Asianet Suvarna News Asianet Suvarna News

Operation Ganga: ಉಕ್ರೇನಿಂದ ವಿದ್ಯಾರ್ಥಿಗಳ ತರಲು ಕೇಂದ್ರದ ಶ್ರಮ: ದೇವೇಗೌಡ ಮೆಚ್ಚುಗೆ

*  ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರುವ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ
*  ನಮ್ಮ ಪ್ರಧಾನಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಒಳ್ಳೆಯ ಸ್ನೇಹಿತರು
*  ಪ್ರಧಾನಿಯವರು ಎರಡೂ ದೇಶಗಳ ನಡುವೆ ಮಾತನಾಡುವ ಯತ್ನ ಮಾಡಿದ್ದಾರೆ

HD Devegowda Praise to Central Government For Bring Back Indian Students From Ukraine grg
Author
Bengaluru, First Published Mar 3, 2022, 8:02 AM IST

ಹಾಸನ(ಮಾ.03): ಉಕ್ರೇನ್‌ನಲ್ಲಿ(Ukraine) ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ(Indian Students) ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ(HD Devegowda) ಅವರು, ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿರುವ ರಕ್ಷಣಾ ಕಾರ್ಯದ ಬಗ್ಗೆ ಪ್ರಶಂಸಿಸಿದ್ದಾರೆ.

ಮಂಗಳವಾರ ರಾತ್ರಿ ತಮ್ಮ ಹುಟ್ಟೂರು ಹರದನಹಳ್ಳಿಗೆ ಭೇಟಿ ನೀಡಿ ತಮ್ಮ ಆರಾಧ್ಯ ದೈವ ಶಿವನಿಗೆ(Lord Shiva) ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರುವ ಬಗ್ಗೆ ಪ್ರಧಾನಿಯವರಿಗೂ ಪತ್ರ ಬರೆದಿದ್ದೇನೆ. ನಿನ್ನೆ ಟ್ವೀಟ್‌ ಕೂಡ ಮಾಡಿದ್ದೇನೆ ಎಂದರು.

Russia-Ukraine War: ಉಕ್ರೇನ್‌ ತೊರೆಯಲು ಸಿಕ್ಕ ಸಿಕ್ಕ ವಾಹನ ಹತ್ತುತ್ತಿದ್ದಾರೆ ಕನ್ನಡಿಗರು..!

ನಮ್ಮ ಪ್ರಧಾನಿ(Narendra Modi) ಮತ್ತು ರಷ್ಯಾ(Russia) ಅಧ್ಯಕ್ಷ ಪುಟಿನ್‌(Vladimir Putin) ಒಳ್ಳೆಯ ಸ್ನೇಹಿತರು. ಹಾಗಾಗಿ ಸಾಧ್ಯವಾದಷ್ಟು ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡುತ್ತಿದ್ದಾರೆ. ಸರ್ಕಾರ ಸುಮ್ಮನೇ ಕೂತಿಲ್ಲ, ಅಲ್ಲಿನ ಸರ್ಕಾರಗಳ ಜೊತೆ ಮಾತನಾಡಿದೆ. ಪ್ರಧಾನಿಯವರು ಎರಡೂ ದೇಶಗಳ ನಡುವೆ ಮಾತನಾಡುವ ಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಈವರೆಗೆ 3389 ಭಾರತೀಯರ ಏರ್‌ಲಿಫ್ಟ್‌!

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ಆಪರೇಷನ್‌ ಗಂಗಾ’ ಕಾರ್ಯಾಚರಣೆ ನಡೆಸುತ್ತಿರುವ ಭಾರತ ಸರ್ಕಾರ, ಬುಧವಾರವೂ ತನ್ನ ಅವಿಶ್ರಾಂತ ಕಾಯಕ ಮುಂದುವರಿಸಿದೆ. ಈವರೆಗೆ 15 ವಿಮಾನಗಳಲ್ಲಿ 3389 ಜನರನ್ನು ಕರೆತರಲಾಗಿದೆ ಹಾಗೂ ಇನ್ನು ಕೆಲವು ದಿನಗಳಲ್ಲಿ 31 ವಿಮಾನದಲ್ಲಿ 6300 ಜನರನ್ನು ಕರೆತರುವ ಮಹದೋದ್ದೇಶ ಇರಿಸಿಕೊಂಡಿದೆ.ಯುದ್ಧಕ್ಕೂ ಮೊದಲು ಭಾರತ ಸರ್ಕಾರ ಸೂಚನೆ ನೀಡಿ ‘ಬೇಗ ಉಕ್ರೇನ್‌ನಿಂದ ಹೊರಡಬೇಕು’ ಎಂದು ಭಾರತೀಯರಿಗೆ ಸೂಚನೆ ನೀಡಿತ್ತು ಹಾಗೂ ಯುದ್ಧದ ಬಳಿಕ ವಿಮಾನದ ಮೂಲಕ ರಕ್ಷಣಾ ಕಾರಾರ‍ಯಚರಣೆ ನಡೆಸಿದೆ. ಈ ಎರಡೂ ಕಾರ್ಯಗಳಿಂದ ಈವರೆಗೆ ಉಕ್ರೇನ್‌ನಲ್ಲಿದ್ದ 20 ಸಾವಿರ ಜನರ ಪೈಕಿ ಶೇ.60ರಷ್ಟುಜನರು (ಅಂದಾಜು 12 ಸಾವಿರ ಜನ) ಭಾರತಕ್ಕೆ ಮರಳಿದ್ದಾರೆ ಎಂದು ಖುದ್ದು ಕೇಂದ್ರ ಸರ್ಕಾರ ಹೇಳಿದೆ.

15 ವಿಮಾನದಲ್ಲಿ ಈವರೆಗೆ 3389 ಜನರು ವಾಪಸ್‌: 

ಈವರೆಗೆ 15 ವಿಮಾನಗಳಲ್ಲಿ 3,389 ಜನರನ್ನು ಭಾರತಕ್ಕೆ ಕರೆತಂದಿದೆ. ಕಾರಾರ‍ಯಚರಣೆ ಆರಂಭವಾದ ಮೊದಲ ದಿನ ಶನಿವಾರ 219 ಮಂದಿ, ಭಾನುವಾರ 688 ಮಂದಿ, ಸೋಮವಾರ 489, ಮಂಗಳವಾರ 616 ಮತ್ತು ಬುಧವಾರ ಒಂದೇ ದಿನ 6 ವಿಮಾನಗಳಲ್ಲಿ 1377 ಮಂದಿ ಭಾರತಕ್ಕೆ ತಲುಪಿದ್ದಾರೆ. ರೊಮೆನಿಯಾ, ಪೋಲಂಡ್‌, ಹಂಗೇರಿ ಸೇರಿದಂತೆ ಉಕ್ರೇನ್‌ ನೆರೆಯ ದೇಶಗಳಿಂದ ಏರಿಂಡಿಯಾ, ಇಂಡಿಗೋ, ಸ್ಪೈಸ್‌ ಜೆಟ್‌ ಮತ್ತು ಭಾರತೀಯ ವಾಯುಪಡೆಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

Russia-Ukraine War: ಭಾರತಕ್ಕೆ ಜೀವಂತವಾಗಿ ಮರಳುವ ಆಸೆಯನ್ನೇ ಬಿಟ್ಟಿದ್ದೇವೆ: ಕನ್ನಡಿಗನ ಹತಾಶ ಸ್ಥಿತಿ..!

ಮುಂದಿನ 31 ವಿಮಾನದಲ್ಲಿ 6300 ಜನ: 

ಮಾರ್ಚ್ 8ರ ವರೆಗೂ ಈ ಕಾರಾರ‍ಯಚರಣೆ ಮುಂದುವರೆಯಲಿದ್ದು, 31 ವಿಮಾನಗಳು ಮುಂದಿನ ದಿನಗಳಲ್ಲಿ 6,300 ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತರಲಿವೆ. ರೊಮೇನಿಯಾದ ಬುಕಾರೆಸ್ಟ್‌ನಿಂದ 21 ವಿಮಾನಗಳು, ಹಂಗೇರಿಯ ಬುಡಾಪೆಸ್ಟ್‌ನಿಂದ 4, ಪೋಲಂಡ್‌ನ ಝೇಜವ್‌ನಿಂದ 4, ಸ್ಲೋವೋಕಿಯಾದ ಕೋಶಿಟ್ಸದಿಂದ 1 ವಿಮಾನ ಕಾರ್ಯಾಚರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಒಂದು ಬಾರಿಗೆ ಏರಿಂಡಿಯಾ ಎಕ್ಸ್‌ಪ್ರೆಸ್‌ ಮತ್ತು ಸ್ಪೈಸ್‌ಜೆಟ್‌ ವಿಮಾನಗಳು 180 ಜನರನ್ನು ಹಾಗೂ ಏರಿಂಡಿಯಾ 250 ಮತ್ತು ಇಂಡಿಗೋ 216 ಜನರನ್ನು ಕರೆತರಲಿವೆ.

ವಾಯುಪಡೆ ವಿಮಾನಗಳು: 

ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗಾಗಿ ಹಾಗೂ ಉಕ್ರೇನ್‌ಗೆ ಮಾನವೀಯ ನೆರವನ್ನು ಹೊತ್ತುಕೊಂಡು ವಾಯುಪಡೆಯ ಎ ಸಿ-17 ಗ್ಲೋಬ್‌ ಮಾಸ್ಟರ್‌ ವಿಮಾನ ಬುಧವಾರ ಮುಂಜಾನೆ ನವದೆಹಲಿಯಿಂದ ಹೊರಟಿದೆ. ಇಂಥ ಒಟ್ಟು 4 ಗ್ಲೋಬ್‌ ಮಾಸ್ಟರ್‌ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಹಾಗೂ ವಿಮಾನ ಮರಳಿ ಬರುವಾಗ ರೊಮೇನಿಯಾ ಗಡಿಗೆ ತಲುಪಿರುವ 800 ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆತರಲಿವೆ. ರಷ್ಯಾ ದಾಳಿಯಿಂದ ಸಂಕಷ್ಟಕ್ಕೀಡಾಗಿರುವ ಉಕ್ರೇನ್‌ಗೆ ಮೊದಲ ಬಾರಿ ಭಾರತ ಮಾನವೀಯ ನೆರವನ್ನು ನೀಡಿದೆ. ಔಷಧ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಭಾರತ ಉಕ್ರೇನ್‌ಗೆ ಕಳುಹಿಸಿಕೊಟ್ಟಿದೆ.
 

Follow Us:
Download App:
  • android
  • ios