Asianet Suvarna News Asianet Suvarna News

ಈಗ ಯಾರಲ್ಲೂ ನಿಷ್ಠೆ ಇಲ್ಲ, ಎಲ್ಲರಿಗೂ ಅಧಿಕಾರ ಬೇಕು: ಕಾಂಗ್ರೆಸ್ ಒಳಜಗಳಕ್ಕೆ ಎಚ್‌ಡಿಕೆ ಲೇವಡಿ

ಎರಡನೇ ಬಾರಿ ಬಹಳ ಸಾಹಸ ಪಟ್ಟು ಮುಖ್ಯಮಂತ್ರಿ ಆಗಿದ್ದೀರಿ. ಎಲ್ಲ ಜನಗಳಿಂದ ಗೆದ್ದು ಈಗ ಸಮಾಜಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು

HD Kumaraswamy outraged agains CM Siddaramaiah at hassan rav
Author
First Published Dec 10, 2023, 11:55 AM IST

ಹಾಸನ (ಡಿ.10): ಎರಡನೇ ಬಾರಿ ಬಹಳ ಸಾಹಸ ಪಟ್ಟು ಮುಖ್ಯಮಂತ್ರಿ ಆಗಿದ್ದೀರಿ. ಎಲ್ಲ ಜನಗಳಿಂದ ಗೆದ್ದು ಈಗ ಸಮಾಜಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು

ಇಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಕೆ, ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಮಾಡುವ ಮೂಲಕ ಜನಗಳ ಕೈಗಳಲ್ಲಿ ತಮ್ಮ ಬಗ್ಗೆ ಕೆಟ್ಟ ಭಾವನೆ ನಿರ್ಮಾಣ ಮಾಡಿಕೊಳ್ಳುತಿದ್ದಾರೆ. ಜಾತಿ ಗಣತಿ ಏನಕ್ಕೆ ಬೇಕು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಈ ರಾಜ್ಯ ಉದ್ದಾರ ಆಗಬೇಕಾದ್ರೆ ಜಾತಿಗಣತಿ ಬೇಕಿಲ್ಲ. ಆರ್ಥಿಕ, ಶೈಕ್ಷಣಿಕ ಸಮೀಕ್ಷೆ  ಮಾಡುವ ಕೆಲಸ ಆಗಬೇಕು. ಅದನ್ನು ಬಿಟ್ಟು ಜಾತಿ ಜಾತಿಗಳ ನಡುವೆ ಹೊಡೆದಾಡಿಸುವ ಕೆಲಸ ಯಾಕೆ ಮಾಡ್ತೀರಿ ಎಂದು ಕಿಡಿಕಾರಿದರು.

ಕಲ್ಲಡ್ಕ ಭಟ್ಟರನ್ನ ನಾನು ಹಿಂದೆ ಟೀಕಿಸಿದ್ದೆ, ಆದರೆ ಅವರ ಶಿಕ್ಷಣ ಸಂಸ್ಥೆ ನನ್ನ ಕಣ್ತೆರಿಸಿದೆ : ಎಚ್‌ಡಿಕೆ

ಮುಸಲ್ಮಾನರಿಗೆ ಹತ್ತು ಸಾವಿರ ಕೋಟಿ ಕೊಡ್ತೀವಿ ಅಂತೀರಾ ಕೊಡಬೇಡಿ ಅನ್ನೊಲ್ಲ. ಆದರೆ ಹಿಂದುಗಳಿದ ಹಿಂದುಗಳಿಗೆ ಏನು ಕೊಡ್ತೀರಿ? ಏನು ಘೋಷಣೆ ಮಾಡಿದ್ದೀರಿ? ಇದರಲ್ಲೂ ಲೂಟಿ ಹೊಡಿಯೋದಿಕ್ಕೆ ಪ್ಲಾನ್ ಇದೆಲ್ಲಾ. ಇವರು ಹೇಗೆಲ್ಲ ಕಮಿಷನ್ ಹೊಡಿಯುತ್ತಾರೆಂಬುದು ನನಗೆ ಗೊತ್ತಿದೆ. ಹೀಗೆ ಹಣ ಹಂಚೋದಾದ್ರೆ ರೈತರಿಗೆ ಏನು ಕೊಡ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆ ಕೆಂಪಣ್ಣನವರೇ ಹೇಳಿದ್ದಾರಲ್ಲ ಇವರ ಸರ್ಕಾರದಲ್ಲೂ ಕಮಿಷನ್ ನಡೆಯುತ್ತಿದೆ ಅಂತಾ. ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ಮೇಲೆ ಕಮಿಷನ್ ಆರೋಪ ಮಾಡಿದ್ದರು. ಬೀದಿಬೀದಿಯಲ್ಲಿ ಪೇಸಿಎಂ ಸ್ಟಿಕರ್ ಅಂಟಿಸಿದ್ದರು. ಈಗ ಇವರು ಅಧಿಕಾರಕ್ಕೆ ಬಂದಮೇಲೆ ಉದ್ಧಾರ ಮಾಡಬೇಕಿತ್ತಲ್ಲ? ಆದರೆ ಮಾಡ್ತಿರೋದೇನು? ಎಂದು ಪ್ರಶ್ನಿಸಿದರು.

ಇನ್ನು ಬಿಕೆ ಹರಿಪ್ರಸಾದ್ ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಗುದ್ದಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿ.ಕೆ ಹರಿಪ್ರಸಾದ್ ಸಿದ್ದರಾಮಯ್ಯ ಮಾತ್ರ ಯಾಕೆ ಹೇಳ್ತೀರಿ. ಅಲ್ಲಿ ಇನ್ನೂ ಅನೇಕರಿದ್ದಾರೆ. ಮುಂದೆ ಎಲ್ಲಾ ಧ್ವನಿ ಹೊರ ಬರುತ್ತೆ. ಕೇಂದ್ರ ಸರ್ಕಾರದ ಬಳಿ ಹೋಗಿ 50 ಜನ ಕರ್ಕೊಂಡ್ ಬರ್ತೀವಿ ಎಂದು ಹೊರಟಿದ್ದಾರೆ. ಅವರ ಹಗರಣಗಳನ್ನ ಮುಚ್ಚಿ ಹಾಕಿಕೊಳ್ಳೋದಕ್ಕೆ ಹೋಗಿದ್ದಾರೆ. ಇಂದು ಹರಿಪ್ರಸಾದ್ ರನ್ನ ಹೊರತುಪಡಿಸಿ ಒಂದು ಸಮಾವೇಶ ಮಾಡ್ತಿಲ್ವಾ? ಏಕೆ ಮಾಡ್ತಿದ್ದಾರೆ ಎಲ್ಲವೂ ನನಗೆ ಗೊತ್ತಿದೆ  ಯಾರನ್ನೋ ಬಿಟ್ಟು ಐದಾರು ತಿಂಗಳು ರಿಲೀಫ್ ಕೊಡಿ ಅಂತಾ ಹೋಗಿದ್ದು ಗೊತ್ತು ಡಿಕೆಶಿ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ ಎಚ್‌ಡಿ ಕುಮಾರಸ್ವಾಮಿ.

ಲೋಕಸಭಾ ಚುನಾವಣೆಕ ಕಳೆಯಲಿ ಮುಂದೆ ಏನಾಗುತ್ತೋ ನೋಡೋಣ. ಮಹಾರಾಷ್ಟ್ರದಂತೆ ಇಲ್ಲಿ‌ ಯಾರೂ ಹುಟ್ಟಿಕೊಳ್ತಾರೊ ನೋಡೋಣ. ಈಗ ಯಾರಲ್ಲೂ ನಿಷ್ಠೆ ಇಲ್ಲ ಎಲ್ಲರಿಗೂ ಅಧಿಕಾರ ಮುಖ್ಯ ಅಷ್ಟೇ ಎಂದು ಲೇವಡಿ ಮಾಡಿದರು.

ಲೋಕಸಭೆಗೆ ದೊಡ್ಡಗೌಡ್ರು ಸ್ಪರ್ಧೆ?

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಎಚ್‌ಡಿಕೆ, 

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರ ನಿಲ್ಲಬೇಕು,ಬೇಡ ಎಂಬುದು ಪಕ್ಷದಲ್ಲಿ ತೀರ್ಮಾನ ಆಗುತ್ತೆ. ಹಾಸನದಲ್ಲಿ ಭವಾನಿಯವರೇ ನಿಲ್ತಾರೆ ಅಂದಿದ್ರಿ ಕೊನೆಗೆ ಬದಲಾವಣೆ ಆಗಲಿಲ್ವಾ? ಇನ್ನೂ ಆರು ತಿಂಗಳು ಸಮಯ ಇದೆ. ನಾವು ಎಲ್ಲೆಲ್ಲಿ ಸ್ಪರ್ಧಿಸುತ್ತೇವೆ ಎಲ್ಲಾ ಕಡೆ ಗೆಲ್ಲಬೇಕು ಅಷ್ಟೇ. ಆ ನಿಟ್ಟಿನಲ್ಲಿ ತೀರ್ಮಾನ ಆಗುತ್ತೆ ಎಂದ ಎಚ್‌ಡಿ ಕುಮಾರಸ್ವಾಮಿ.

ಕಲ್ಲಡ್ಕ ಪ್ರಭಾಕರ್ ಭಟ್ ಶಾಲಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿಶೇಷ ಅತಿಥಿ!

 ಆದರೆ ಇನ್ನೂ ದೇವೇಗೌಡರ ಸ್ಪರ್ಧೆ ಬಗ್ಗೆ ಗುಟ್ಟು ಬಿಟ್ಟುಕೊಡದ ಹೆಚ್ಡಿಕೆ.  ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ‌ ಎಂದಿದ್ದರು. ಆದರೆ ಹಾಸನದಲ್ಲಿ ಪ್ರಜ್ವಲ್ ಬದಲಾವಣೆ ಬಗ್ಗೆ ಹರಿದಾಡ್ತಿರುವ ವದಂತಿಗಳು. ಡಿ.1 ರಂದು ಪ್ರಜ್ವಲ್ ಹಾಸನದಿಂದ ಸ್ಪರ್ಧಿಸುತ್ತಾರೆ ಎಂದು ಘೋಷಣೆ ಮಾಡಿದ್ದ ಎಚ್‌ಡಿಕೆ. ಆದರೆ ಕೆಲ ಘಟನೆಗಳಿಂದ ಅವರ ಬದಲಾವಣೆ ಬಗ್ಗೆ ಗುಸು ಗುಸು ಕೇಳಿಬರುತ್ತಿದೆ. 

Latest Videos
Follow Us:
Download App:
  • android
  • ios