HD Kumaraswamy: ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ಸಾಧ್ಯತೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿರುವ ಅಂಶಗಳನ್ನು ಗಮನಿಸಿದರೆ ರಾಜ್ಯ ವಿಧಾನಸಭೆಗೆ ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆಗಳು ಗೋಚರವಾಗಿವೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕಲಬುರಗಿ (ಮಾ.7): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಬಜೆಟ್‌ನಲ್ಲಿರುವ (Budget 2022) ಅಂಶಗಳನ್ನು ಗಮನಿಸಿದರೆ ರಾಜ್ಯ ವಿಧಾನಸಭೆಗೆ ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆಗಳು ಗೋಚರವಾಗಿವೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಕಲಬುರಗಿಯಲ್ಲಿ (Kalaburagi) ಸುದ್ದಿಗಾರರೊಂದಿಗೆ ಮಾನಾಡಿದ ಅವರು, ಬಜೆಟ್‌ನಲ್ಲಿ ಗಟ್ಟಿಅಂಶಗಳು ಯಾವುವೂ ಇಲ್ಲ. ಎಲ್ಲವೂ ಜನಪ್ರೀಯತೆಯ ಹಿನ್ನೆಲೆಯಲ್ಲಿಯೇ ಇವೆ. ಹೀಗಾಗಿ ಇದು ಚುನಾವಣೆಯ ಬಜೆಟ್ ಎಂಬಂತಾಗಿದೆ ಎಂದ ಅವರು, ಅವಧಿಗೂ ಮುನ್ನ ಅಥವಾ ಅವಧಿಪೂರ್ಣ ಯಾವುದೇ ರೀತಿಯಲ್ಲಿ ಚುನಾವಣೆ ಬಂದರೂ ಜೆಡಿಎಸ್ ಎದುರಿಸಲು ಸಿದ್ಧ ಎಂದರು.
ಬೊಮ್ಮಾಯಿಯವರು ತಾವೇ ನೀರಾವರಿ ತಜ್ಞರೆಂದು ಹೇಳಿಕೊಂಡವರು, ಬಜೆಟ್‌ನಲ್ಲಿ ನೀರಾವರಿ ವಿಚಾರ ಗಮಸಿದರೆ ನೀರಾವರಿ ಹೆಸರಲ್ಲಿ ರಾಜ್ಯದ ಜನತೆಗೆ ಮೂರು ನಾಮ ಹಾಕಲು ಸಿದ್ಧವಾಗಿದ್ದಾರೆಂದು ಲೇವಡಿ ಮಾಡಿದರು. ಯುವಕರಿಗೆ ಉದ್ಯೋಗ ಕೊಡುವ ದಿಶೆಯಲ್ಲಿಯೂ ಬಜೆಟ್‌ನಲ್ಲಿ ಹೊಸತು ಯಾವುದೂ ಇಲ್ಲ, ಬಜೆಟ್ ರಾಜ್ಯದ ಪ್ರಗತಿಗೆ ಒದಗದೆ ಚುನಾವಣೆ ಲಕ್ಷದಲ್ಲಿಟ್ಟೇ ಸಿದ್ಧಪಡಿಸಿದಂತಿದೆ ಎಂದರು. ಜೆಡಿಎಸ್ (JDS) ಯಾವುದೇ ಪಕ್ಷಗಳಿಗೆ ಹತ್ತಿರವಾಗಿಲ್ಲ, ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ಜೊತೆ ಹೋಗಿ ಅನಭವವಾಗಿದೆ. ನಮಗೆ ಇವೆರಡೂ ಬೇಡ. ನಾವೀಗ ನೇರವಾಗಿ ಹೋಗೋಣವೆಂದು ಸಿದ್ಧರಾಗಿದ್ದೇವೆಂದರು.
ಮೇಕೆದಾಟು ಯೋಜನೆಗೆ ಕೇಂದ್ರದಿಂದಲೇ 'ವಿವಾದ' ಪದ ಬಳಕೆ, ಕುಮಾರಸ್ವಾಮಿ ಆಕ್ರೋಶ
ದೇಶದಲ್ಲಿ ವೈದ್ಯಕೀಯ ಹಾಗೂ ಇತರೆ ಶಿಕ್ಷಣ ವಂಚಿತ ಬಡ ಮತ್ತು ಪ್ರತಿಭಾವಂತರು ವಿದೇಶಗಳಿಗೆ ಹೋಗುತ್ತಿದ್ದಾರೆ. ನಮ್ಮಲ್ಲಿ ಪ್ರತಿಭೆಗಳಿಗೆ ಶಿಕ್ಷಣ ಸರಿಯಾಗಿ ಸಿಗುತ್ತಿಲ್ಲ. ನಮ್ಮಲ್ಲೇ ಗುಣಮಟ್ಟದ ಶಿಕ್ಷಣ, ಕೈಗೆಟುಕುವ ದರದಲ್ಲಿ ಸಿಗೋವಂತಿದ್ದರೆ ನಮ್ಮವರು ಯಾಕೆ ವಿದೇಶಕ್ಕೆ ಹೋಗಿ ಸಾವನ್ನಪ್ಪಬೇಕಿತ್ತು. ನೀಟ್ ಪರೀಕ್ಷೆಇಂದ ನಮ್ಮ ಬಡ ಹಾಗೂ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಎಂದರು. ಮೂರು ತಿಂಗಳ ಹಿಂದೆಯೇ ಯುದ್ಧದ ಮಾತುಗಳು ಕೇಳಿ ಬಂದಿದ್ದವು. ಆಗಲೆ ಭಾರತ ಸರಕಾರ ಚ್ಚೆತ್ತು ಮಕ್ಕಳನ್ನು ಮರಲಿ ಕರೆಸಬೇಕಿತ್ತು.
ಯುದ್ಧ ಶುರುವಾಗಿ ಜೀವ ಹೋಗುವಾಗ ಕರೆ ತರುವ ಕೆಲಸಕ್ಕೆ ಮುಂದಾದರು. ಇದರಿಂದ ಅನೇಕ ಮಕ್ಕಳ ಸಾವು- ನೇವಾಯ್ತು. ಇನ್ನಾದರೂ ಭಾರತ ಸರ್ಕಾರ ಅಲ್ಲಿಂದ ಮರಳಿರುವ ಮಕ್ಕಳ ಮುಂದಿನ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕೆಂದರು. ಕಲಬುರಗಿ ಪಾಲಿಕೆಯಲ್ಲಿ ಯಾರ ಜೊತೆಗೆ ಮೈತ್ರಿ ಎಂಬ ವಿಚಾರದಲ್ಲಿ ಈಗಲೇ ಹೇಳಲಾಗದು. ವಿಚಾರ ಕೋರ್ಟ್‌ನಲ್ಲಿದೆ. ಅಂತಿಮ ತೀರ್ಪು ಹೊರಬಂದ ನಂತರ ಕ್ರಮ ಈ ಬಗ್ಗೆ ನಿಲುವು ತಳೆಯಲಾಗುತ್ತದೆ ಎಂದರು.
ಇಸ್ಪಿಟ್ ಸಾಲ ನಾನು ತೀರಿಸ್ಬೇಕಿತ್ತಾ: ಇಸ್ಪೀಟ್ ಆಡಿ ಸಾಲ ಮಾಡಿಕೊಂಡ ಗ್ಯಾಂಬ್ಲರ್‌ಗಳ ಸಾಲವನ್ನು ನಾನು ತೀರಿಸಬೇಕಿತ್ತಾ? ಅಂತಹವರು ಇದೀಗ ನನ್ನ ಪಕ್ಷ ತೊರೆಯುತ್ತಿದ್ದಾರೆ. ಅವರ ಸಾಲವನ್ನು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಮಾಡಿರುವ ಹಣದಿಂದ ತೀರಿಸುತ್ತಾರಂತೆ ಬಿಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ (CP Yogeeshwara) ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಅನಾರೋಗ್ಯಕ್ಕೆ ತುತ್ತಾಗುವ ಬಡವರ ಚಿಕಿತ್ಸೆಗೆ ನೆರವು ನೀಡುತ್ತೇನೆ.
HD Kumaraswamy: ವಿಧಾನಸಭೆ, ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಸಿದ್ಧತೆ
ಇಂತಹವರ ಸಾಲವನ್ನು ತೀರಿಸುವ ಜವಾಬ್ದಾರಿಯನ್ನು ಪಾಪ ಅವರು ವಹಿಸಿಕೊಂಡಿದ್ದಾರೆ. ನನ್ನ ಸರ್ಕಾರವನ್ನು ಕೆಡವಿದೆ ಎಂದು ಹೇಳಿಕೊಂಡು ಎಂಎಲ್‌ಸಿ ಆದವರು, ತಾಲೂಕಿನ ಕೆಲವು ಅಧಿಕಾರಿಗಳನ್ನು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ. ಅಲ್ಲಿಗೆ ವರ್ಗ ಮಾಡಿಸುತ್ತೇನೆ, ಇಲ್ಲಿಗೆ ವರ್ಗ ಮಾಡಿಸುತ್ತೇನೆ ಎಂದು ಅಧಿಕಾರಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದು, ಆ ಹಣದಿಂದ ಮುಖಂಡರನ್ನು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.