ಪ್ರಜ್ವಲ್ ರೇವಣ್ಣ ತಾನೇ ಶರಣಾದರೂ, ಪೊಲೀಸರೇ ಕರೆತಂದರೂ ಅರೆಸ್ಟ್ ಆಗುವುದು ಖಚಿತ; ಗೃಹ ಸಚಿವ ಪರಮೇಶ್ವರ
ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ತಾನೇ ಬಂದು ಶರಣಾದರೂ, ನಮ್ಮ ಪೊಲೀಸರೇ ಕರೆದುತಂದರೂ ಅರೆಸ್ಟ್ ಆಗುವುದು ಖಚಿತವೆಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದರು.
ತುಮಕೂರು (ಮೇ 27): ಅಶ್ಲೀಲ ವಿಡಿಯೋ ಕೇಸ್ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಮೇ 31ಕ್ಕೆ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಇನ್ನು ಪ್ರಜ್ವಲ್ ಅವರೇ ಸ್ವತಃ ಎಸ್‌ಐಟಿ ಮುಂದೆ ಶರಣಾಗುತ್ತೇನೆ ಎಂದು ಹೇಳಿದ್ದರೂ ಅರೆಸ್ಟ್ ಆಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವೇಳೆ, ಪ್ರಜ್ವಲ್ ರೇವಣ್ಣ ಬಂದ ತಕ್ಷಣವೇ ಬಂಧನ ಮಾಡ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅದನ್ನ ಕಾದು ನೋಡಬೇಕು. ಅವರೇ ಶರಣಾಗ್ತಿನಿ ಅಂತ ಹೇಳಿದ್ದಾರೆ. ಆದರೆ, ಅರೆಸ್ಟ್ ಅಂತೂ ಆಗೇ ಆಗ್ತಾರೆ. ಅರೆಸ್ಟ್ ಮಾಡೋಕೆ ಈಗಾಗಲೇ ವಾರಂಟ್ ಇಶ್ಯೂ ಆಗಿದೆ. ಬ್ಲೂ ಕಾರ್ನರ್ ನೋಟಿಸ್ ಕೊಟ್ಟು, ವಾರಂಟ್ ಕೊಟ್ಟಿರೋದ್ರಿಂದ ಅರೆಸ್ಟ್ ಮಾಡಲೇಬೇಕು. ಈಗ ಅವರೇ ಶರಣಾಗ್ತಾರೆ ಅನ್ನುವಾಗ, ಅದನ್ನ ಯಾವ ರೀತಿಯಾಗಿ ಎಸ್ ಐಟಿ ಅವರು ತೆಗೆದುಕೊಳ್ತಾರೆ ನೋಡಬೇಕು. ಯಾವುದರಲ್ಲಿ ತಪ್ಪಿದೆ, ಯಾವುದರಲ್ಲಿ ತಪ್ಪಿಲ್ಲ ಎಂದು ಅವರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
Big Breaking: ಹಾಸನ ಅಶ್ಲೀಲ ವಿಡಿಯೋ ಕೇಸ್ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ
ಪ್ರಜ್ವಲ್ ರೇವಣ್ಣ ವಿಡಿಯೋ ಮೂಲಕ ಇದೇ ತಿಂಗಳ 31 ರಂದು ಬೆಳಗ್ಗೆ 10 ಗಂಟೆಗೆ ಎಸ್ ಐಟಿ ಗೆ ಬರ್ತಿನಿ ಎಂದಿದ್ದಾರೆ. ಅವರಿಗೆ ಸಹಕಾರ ಮಾಡ್ತಿನಿ ಅಂತ ಹೇಳ್ತಿರೋದನ್ನ ನಾನು ಸ್ವಾಗತ ಮಾಡುತ್ತೇನೆ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇಡೀ ಜಗತ್ತೆ ಮಾತನಾಡುವ ಸಂದರ್ಭದಲ್ಲಿ ಅವರನ್ನ ಕರೆತರುವ ಪ್ರಯತ್ನವನ್ನ ಎಲ್ಲ ರೀತಿ ನಡೆಯುತ್ತಿತ್ತು. ಪ್ರಧಾನಮಂತ್ರಿಗಳಿಗೆ, ಮುಖ್ಯಮಂತ್ರಿಗಳು ಎರಡು ಬಾರಿ ಪತ್ರ ಬರೆದಿದ್ದರು. ಸಿಬಿಐಗೆ ರಿಕ್ವೆಸ್ಟ್ ಮಾಡಿಕೊಂಡಿದ್ದೆವು. ಇಂಟರ್ ಪೋಲ್ ಗೆ ರಿಕ್ವೆಸ್ಟ್ ಮಾಡಿಕೊಂಡಿದ್ವಿ, ಮನವಿ ಮಾಡಿದ್ವಿ. ಬ್ಲೂ ಕಾರ್ನರ್ ನೋಟಿಸ್ ಕೂಡಾ ಇಶ್ಯೂ ಮಾಡಿದ್ದರು. ಆ ಪ್ರಕ್ರಿಯೆ ಕೂಡಾ ನಡೆಯುತ್ತಿತ್ತು.
ಅವರ ಡಿಪ್ಲೋಮೆಟಿಕ್ ಪಾಸ್ ಪೊರ್ಟ್ ರದ್ದು ಮಾಡಿ, ಅವರನ್ನ ಕರೆತರೋದಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡ್ಬೇಕು ಅಂತ ಮನವಿ ಮಾಡಿದ್ದೆವು. ಪಾಸ್ ಪೊರ್ಟ್ ರದ್ದು ಪ್ರಕ್ರಿಯೆ ಪ್ರಾರಂಭ ಮಾಡಿದ್ದೀವಿ ಅಂತ ಕೇಂದ್ರದವರು ಹೇಳಿದ್ದರು. ಈ ಮಧ್ಯದಲ್ಲಿ ಅವರು ಬರ್ತಿವಿ ಅಂತ ಹೇಳಿರೋದನ್ನ ನಾವು ಸ್ವಾಗತ ಮಾಡ್ತಿವಿ. ಎಸ್ ಐಟಿ ಬಳಿ ಏನ್ ಎವಿಡೆನ್ಸ್, ಏನ್ ಮಾಹಿತಿಗಳಿವೆ ಅದರ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ ಎಂದು ತಿಳಿಸಿದರು.
ಪ್ರಜ್ವಲ್ ವಿದೇಶಕ್ಕೆ ಹೋಗುವ ವಿಚಾರದಲ್ಲಿ ತಪ್ಪಿಲ್ಲ ಅಂತ ಹೇಳಿರಬಹುದು. ಅವರು ಹೇಳಿದ ಹಾಗೆ ಅಲ್ಲಿಯತನಕ ಯಾವುದೇ ಕಂಪ್ಲೆಂಟ್ ಆಗಿರಲಿಲ್ಲ. ಕಂಪ್ಲೆಂಟ್ ಆದ ಮೇಲೆ ಎಸ್ ಐಟಿ ಫಾರ್ಮೆಷನ್ ಆದ ಮೇಲೆ ಮುಂದಿನ ವಿಚಾರಗಳು ಬೆಳಕಿಗೆ ಬಂದಿದ್ದಾವೆ. ವಾರಂಟ್ ಇಶ್ಯೂ, ಬ್ಲೂ ಕಾರ್ನರ್ ನೋಟಿಸ್, ಏನು ಮಾಹಿತಿ ಇಲ್ಲದೇ ಇಶ್ಯೂ ಮಾಡಲಿಕ್ಕೆ ಆಗಲ್ಲ. ಅವರು ಏನ್ ಹೇಳಿಕೆ ಕೋಡ್ತಾರೋ ಕೊಡಲಿ. ಎಸ್ಐಟಿ ಅವರು ಏನ್ ಕ್ರಮ ತಗೋಬೇಕು ಅನ್ನೋದನ್ನ ಅವರು ಮುಂದಿನ ಕ್ರಮ ಕೈಗೊಳ್ತಾರೆ. ಒಂದು ದೇಶದಿಂದ ಒಬ್ಬರನ್ನ ಕರೆದುಕೊಂಡು ಬರೋದು ಅಷ್ಟು ಸುಲಭವಲ್ಲ. ಅದಕ್ಕೆ ಒಂದಿಷ್ಟು ಪ್ರೊಸೆಸ್ ಇರುತ್ತೆ ಎಂದರು.
ಡ್ರಗ್ಸ್ ವಿಚಾರಕ್ಕೆ ಉಡ್ತಾ ಬೆಂಗಳೂರು ಎಂದರೆ ಸಹಿಸೊಲ್ಲ; ಗೃಹ ಸಚಿವ ಪರಮೇಶ್ವರ ಎಚ್ಚರಿಕೆ
ಪ್ರಜ್ವಲ್‌ಗೆ ಡಿಪ್ಲೊಮ್ಯಾಟಿಕ್ ಪಾಸ್ ಪೊರ್ಟ್ ಕೊಟ್ಟಿದ್ದು ಕೇಂದ್ರ ಸರ್ಕಾರ. ಎಲ್ಲ ಎಂ.ಪಿ ಗಳಿಗೆ ಸಾಮಾನ್ಯವಾಗಿ ಕೊಡ್ತಾರೆ. ಅದನ್ನ ಕ್ಯಾನ್ಸಲ್ ಮಾಡ್ಬೇಕು. ಆ ದೇಶಕ್ಕೆ ಹೋಗಿ ನಾವು ಹೋಗಿ ಅರೆಸ್ಟ್ ಮಾಡೋಕೆ ಆಗಲ್ಲ. ಇಲ್ಲೇನೋ ತುಮಕೂರು, ಚಿತ್ರದುರ್ಗದಿಂದ ಅರೆಸ್ಟ್ ಮಾಡಿ ಎಳೆದುಕೊಂಡು ಬಂದ್ರು ಅನ್ನೋ ಹಾಗೆ ಅಲ್ಲ. ಹೊರ ದೇಶಕ್ಕೆ ಹೋಗಿ ನಮ್ಮ ಪೊಲೀಸರು ಅರೆಸ್ಟ್ ಮಾಡೋಕೆ ಸಾಧ್ಯವಿಲ್ಲ. ಆ ದೇಶದ ಲೀಗಲ್ ಪ್ರೋಸೆಸ್ ಏನಿದೆ. ಅವರಿಗೆ ನಾವು ರಿಕ್ವೆಸ್ಟ್ ಮಾಡ್ಬೇಕಾಗುತ್ತದೆ. ಇದನ್ನ ನಾವು ಕೇಂದ್ರ ಸರ್ಕಾರದ ಮೂಲಕ ಮಾಡಿದ್ದೇವೆ. ಹಾಗಾಗಿ ಅವರು ಬರ್ತಾರೆ ಅನ್ನೋದು ಬಹಳ ಒಳ್ಳೆಯದು. ಅವರು ಬಂದು ಹೇಳಿಕೆ ಕೊಡಲಿ. ಆನಂತರ ಎಸ್ ಐಟಿ ಏನ್ ಮಾಡುತ್ತೆ ಕಾದುನೋಡೋಣ ಎಂದು ತಿಳಿಸಿದರು.