ಬೆಂಗಳೂರು[ಜು.10]: ಕಳೆದೊಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳಾಗುತ್ತಿದ್ದು, ದೋಸ್ತಿ ಸರ್ಕಾರ ಪತನಗೊಳ್ಳುವ ಭೀತಿ ಎದುರಾಗಿದೆ. ಈ ಹೈಡ್ರಾಮಾದ ನಡುವೆ ಸಿಎಂ ಕುಮಾರಸ್ವಾಮಿ ಕಡತ ವಿಲೇವಾರಿ ಮಾಡೋದ್ರಲ್ಲಿ ತಲ್ಲೀನರಾಗಿದ್ದಾರೆ.

ಹೌದು ಸದ್ಯ ಕರ್ನಾಟಕ ರಾಜಕೀಯ ಬೆಂಗಲೂರಿನಿಂದ ಮುಂಬೈಗೆ ಶಿಫ್ಟ್ ಆಗಿದ್ದು, ನಾಳೆ ಗುರುವಾದ ಸುಪ್ರೀಂ ಮೆಟ್ಟಿಲೇರಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸದ್ಯ ಮುಂಬೈನಲ್ಲಿ ಅತೃಪ್ತರನ್ನು ಓಲೈಸಲು ಅವರು ಉಳಿದುಕೊಂಡಿರುವ ಹೋಟೆಲ್ ಎದುರು ಬೀಡು ಬಿಟ್ಟಿದ್ದಾರೆ. ಇವೆಲ್ಲದರ ನಡುವೆ ಸಿಎಂ ಕುಮಾರಸ್ವಾಮಿ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕಡತಗಳಿಗೆ ಸಹಿ ಹಾಕಿ ವಿಲೇವಾರಿ ಆರಂಭಿಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸರ್ಕಾರ ಉಳಿಯುತ್ತಾ..! ಉರುಳುತ್ತಾ..! ಅನ್ನೋ ಟೆನ್ಷನ್ ನಲ್ಲಿರುವ ಸಿಎಂ ಕುಮಾರಸ್ವಾಮಿ ಕೆಪಿಟಿಸಿಎಲ್ ಸೇರಿ ವಿವಿಧ ಅಧಿಕಾರಿಗಳೊಂದಿಗೆ ರಾತ್ರಿ 11.30ರವರೆಗೂ ಚರ್ಚೆ ನಡೆಸಿ ಕಡತಗಳಿಗೆ ಸಹಿ ಹಾಕಿದ್ದಾರೆ. ರಾತ್ರಿ ಅಧಿಕಾರಿಗಳ ಸಭೆ ಬಳಿಕ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ.