ಬೆಂಗಳೂರು (ಜು.10): ರಾಜ್ಯದಲ್ಲಿ ಪೊಲಿಟಿಕಲ್ ಹೖಡ್ರಾಮ ನಡೆಯುತ್ತಿರುವಾಗಲೇ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಪೊಲೀಸರಿಗೆ ಶಾಕ್ ಕೊಟ್ಟಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಗೃಹ ಕಚೇರಿ ಕೃಷ್ಣಾಗೆ ಸಿಎಂ ದಿಢೀರ್ ಭೇಟಿ ನೀಡಿದ್ದು, ಅಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸರು ಅಚ್ಚರಿಗೊಳಗಾಗಿದ್ದಾರೆ.

ಸಾಮಾನ್ಯವಾಗಿ ಸಿಎಂ ಗೃಹ ಕಚೇರಿಗೆ ಬರುವಾಗ ಅಲ್ಲಿನ ಸಿಬ್ಬಂದಿಗೆ ಮುಂಚಿತವಾಗಿಯೇ ಸೂಚನೆ ಸಿಕ್ಕಿರುತ್ತದೆ. ಈ ಬಾರಿ ಸಿಎಂ ಕೃಷ್ಣಾಗೆ ಬರೋದು ಪೊಲೀಸರಿಗೆ ಗೊತ್ತೇ ಇರಲಿಲ್ಲ. ಪೊಲೀಸರಿಗೆ ಯಾವುದೇ ಮೆಸೇಜ್ ಕೊಡದೇ ದಿಢೀರ್ ಆಗಿ ಸಿಎಂ ಭೇಟಿ ನೀಡಿದ್ದಾರೆ. ಸಿಎಂ ದಿಢೀರ್ ಭೇಟಿ ಕೊಟ್ಟ ಕಾರಣ ಗೃಹ ಕಚೇರಿ ಕೃಷ್ಣಾದಲ್ಲೂ ಹೆಚ್ಚಿನ ಪೊಲೀಸರು ಇರಲಿಲ್ಲ. ಅನಿರೀಕ್ಷಿತವಾಗಿ ಸಿಎಂ ಅವರನ್ನು ನೋಡಿ ಗಾಬರಿಗೊಂಡ ಪೊಲೀಸರು ಸಡನ್ ಆಗಿ ಗೇಟ್ ತೆರೆದಿದ್ದಾರೆ. ಈ ಮೊದಲು ಸಿಎಂ ಬರ್ತಾರೆ ಅನ್ನೋ ಮಾಹಿತಿ ಸಿಕ್ಕಿದಾಗ ಭದ್ರತಾ ಪೊಲೀಸರು ಮುಂಚಿತವಾಗಿ ಕಚೇರಿ ಗೇಟ್ ಓಪನ್ ಮಾಡಿಡುತ್ತಿದ್ದರು.

ಸರ್ಕಾರ ಉರುಳೋ ಭೀತಿ: ಕಡತಗಳಿಗೆ ಸಹಿ ಹಾಕೋದ್ರಲ್ಲಿ ಸಿಎಂ ಫುಲ್ ಬ್ಯುಸಿ

ಆದರೆ ಇಂದು ಅನಿರೀಕ್ಷಿತವಾಗಿ ಬಂದಿದ್ದು, ಸಿಎಂ ಕುಮಾರಸ್ವಾಮಿ ‌ನಡೆಯಿಂದ ಪೊಲೀಸರು ಕಂಗಾಲಾಗಿದ್ದಾರೆ. ಈ ಘಟನೆಯ ಬೆನ್ನಲ್ಲೇ 
ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಸಿಎಂ ತೀವ್ರ ತಲೆಕೆಡಿಸಿಕೊಂಡಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಪೂರ್ವನಿಗದಿಯಂತೆ ಸಿಎಂ ಕಾರು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ರಾಜಭವನದತ್ತ ತೆರಳಬೇಕಿತ್ತು.