Asianet Suvarna News Asianet Suvarna News

ರಾಯಚೂರಿನಲ್ಲಿ ನಡೆದ ಜೆಡಿಎಸ್‌ ಪಂಚರತ್ನ ಯಾತ್ರೆಗೆ ಸಿಂಧನೂರಿನಲ್ಲಿ ಅದ್ಧೂರಿ ತೆರೆ!

ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಳೆದ 57 ದಿನಗಳಿಂದ ಪಂಚರತ್ನ ಯಾತ್ರೆ ನಡೆಯುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಕಳೆದ 6 ದಿನಗಳಿಂದ ನಡೆದ ಪಂಚರತ್ನ ಯಾತ್ರೆಗೆ ಸಿಂಧನೂರಿನಲ್ಲಿ ಅದ್ಧೂರಿಯಾಗಿ ತೆರೆ ಬಿದಿತ್ತು.  

HD Kumaraswamy JDS Pancharatna Yatra in Raichur District gvd
Author
First Published Jan 30, 2023, 12:30 AM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು (ಜ.30): ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಳೆದ 57 ದಿನಗಳಿಂದ ಪಂಚರತ್ನ ಯಾತ್ರೆ ನಡೆಯುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಕಳೆದ 6 ದಿನಗಳಿಂದ ನಡೆದ ಪಂಚರತ್ನ ಯಾತ್ರೆಗೆ ಸಿಂಧನೂರಿನಲ್ಲಿ ಅದ್ಧೂರಿಯಾಗಿ ತೆರೆ ಬಿದಿತ್ತು.  ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡ ಮಾಜಿ ಸಿಎಂ ಎಚ್‌ಡಿಕೆಗೆ ಭತ್ತ, ಹತ್ತಿ ಹಾಗೂ ಭತ್ತಕಾಳಿನ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಿದ್ರು. ಇದೇ ವೇಳೆಗೆ ಏಷ್ಯಾನೆಟ್ ಸುವರ್ಣನ್ಯೂಸ್‌ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಹಾಸನದಲ್ಲಿ ಯಾವುದೇ ಟಿಕೆಟ್ ಗೊಂದಲವಿಲ್ಲ. ರೇವಣ್ಣ ಅವರು ಪಕ್ಷದ ಹಿತದೃಷ್ಟಿಯಿಂದ ಅವರ  ಅನುಭವದಲ್ಲಿ ಪಕ್ಷದ ಗೊಂದಲವನ್ನ ನಿರ್ವಹಣೆ ‌ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ಗೌರವ ತರುವ ನಿಟ್ಟಿನಲ್ಲಿ ರೇವಣ್ಣ ಕಾರ್ಯ ನಿರ್ವಹಿಸಿದ್ದಾರೆ. 

ರೇವಣ್ಣ ಅವರು ಪಕ್ಷಕ್ಕೆ ಅವರದೇ ದೇಣಿಗೆ ಇದೆ. ಅದರ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಗೊಂದಲ ಸೃಷ್ಟಿಸುವರಿಗೆ ಇತಿಶ್ರೀ ಹಾಡಿದ್ದಾರೆ. ನಾವು ಯಾವುದೇ ವಿಷಯದಲ್ಲಿ ಒಟ್ಟಾರೆ ಕುಳಿತು ತೀರ್ಮಾನ ಮಾಡುತ್ತೇವೆ. ಈ ನನ್ನ ಮತ್ತು ರೇವಣ್ಣ ನಡುವೆ ಯಾವುದೇ ರೀತಿ ಯಾರು ಭಿನ್ನಾಭಿಪ್ರಾಯ ತರಲು ಸಾಧ್ಯವಿಲ್ಲ. ಅದರಿಂದ ಹಾಸನದ ಟಿಕೆಟ್ ವಿಚಾರವೂ ಅಷ್ಟೇ ಅಲ್ಲ, ಇನ್ನುಳಿದ ಟಿಕೆಟ್ ಹಂಚಿಕೆ ಕೂಡ ಸಮಾನ ಮನಸ್ಕರು ಕುಳಿತು ಚರ್ಚೆ ಮಾಡಿ ಫೈನಲ್ ಮಾಡುತ್ತೇವೆ ಎಂದ ಎಚ್ ಡಿಕೆ ಸ್ಪಷ್ಟನೆ ನೀಡಿದರು. ಇನ್ನೂ ಇದೇ ವೇಳೆ ರಾಯಚೂರು ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರದಲ್ಲಿ ನಾನು ಸಂಚಾರ ಮಾಡಿದ್ದೇನೆ. ಆರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ಜೊತೆಗೆ ರಾಜ್ಯದ ‌ಜನತೆ ಮೇಲೆ ವಿಶ್ವಾಸವಿದೆ. ರಾಜ್ಯದ ಜನತೆ ಜೆಡಿಎಸ್ ಗೆ ಆರ್ಶಿವಾದ ಮಾಡುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಾವಲುಗಾರನಾಗಿ ಸೇವೆ: ಎಚ್‌.ಡಿ.ಕುಮಾರಸ್ವಾಮಿ

ನನ್ನ ಭೇಟಿಗೆ ಶ್ರೀಮಂತರು ಬರಲ್ಲ: ರಾಯಚೂರು ಜಿಲ್ಲೆಯಲ್ಲಿ ಕಳೆದ 6 ದಿನಗಳಿಂದ ನಡೆದ ಪಂಚರತ್ನ ಯಾತ್ರೆಗೆ ಅದ್ಧೂರಿಯಾಗಿ ತೆರೆ ಬಿದ್ದಿದೆ.‌ ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ. ರಾಯಚೂರು ಜಿಲ್ಲೆಯಲ್ಲಿ 6ನೇ ದಿನದ ಕೊನೆಯ ಕಾರ್ಯಕ್ರಮ ಇದಾಗಿದೆ.  ಸಾವಿರಾರು ಜನರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯಲ್ಲಿ  ಪಂಚರತ್ನ ಯಾತ್ರೆ ಕಾರ್ಯಕ್ರಮ ಯಶಸ್ವಿ ಕಂಡಿದೆ. ಸಿಂಧನೂರು ವಿಧಾನಸಭಾ ಶಾಸಕ ವೆಂಕಟರಾವ್ ನಾಡಗೌಡ ಅವರು ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಸೇವೆಯ ಬದ್ಧತೆಯನ್ನು ಹೊಂದಿದ್ದಾರೆ. 

ಶಾಸಕರು ಅಂದ್ರೆ ವೆಂಕಟರಾವ್ ನಾಡಗೌಡರ ತರ ಇರಬೇಕು. ಶಾಸಕ  ವೆಂಕಟರಾವ್ ನಾಡಗೌಡ್ರನ್ನ ಶಾಸಕರನ್ನಾಗಿ ಆಯ್ಕೆ ಮಾಡಿ. ಸಿಂಧನೂರು ತಾಲೂಕನ್ನ ಜಿಲ್ಲೆಯನ್ನ ಪರಿವರ್ತನೆ ‌ಮಾಡಿದ್ದಾರೆ. ನನ್ನ ಭೇಟಿಗೆ ಯಾರು ಶ್ರೀಮಂತರು ಬರಲ್ಲ, ಬಡವರ ನನ್ನ ಬಳಿ ಬರುತ್ತಾರೆ. ಈ ಎಲ್ಲವನ್ನೂ ಗಮನಿಸಿ ನಾನು ಪಂಚರತ್ನ ಯಾತ್ರೆ ಶುರು ‌ಶುರು  ಮಾಡಿದ್ದಾನೆ. ಈ ಯಾತ್ರೆಗೆ ಇಂದಿಗೆ 57ನೇ ದಿನ ನಡೆಯುತ್ತಿದೆ. ಪಂಚರತ್ನ ಯಾತ್ರೆ ಹೋದ ಕಡೆ ಸಾಕಷ್ಟು ಜನರು ಬೆಂಬಲ ಸೂಚಿಸಿದ್ದಾರೆ. ನಾನು ಮಾಜಿ ಪ್ರಧಾನಿಯವರ ಮಗ ಇರಬಹುದು. ಆದ್ರೆ ನಾನು ನಿಮ್ಮಂತೆ ಸಾಮಾನ್ಯ ವ್ಯಕ್ತಿ ತರ ಬದುಕು ನಡೆಸಿದ್ದಾನೆ. ನನ್ನ ಸಂಪಾದನೆ ನಿಮ್ಮಂತ ಜನರ ಸಂಪಾದನೆ ಆಗಿದೆ‌. ನನಗೂ ಎರಡೂ ಭಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ.  ಆದ್ರೆ ನಾನು ಆರೋಗ್ಯವನ್ನ ಲೆಕ್ಕಿಸದೆ ದಿನಕ್ಕೆ 18 ಗಳ ಕಾಲ  ಓಡಾಟ ನಡೆಸಿದ್ದೇನೆ.

ಬಡವರ ಬದುಕು ಹಸನ ಮಾಡಲು ಪಂಚರತ್ನ ಯಾತ್ರೆ: ಪಂಚರತ್ನ ಯಾತ್ರೆ ಶುರುವಾಗಿ 57 ದಿನಗಳು ಆಗಿವೆ. ಪಂಚರತ್ನ ಯಾತ್ರೆ ಹೋದ ಕಡೆ ಭರ್ಜರಿ ಸ್ವಾಗತ ಸಿಗುತ್ತಿದೆ. ಆದ್ರೆ ನನಗೆ ಇದರ ಬಗ್ಗೆ ಸಮಾಧಾನವಿಲ್ಲ. ಏಕೆಂದರೆ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕದ ಜನರ ಬದುಕು ಮತ್ತು ಜೀವನ ನೋಡಿದ್ರೆ ಸಂಕಷ್ಟ ನೋಡಿ ಈ ಯಾತ್ರೆ ಮಾಡಲು ಹೊರಟ್ಟಿದ್ದೇನೆ. ಪಂಚರತ್ನ ಯಾತ್ರೆ ಜಾರಿಗೆ ನನಗೆ ಸಂಪೂರ್ಣ ಬಹುಮತ ‌ನೀಡಿ.ಆಗ ನಿಮ್ಮ ಬದುಕು ಹಸನ ಮಾಡುವ ಯೋಜನೆಗಳು ನಾನು ತರುತ್ತೇನೆ. ಮೊನ್ನೆ ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಯ ಮೆರವಣಿಗೆ ನಡೆದಿತ್ತು. ಸಾವಿರಾರು ಜನರ ಮಧ್ಯೆ ಬಂದ ಯುವಕನೊಬ್ಬ ಪತ್ರ ಕೊಟ್ಟು ತನ್ನ ನೋವು ಆ ಪತ್ರದಲ್ಲಿ ಬರೆಯಲಾಗಿತ್ತು. ಏನಿತ್ತು ಅಂದ್ರೆ ನನಗೆ ಕ್ಯಾನ್ಸರ್ ಕಾಯಿಲೆ ಇದೆ. ಕ್ಯಾನ್ಸರ್‌ ಕಾಯಿಲೆಗೆ 8 ಲಕ್ಷ ರೂಪಾಯಿ ಸಾಲವನ್ನ ಮಾಡಿದ್ದೇನೆ. ನನಗೆ ಸೂಕ್ತವಾದ ಚಿಕಿತ್ಸೆ ಕೊಡಿಸಲು ಸಹಾಯ ಮಾಡಿ ಎಂದು ಪತ್ರ ಬರೆದರು. 

ಹತ್ತಿಗೆ ಸೂಕ್ತ ಬೆಂಬಲ ಬೆಲೆ ಸಿಕ್ಕಿಲ್ಲ: ರಾಯಚೂರಿನ ಪ್ರಮುಖ ಬೆಳೆಯಲ್ಲಿ ಹತ್ತಿ ಬೆಳೆ ಕೂಡ ಒಂದಾಗಿದೆ. ಸಾವಿರಾರು ರೈತರು ಲಕ್ಷಾಂತರ ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದಾರೆ. ಆದ್ರೆ ಬೆಳೆಗೆ ಸೂಕ್ತ ಬೆಲೆ ಸಿಗದೇ ಕಂಗಲಾಗಿದ್ದಾರೆ. ಇಂತಹ ರೈತರಿಗೆ ನ್ಯಾಯ ಒದಗಿಸಬೇಕು ಎಂಬ ಉದ್ದೇಶದಿಂದ ನಾನು ಪಂಚರತ್ನ ಯಾತ್ರೆ ಶುರು‌ ಮಾಡಿದ್ದೇನೆ. ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ 24 ಗಂಟೆ ವಿದ್ಯುತ್ ನೀಡುತ್ತೇವೆ. ರೈತರ ಸಾಲ ಮನ್ನಾ‌ ಮಾಡಲು ಕುಮಾರಸ್ವಾಮಿ ದುಡ್ಡು ಎಲ್ಲಿಂದ ತರುತ್ತಾನೆ ಅಂದ್ರು.ಸ್ತ್ರೀ ಶಕ್ತಿ ಯೋಜನೆ ಮಹಿಳೆಯರ ಸಾಲವನ್ನ ಮನ್ನಾ ಮಾಡ್ತೀನಿ.
ವಿಧವೆ ತಾಯಂದಿರಿಗೆ 2 ಸಾವಿರ ರೂಪಾಯಿ ಏರಿಕೆ ಮಾಡುವ ಚಿಂತನೆಯಿದೆ. 

Pancharatna Rathayatra: ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಡಮಾರ್‌: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್ ಮತ್ತು ಬಿಜೆಪಿಯಿಂದ ರೈತರಿಗೆ ‌ನ್ಯಾಯ ಸಿಗಲ್ಲ. ನಮ್ಮ ಪಕ್ಷದ ಮೇಲೆ ನೀವು ಒಮ್ಮೆ ನಂಬಿಕೆಯಿಡಿ.ಜನತಾದಳ ಮೇಲೆ ನಂಬಿಕೆ ಇಟ್ಟರೆ ನಿಮ್ಮ ‌ಕೆಲಸ ಆಗುತ್ತೆ. ಬಿಜೆಪಿ ಸರಕಾರದಿಂದ 2 ವರ್ಷದಿಂದ ಸೈಕಲ್ ಕೊಟ್ಟಿಲ್ಲ. ನಾನು ಪಂಚರತ್ನ ಯಾತ್ರೆ ಹೋದಾಗ ಸಿರವಾರ ತಾಲೂಕಿನ ಹಳ್ಳಿಹೊಸೂರು ಗ್ರಾಮಕ್ಕೆ ಹೋದಾಗ ಹಳ್ಳ ಮಕ್ಕಳು  ಸೈಕಲ್ ಕೊಡಲಿಲ್ಲ, ಬಸ್ ವ್ಯವಸ್ಥೆ ಇಲ್ಲವೆಂದು ಕಣ್ಣೀರು ಇಟ್ಟರು. ಆ ಮಕ್ಕಳ ಕಣ್ಣೀರು ಒರೆಸಬೇಕಾಗಿದೆ.  ನೀವೂ ಆರ್ಶಿವಾದ ಮಾಡಿ ಮುಂದಿನ ಸಲ ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತದೆ. ಇದನ್ನ ಯಾರೇ ಅಡ್ಡಿಪಡಿಸಿದರು, ಅದರಿಂದ ಏನು ಆಗಲ್ಲ. ಬಿಜೆಪಿ ಆಡಳಿತದಿಂದ ಬೇಸತ್ತು ಹೋಗಿದ್ದೇವೆ, ಜನರಯ ಬೀದಿಗೆ ಬಂದಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ‌ನಡೆಸಿದರು.

Follow Us:
Download App:
  • android
  • ios