’ನಿಮ್ಮ ಶುಭ ಹಾರೈಕೆಗಳೇ ನನಗೆ ಶ್ರೀರಕ್ಷೆ. ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಿ ಊರಿನ ಅಂದ ಹಾಳು ಮಾಡಬೇಡಿ. ಪರಿಸರ ಕಾಳಜಿ ಮೆರೆದಲ್ಲಿ ಅದೇ ಅತ್ಯುತ್ತಮ ಸಂದೇಶ’- ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು[ಡಿ.16]: ಭಾನುವಾರ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಫ್ಲೆಕ್ಸ್‌, ಬ್ಯಾನರ್‌ ಅಳವಡಿಸದಿರುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ನಿಮ್ಮ ಶುಭ ಹಾರೈಕೆಗಳೇ ನನಗೆ ಶ್ರೀರಕ್ಷೆ. ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಿ ಊರಿನ ಅಂದ ಹಾಳು ಮಾಡಬೇಡಿ. ಪರಿಸರ ಕಾಳಜಿ ಮೆರೆದಲ್ಲಿ ಅದೇ ಅತ್ಯುತ್ತಮ ಸಂದೇಶ’ ಎಂದು ಹೇಳಿದ್ದಾರೆ.

ಭಾನುವಾರ 59ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ. ಜೆ.ಪಿ. ನಗರದ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಅವರು ಲಭ್ಯರಿರುವುದಿಲ್ಲ. ಹಿತೈಷಿಗಳು, ಅಭಿಮಾನಿಗಳು ಬೆಳಗಾವಿ ಅಧಿವೇಶನದ ನಂತರ ಅವರನ್ನು ಭೇಟಿ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.