Bengaluru acid attack ನಮ್ಮ ತಾಯಿ ಮೇಲೂ ಆ್ಯಸಿಡ್ ದಾಳಿ ಆಗಿತ್ತು, ಭಾವನಾತ್ಮಕ ಹೇಳಿಕೆ ನೀಡಿದ ಕುಮಾರಸ್ವಾಮಿ!
- ಬೆಂಗಳೂರಿನಲ್ಲಿ ಯುವತಿ ಮೇಲೆ ಆಸ್ಯಿಡ್ ದಾಳಿ ಪ್ರಕರಣ
- ಆಸ್ಯಿಡ್ ದಾಳಿಯ ಕುರಿತು ಹೆಚ್‌ಡಿಕೆ ಭಾವನಾತ್ಮಕ ಹೇಳಿಕೆ
- ನಮ್ಮ ತಾಯಿ ಮೇಲೆ ಸಹ ಆಸ್ಯಿಡ್ ದಾಳಿ ಆಗಿತ್ತು
ವಿಜಯನಗರ(ಏ.30): ಬೆಂಗಳೂರು ಯುವತಿ ಮೇಲಿನ ಆ್ಯಸಿಡ್ ದಾಳಿ ಪ್ರಕರಣ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಭಾವುಕರಾದ ಹೆಚ್‌ಡಿಕೆ, ನಮ್ಮ ತಾಯಿ ಮೇಲೂ ಆ್ಯಸಿಡ್ ದಾಳಿ ಆಗಿತ್ತು. ತಾಯಿ ಮಾನಸಿಕವಾಗಿ ಧೈರ್ಯವಾಗಿದ್ದರು. ಹೀಗಾಗಿ ಬದುಕುಳಿದರು ಎಂದು ಕುಮಾಸ್ವಾಮಿ ಹೇಳಿದ್ದಾರೆ.
ತಾಯಿ ದೈವ ಭಕ್ತೆಯಾಗಿದ್ದರು. ಹೀಗಾಗಿ ಅವರನ್ನು ದೇವರು ಕಾಪಾಡಿದರು ಎಂದು ಕುಮಾರಸ್ವಾಮಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೆಚ್‌ಡಿಕೆ ಒತ್ತಾಯಿಸಿದರು.
ಪ್ರೀತಿ ನಿರಾಕರಿಸಿದ್ದಕ್ಕೆ ಹುಡುಗಿ ಮೇಲೆ ಆ್ಯಸಿಡ್ ದಾಳಿ ಮಾಡಿದ ವಿಕೃತ ಪ್ರೇಮಿ
ಇವತ್ತು ಮಾನವೀಯತೆ ಅನ್ನೋದು ಇಲ್ಲವಾಗಿದೆ. ಮಾನವೀಯತೆ ಅನ್ನೋದನ್ನ ಕೆಟ್ಟ ಪರಿಸ್ಥಿತಿಯಲ್ಲಿ ಕಾಣುತ್ತಿದ್ದೇವೆ. ಸಮಾಜದಲ್ಲಿ ಭಾಂದವ್ಯ, ಮಾನವೀಯತೆ, ಜೀವಗಳ ಮೌಲ್ಯಗಳು ಕಾಣುತ್ತಿಲ್ಲ. ನಿನ್ನೆ ಮೈಸೂರಿನಲ್ಲಿ ಕುಡಿಯಲು ಹಣ ಕೊಡಲಿಲ್ಲ ಎಂದು ಅಕ್ಕನ ಮಗನನ್ನ ಗೋಡೆಗೆ ಎಸೆದು ಕೊಲೆ ಮಾಡಲಾಗಿದೆ. ಇಂತಹ ಕೆಟ್ಟ ಪರಿಸ್ಥಿತಿ ಹಾಗೂ ಸಮಾಜ ಸೃಷ್ಟಿಯಾಗುತ್ತಿದೆ ಅನ್ನೋದು ಚಿಂತನೆ ಮಾಡಬೇಕಿದೆ ಎಂದಿದ್ದಾರೆ.
ಹಿಂದೆ ಇದ್ದ ಬಾಂಧವ್ಯ, ಕುಟುಂಬಗಳಲ್ಲಿನ ಹೊಂದಾಣಿಕೆ, ಪರಸ್ಪರ ಸ್ನೇಹ ಹಾಗೂ ಪ್ರೀತಿ ಇಲ್ಲದಾಗಿದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ
ಅಭ್ಯರ್ಥಿಗಳ ಹೋರಾಟಕ್ಕೆ ಹೆಚ್‌ಡಿಕೆ ಬೆಂಬಲ
ಪಿಎಸ್ಐ ನೇಮಕಾತಿ ಹಗರಣ ಕುರಿತು ಹೆಚ್‌ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ದ ಗರಂ ಆಗಿದ್ದಾರೆ. ಪಿಎಸ್ ಐ ನೇಮಕಾತಿ ಪ್ರಕರಣ ಅಭ್ಯರ್ಥಿಗಳು ಹೋರಾಟ ಮಾಡುತ್ತಿರುವುದರಲ್ಲಿ ನ್ಯಾಯವಿದೆ. ಈಗ ಪ್ರಕರಣದ ಮುಖ್ಯ ಆರೋಪಿಯನ್ನ ಬಂಧಿಸಿದ್ದಾರೆ. ಯಾರು ಎಷ್ಟು ಹಣ ಕೊಟ್ಟು ಪರೀಕ್ಷೆ ಪಾಸ್ ಆಗಿದ್ದಾರೋ ಆ ಮಾಹಿತಿ ಸರ್ಕಾರಕ್ಕಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಯಾಕೆ ಬೀದಿ ಪಾಲು ಮಾಡುತ್ತೀರಿ ಎಂದು ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸರ್ಕಾರ ಏಕಾಎಕಿ ತನಿಖಾ ವರದಿ ಬರುವ ಮುನ್ನವೇ ನೇಮಕಾತಿ ರದ್ದು ಮಾಡಿದ್ದು ಸರಿಯಲ್ಲ. ಇದು ಸರ್ಕಾರದ ವೈಪಲ್ಯ ಇದ್ರಲ್ಲಿ ವಿದ್ಯಾರ್ಥಿಗಳ ತಪ್ಪು ಎನಿದೆ ಎಂದು ಪ್ರಶ್ನಿಸಿದ್ದಾರೆ. ಅಕ್ರಮ ಮಾಡಿದವರಿಗೆ ಮುಂದೆ ಸರ್ಕಾರಿ ನೌಕರಿ ಪಡೆಯಲು ಅರ್ಹರಲ್ಲ ಎಂದು ಪರಿಗಣಿಸಬೇಕು ಎಂದು ಸಲಹೆ ನೀಡಿದ್ದಾರೆ. ಯಾರು ಪ್ರಾಮಾಣಿಕ ರೀತಿಯಲ್ಲಿ ಪರೀಕ್ಷೆ ಬರೆದಿದ್ದಾರೋ ಅವರ ಬದುಕಿನಲ್ಲಿ ಚೆಲ್ಲಾಟವಾಡಬೇಡಿ ಎಂದಿದ್ದಾರೆ.
ಸಂಸಾರ ಹಾಳು ಮಾಡಿದ್ದ ಕೋಪ, ಬೆಂಗಳೂರಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ಅಟ್ಯಾಕ್!
ಪಿಎಸ್ ಐ ಅಕ್ರಮದಲ್ಲಿ ಯಾರು ದಂಧೆ ಮಾಡಿದ್ದಾರೋ ಅವರನ್ನ ಸರ್ಕಾರ ಕಸ್ಟಡಿಯಲ್ಲಿ ಇಟ್ಟು ಕೊಂಡಿತು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಈಗ ಮುಸ್ಲಿಂರನ್ನ ಒಲೈಕೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. 2 ರಾಷ್ಟ್ರೀಯ ಪಕ್ಷಗಳಿಗೆ ಅಭಿವೃದ್ಧಿ ಬೇಕಾಗಿಲ್ಲ. ಅಧಿಕಾರ ಹಿಡಿಯಲು ಎನೂ ಬೇಕು ಅದನ್ನು ಮಾಡುತ್ತಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರೀತಿಸಲ್ಲ ಎಂದವಳಿಗೆ ಪಾಗಲ್ ಪ್ರೇಮಿ ಆ್ಯಸಿಡ್
ಪಿಎಸ್ ಐ ಅಕ್ರಮದಲ್ಲಿ ಯಾರು ದಂಧೆ ಮಾಡಿದ್ದಾರೋ ಅವರನ್ನ ಸರ್ಕಾರ ಕಸ್ಟಡಿಯಲ್ಲಿ ಇಟ್ಟು ಕೊಂಡಿತು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಈಗ ಮುಸ್ಲಿಂರನ್ನ ಒಲೈಕೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. 2 ರಾಷ್ಟ್ರೀಯ ಪಕ್ಷಗಳಿಗೆ ಅಭಿವೃದ್ಧಿ ಬೇಕಾಗಿಲ್ಲ. ಅಧಿಕಾರ ಹಿಡಿಯಲು ಎನೂ ಬೇಕು ಅದನ್ನು ಮಾಡುತ್ತಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕೋಪಗೊಂಡು 25 ವರ್ಷದ ಯುವತಿ ಮೇಲೆ ಆ್ಯಸಿಡ್ ಎರಚಿ ಕಿಡಿಗೇಡಿಯೊಬ್ಬ ಕೊಲೆಗೆ ಯತ್ನಿಸಿರುವ ಅಮಾನುಷ ಘಟನೆ ರಾಜಧಾನಿಯಲ್ಲಿ ನಡೆದಿದೆ. ಖಾಸಗಿ ಕಂಪನಿ ಉದ್ಯೋಗಿ, ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಯುವತಿ ದಾಳಿಗೊಳಗಾಗಿದ್ದು, ಶೇ.40ರಷ್ಟುಸುಟ್ಟಗಾಯಗಳಾಗಿವೆ. ಹೊಸೂರು ರಸ್ತೆಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸಂತ್ರಸ್ತೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಕೃತ್ಯ ಎಸಗಿ ಪರಾರಿಯಾಗಿರುವ ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟ್‌ನ ನಿವಾಸಿ ಆರೋಪಿ ನಾಗೇಶ್ ಪತ್ತೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ. ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿರುವ ಕಚೇರಿಗೆ ಬೆಳಗ್ಗೆ 8.30ಕ್ಕೆ ಕೆಲಸಕ್ಕೆ ಬಂದಾಗ ಯುವತಿ ಮೇಲೆ ಆರೋಪಿ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ