ಬೆಂಗಳೂರು[ಫೆ.06]: ರಾಹುಕಾಲ, ಗುಳಿಕಕಾಲ, ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ ಹೊಂದಿರುವ ಸಚಿವ ಎಚ್‌.ಡಿ.ರೇವಣ್ಣ ಅವರೇ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಬಜೆಟ್‌ ಮಂಡಿಸುವ ವೇಳೆಯನ್ನು ಸಹ ನಿಗದಿ ಮಾಡಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್‌ನನ್ನು ಫೆ.8ರಂದು ಮಧ್ಯಾಹ್ನ 12.30ಕ್ಕೆ ಮಂಡಿಸಲಿದ್ದಾರೆ. ಇದಕ್ಕೂ ಮೊದಲಿನ ವೇಳೆ ರಾಹುಕಾಲ ಆಗಿರುವುದರಿಂದ ಬಜೆಟ್‌ ಮಂಡನೆ ಸೂಕ್ತ ಅಲ್ಲ ಎಂದು ರೇವಣ್ಣ ಅವರ ಸಲಹೆ ಮೇರೆಗೆ 12.30ಕ್ಕೆ ಬಜೆಟ್‌ ಮಂಡಿಸಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.

ಬಜೆಟ್‌ ಮಂಡನೆ ಸಾಮಾನ್ಯವಾಗಿ 11 ಗಂಟೆ ನಂತರ ನಿಗದಿಯಾಗುತ್ತಿತ್ತು, ಆದರೆ ರಾಹುಕಾಲ ಇರುವ ಕಾರಣ 12.30ರ ನಂತರವೇ ಆಯವ್ಯಯ ಮಂಡಿಸಬೇಕೆಂದು ರೇವಣ್ಣ ಅವರು ಸಲಹೆ ನೀಡಿದರೆಂದು ಹೇಳಲಾಗಿದೆ.