ಕುಮಾರಸ್ವಾಮಿ ಆಲೂಗೆಡ್ಡೆಯಿಂದ ಶ್ರೀಮಂತರಾದವರು|  ಶೋಭಾ ಕರಂದ್ಲಾಜೆ ತಿರುಗೇಟು

ಮೈಸೂರು[ಅ.09]: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಆಲೂಗೆಡ್ಡೆಯಿಂದ ಶ್ರೀಮಂತರಾದವರು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

Add Asianetnews Kannada as a Preferred SourcegooglePreferred

ಸಂಸದೆ ಶೋಭಾ ಕರಂದ್ಲಾಜೆಗೆ ರೈತರ ಕಷ್ಟ ಏನು ಗೊತ್ತು ಎಂದು ಟೀಕಿಸಿದ್ದ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ ಅವರು, ನಮ್ಮ ಊರು ಯಾವುದೆಂದು ಬಂದು ನೋಡಲಿ. ಆಗ ರೈತರು ಯಾರು? ಯಾರು ರೈತರಲ್ಲ ಎಂದು ತಿಳಿಯುತ್ತದೆ ಎಂದು ಟಾಂಗ್‌ ನೀಡಿದರು.

ಸಂಸದರ ಮೇಲಿನ ಟೀಕೆಗಳಿಗೆ ನಮ್ಮ ಬಳಿ ಉತ್ತರ ಇಲ್ಲ. ಕೆಲಸ ಮಾಡುವುದೇ ನಮ್ಮ ಗುರಿ. ನೆರೆ ಪರಿಹಾರ ಈಗಾಗಲೇ ಬಿಡುಗಡೆಯಾಗಿದೆ. ಎರಡನೇ ಕಂತು ಮತ್ತು ಮೂರನೇ ಕಂತು ಸಹ ಬಿಡುಗಡೆಯಾಗುತ್ತದೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.