಂತೆಯೇ ಆಗಿದೆ.’

- ಹೀಗೆ ತಾವು ಇಟ್ಟಮುಹೂರ್ತ ಎಷ್ಟು ಪವರ್‌ ಫುಲ್‌ ಎಂಬುದನ್ನು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸದನದಲ್ಲಿ ಹೇಳಿಕೊಂಡರು.

ಮಂಗಳವಾರ ಮಾತನಾಡಿದ ಅವರು, ಬಿಜೆಪಿ ಸ್ನೇಹಿತರು ಸಂಕ್ರಾಂತಿಗೆ ಸರ್ಕಾರ ಬೀಳುತ್ತದೆ, ಬಜೆಟ್‌ ಮಂಡನೆ ದಿನ ಸರ್ಕಾರ ಬೀಳಲಿದೆ ಎಂದು ಹೇಳಿದ್ದರು. ನಾನು 12.30ಕ್ಕೆ ಬಜೆಟ್‌ ಅಧಿವೇಶನ ಶುರು ಮಾಡಿ, 12.40ಕ್ಕೆ ಬಜೆಟ್‌ ಓದಲು ಶುರು ಮಾಡಿದರೆ ನೀವು ನಿರಾತಂಕವಾಗಿ ಬಜೆಟ್‌ ಮಂಡಿಸಿ ಮುಗಿಸಬಹುದು. ಬಿಜೆಪಿಯವರು ತಾವಾಗಿಯೇ ಎದ್ದು ಹೊರಹೋಗಿ ಬಜೆಟ್‌ ಮಂಡನೆಗೆ ಅನುವು ಮಾಡಿಕೊಡುತ್ತಾರೆ ಎಂದು ಹೇಳಿದ್ದೆ. ಅದರಂತೆಯೇ ಆಗಿದೆ ಎಂದು ರೇವಣ್ಣ ಆಡಿಯೋ ಬಗೆಗಿನ ಗಂಭೀರ ಚರ್ಚೆ ವೇಳೆ ಸದನದಲ್ಲಿ ನಗು ಉಕ್ಕಿಸಿದರು.