ಕಾಡಾನೆ ದಾಳಿಗೆ ಬಲಿಯಾದ ಶಾರ್ಪ್ ಶೂಟರ್ ವೆಂಕಟೇಶ್: ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ 67 ವರ್ಷದ ವೃದ್ಧ ಸಾವು
ಹಾಸನದಲ್ಲಿ ಕಾಡಾನೆ ದಾಳಗೆ 67 ವರ್ಷದ ವೃದ್ಧ ಶಾರ್ಪ್ ಶೂಟರ್ ವೆಂಕಟೇಶ್ ಬಲಿಯಾಗಿದ್ದಾರೆ. ಆನೆ ದಾಳಿ ಮಾಡಿದರೆ ತಪ್ಪಿಸಿಕೊಳ್ಳಲಾಗದ ಸಿಬ್ಬಂದಿಯನ್ನು ಈಗಲೂ ಅರಣ್ಯ ಇಲಾಖೆ ಬಳಸಿಕೊಳ್ಳುತ್ತಿದೆ.
ಹಾಸನ (ಆ.31): ಹಾಸನ ಜಿಲ್ಲೆಯಲ್ಲಿ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಲು ಮುಂದಾಗಿದ್ದ ಅರಣ್ಯ ಸಿಬ್ಬಂದಿ ಮೇಲೆಯೇ ದಾಳಿ ಮಾಡಿದ್ದು, ಅರವಳಿಕೆ ತಜ್ಞ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಈವರೆಗೆ ಯಾರ ಮೇಲೂ ದಾಳಿ ಮಾಡದ ಭೀಮ ಎಂಬ ಆನೆ ಈಗ ಗಾಯಗೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲು ಹೋದಾಗ ದಾಳಿ ಮಾಡಿದೆ. ಆದರೆ, ಶಾರ್ಪ್ ಶೂಟರ್ ವೆಂಕಟೇಶ್ ಅವರು ನಿವೃತ್ತಿಯಾಗಿದ್ದರು. ಅವರಿಗೆ 67 ವರ್ಷವಾಗಿದ್ದು, ದಾಳಿ ಮಾಡಿದರೂ ತಪ್ಪಿಸಿಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಕಾರ್ಯಾಚರಣೆಗೆ ಕರೆದುಕೊಂಡು ಹೋಗಿದ್ದರು ಎಂಬ ಆರೋಪ ಕೇಳಿಬಂದಿದೆ.
ಹೌದು, ಗಾಯಗೊಂಡ ಕಾಡಾನೆಗೆ ಚಿಕಿತ್ಸೆ ನೀಡಲು ಹೋಗಿದ್ದ ವೇಳೆ ಅರಣ್ಯ ಸಿಬ್ಬಂದಿ ಮೇಲೆಯೇ ಆನೆ ದಾಳಿ ಮಾಡಿದ್ದು, ಮಹಾ ಯಡವಟ್ಟು ಸಂಭವಿಸಿದೆ. ಅರವಳಿಕೆ ಮದ್ದು ನೀಡಲು ತೆರಳಿದ್ದ ಅರಣ್ಯ ಸಿಬ್ಬಂದಿ ಮೇಲೆ ಅಟ್ಯಾಕ್ ಮಾಡಿದೆ. ಗಾಯಗೊಂಡಿದ್ದ ಭೀಮ ಆನೆಯಿಂದಲೇ ಅಟ್ಯಾಕ್ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡ ಅರಣ್ಯ ಸಿಬ್ಬಂದಿ ವೆಂಕಟೇಶ್ ಅವರಿಗೆ ಗಂಭೀರ ಗಾಯಗೊಂಡಿದ್ದರು. ಇನ್ನು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಆಲೂಕಿನ ತಾಲೂಕಿನ ಹೊನ್ನವಳ್ಳಿ ಗ್ರಾಮದವರಾಗಿದ್ದರು.
ಸೆಲ್ಫಿಗಾಗಿ ಹುಷಾರು ತಪ್ಪಿದ ಚಿರತೆಯ ಬೆನ್ನಟ್ಟಿ ಕಿರುಕುಳ: ಜನರ ವರ್ತನೆಗೆ IFS ಅಧಿಕಾರಿ ಆಕ್ರೋಶ
ಕಲ್ಲುಬಂಡೆ ಹಾಗೂ ಪೊದೆಯೊಳಗೆ ಅವಿತರೂ ಬಿಡಲಿಲ್ಲ: ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಹಳ್ಳಿಯೂರು ಬಳಿ ಕಾಡಾನೆ ನಿಂತಿತ್ತು. ಅಲ್ಲಿಗೆ ಚಿಕಿತ್ಸೆ ನೀಡಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಸೆರೆ ಹಿಡಿದು ಚಿಕಿತ್ಸೆ ನೀಡಲು ಮುಂದಾಗಿದ್ದ ಅರಣ್ಯ ಇಲಾಖೆ. ಅರವಳಿಕೆ ಮದ್ದು ನೀಡಲು ವನ್ಯ ಜೀವಿ ವೈದ್ಯ ವಸೀಂ ಜೊತೆ ಅರವಳಿಕೆ ತಜ್ಞ ವೆಂಕಟೇಶ್ ತೆರಳಿದ್ದರು. ಈ ಹಿಂದೆ ಹತ್ತಾರು ಆನೆ ಸೆರೆವೇಳೆ ಅರವಳಿಕೆ ಮದ್ದು ನೀಡಿದ್ದರು. ಆದರೆ, ಇಂದು ಆನೆ ಅವರ ಕಡೆಗೆ ತಿರುಗಿ ನೇರವಾಗಿ ದಾಳಿ ಮಾಡಿದೆ. ಆನೆ ದಾಳಿಯಿಂದ ತಪ್ಪಿಸಿಕೊಂಡು ಹೋಗಿ ಕಲ್ಲುಗಳು ಹಾಗೂ ಪೊದೆಯ ಬಳಿಗೆ ಹೋಗಿ ಅವಿತುಕೊಂಡರೂ, ಆನೆ ಹುಡುಕಿಕೊಂಡು ಹೋಗಿ ದಾಳಿ ಮಾಡಿದೆ. ಅವರನ್ನು ಹೊಟ್ಟೆ ಹಾಗೂ ತಲೆಗೆಯ ಭಾಗದಲ್ಲಿ ತುಳಿದು ಅಲ್ಲಿಂದ ಆನೆ ಪರಾರಿ ಆಗಿದೆ.
ತಲೆ ಹಾಗೂ ಹೊಟ್ಟೆ ಭಾಗದಲ್ಲಿ ತುಳಿದ ಆನೆ: ಇನ್ನು ಆನೆ ಕಾರ್ಯಾಚರಣೆ ಬಗ್ಗೆ ವಿಡಿಯೂ ಕೂಡ ಮಾಡಿಕೊಳ್ಳಲಾಗಿದೆ. ಆನೆ ದಾಳಿ ಮಾಡಿದಾಗ ಸಿಬ್ಬಂದಿ ಅಸಾಹಾಯಕರಾಗಿ ಪ್ರಾಣ ರಕ್ಷಣೆಗೆ ಕೂಗಿಕೊಳ್ಳುತ್ತಿದ್ದ ವಿಡಿಯೋ ಸೆರೆಯಾಗಿದೆ. ಆನೆ ದಾಳಿ ಮಾಡುವುದು, ಸತ್ತೆ ಎಂದು ಕೂಗಿಕೊಳ್ಳುವುದು, ಆನೆ ದಾಳಿ ಮಾಡಿ ತೆರಳಿದ ನಂತರ ಅವರನ್ನು ರಕ್ಷಣೆ ಮಾಡಲು ಸಿಬ್ಬಂದಿ ಮುಂದಾಗಿರವುದು ಹಾಗೂ ಆಸ್ಪತ್ರೆಗೆ ಕರೆದೊಯ್ಯುವ ವಿಡಿಯೋ ದೃಶ್ಯಗಳು ವೈರಲ್ ಆಗುತ್ತಿವೆ. ಇನ್ನು ಸ್ಥಳದಲ್ಲಿಯೇ ಆಂಬುಲೆನ್ಸ್ ನಿಲ್ಲಿಸಿಕೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಗಂಭೀರ ಸ್ಥಿತಿಯಲ್ಲಿದ್ದ ವೆಂಕಟೇಶ್ ದೇಹವು ಚಿಕಿತ್ಸೆಗೆ ಸ್ಪಂದಿಸಿಲ್ಲ. ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸಕ್ಕರೆನಾಡು ಮಂಡ್ಯಕ್ಕೆ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ
ಆನೆ ಕಾರ್ಯಾಚರಣೆಗೆ 67 ವರ್ಷದವರನ್ನು ಬಳಸಿಕೊಂಡಿದ್ದ ಇಲಾಖೆ: ಕಾಡಾನೆ ಕಾರ್ಯಾಚರಣೆ ವೇಳೆ ಸಿಬ್ಬಂದಿ ವೆಂಕಟೇಶ್ ಸಾವು ಸಂಭವಿಸಿದ ನಂತರ, ಮೃತದೇಹ ನೋಡಲು ಆಸ್ಪತ್ರೆ ಶವಾಗಾರಕ್ಕೆ ಅರಣ್ಯ ಅಧಿಕಾರಿ ಭೇಟಿ ಮಾಡಿದಾಗ ಮೃತ ವೆಂಕಟೇಶ್ ಪುತ್ರನಿಂದ ಡಿಎಫ್‌ಓಗೆ ತರಾಟೆ ತೆಗೆದುಕೊಂಡಿದ್ದಾರೆ. ಅರಣ್ಯ ಇಲಾಖೆಯಲ್ಲಿ ಶಿಸ್ತು ಕ್ರಮ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಯಾವುದೇ ಕ್ರಮ ವಹಿಸಿಲ್ಲ. 67 ವರ್ಷದ ನಮ್ಮ ತಂದೆಯನ್ನು ಕಾರ್ಯಾಚರಣೆಯಲ್ಲಿ ಬಳಸಿದ್ದೀರಿ. ನಮ್ಮ ಅಪ್ಪನನ್ನ ಬಿಟ್ಟು ಬೇರೆ ಯಾರೊಬ್ಬರಿಗೂ ಇಲ್ಲಿಯವರೆಗೆ ತರಬೇತಿ ನೀಡಿಲ್ಲ. ನಿಮ್ಮ ಇಲಾಖೆಯ ನಿರ್ಲಕ್ಷವೇ ನಮ್ಮ ತಂದೆ ಸಾವಿಗೆ ಕಾರಣ. ಇಲ್ಲಿಯವರೆಗೆ ಒಬ್ಬ ಯುವಕನಿಗೂ ಈ ಬಗ್ಗೆ ತರಬೇತಿ ಕೊಟ್ಟಿಲ್ಲ. ಇದು ನಿಮ್ಮ ಅರಣ್ಯ ಇಲಾಖೆಗೆ ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.