Asianet Suvarna News Asianet Suvarna News

ಸಿದ್ದರಾಮಯ್ಯ ಸಿಎಂ ಆಗಿ, ಮತ್ತೆ ಡೆಮೋಕ್ರಸಿ ತರಲಿ: Hamsalekha

*ಸಿದ್ದರಾಮಯ್ಯ ಹಾಲಿನ ಮುಖ್ಯಮಂತ್ರಿ: ಹಂಸಲೇಖ
*ಧರ್ಮೊಕ್ರಸಿ ಹೋಗುವಂತೆ ಮಾಡಿ ಡೆಮಾಕ್ರಸಿ ತರಲಿ
*ಪೇಜಾವರ ಶ್ರೀ ವಿರುದ್ಧ ಹೇಳಿಕೆ ಸಮರ್ಥಿಸಿಕೊಂಡ ನಾದಬ್ರಹ್ಮ

Hamsalekha defended His statement against pejavara shree mnj
Author
Bengaluru, First Published Dec 26, 2021, 1:51 PM IST
  • Facebook
  • Twitter
  • Whatsapp

ಬೆಂಗಳೂರು (ಡಿ. 26): ನಗರದ ಗಾಂಧಿಭವನದ ಕಾರ್ಯಕ್ರಮವೊಂದರಲ್ಲಿ  ಮಾತನಾಡಿದ ಹಂಸಲೇಖ (Hamsalekha)  ಪೇಜಾವರ ಶ್ರೀ ವಿರುದ್ಧ (Pejavara Shree) ಹೇಳಿಕೆಯನ್ನು  ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಹಾಲಿನ ಮುಖ್ಯಮಂತ್ರಿ ಎಂದು ಸಂಭೋದಿಸಿದ ಹಂಸಲೇಖ " ಇತ್ತಿಚೆಗೆ ಒಂದು ಈಶ್ಯು ಆಗಿತ್ತು. ಗೊತ್ತಿಲ್ಲದ ಸಣ್ಣ ಸಮುದಾಯದವರೆಲ್ಲಾರ ನನಗೆ ಬೆಂಬಲ ನೀಡಿದ್ರು. ಆ ಪ್ರಕರಣ ಅಷ್ಟೆಲ್ಲಾ ದೊಡ್ಡದಾಗತ್ತೆ ಎಂದು ಗೊತ್ತಿರಲಿಲ್ಲ. ಬ್ಲಡ್ ತಿನ್ನುತ್ತಿದ್ದವರು, ಬ್ಲಡ್ ತಿನ್ನೋದು ಬಿಟ್ಟವರು, ಬ್ಲಡ್ ಕುಡಿದು ಗಲೀಜು ಆಗಿಬಿಡ್ತು" ಎಂದು ಹೇಳಿದ್ದಾರೆ. ಜತೆಗೆ ಹಾಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಬಂದು ಧರ್ಮೊಕ್ರಸಿ ಹೋಗುವಂತೆ ಮಾಡಿ ಡೆಮಾಕ್ರಸಿ (Democracy) ತರಲಿ ಎಂದು ಹಂಸಲೇಖ ಶುಭ ಹಾರೈಸಿದ್ದಾರೆ.  

ನಗರದ ಗಾಂಧಿಭವನದಲ್ಲಿ (Gandhi Bhavan) ಎಸ್ ಜಿ ಸಿದ್ದರಾಮಯ್ಯ ಅವರ ಆತ್ಮಕಥನ ಯರೆಬೇವು ಬಿಡುಗಡೆ ಹಾಗೂ ಡಾ. ಎಂ ಎಂ ಕಲಬುರ್ಗಿ ಪ್ರಗತಿಪರ ಚಿಂತಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಗೋರೂರು ಸೇರಿದಂತೆ ಮತ್ತಿತರು ಭಾಗಿಯಾಗಿದ್ದಾರೆ. "ನೀವು ಯಾರಿಗೂ ಹೆದರಬೇಕಿಲ್ಲ ನಿಮ್ಮ ಜೊತೆ ನಾವೀದ್ದೇವೆ ಎನ್ನುವ ಕಾರಣಕ್ಕೆ ನಿಮ್ಮನ್ನು ಈ ಕಾರ್ಯಕ್ರಮಕ್ಕೆ ಕರೆಸಿದ್ದೇನೆ ಎಂದು ನಾಗರಾಜ್ ಮೂರ್ತಿ ಹೇಳಿದ್ರು.ನನಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು. ನಾಗರಾಜ್ ಮೂರ್ತಿ ನೋಡಕೆ ಸಣ್ಣಕ್ಕೆ ಕಾಣ್ತಾನೆ‌. ಆದ್ರೆ ನನ್ನ ಬಗ್ಗೆ ಗೊತ್ತಿಲ್ಲ , ನಾನು ಪೋಲಿ ಆಟ ಆಡಿ, ತಂಡವನ್ನು ಕಟ್ಟಿದ್ದವನು" ಎಂದು ಹಳೆಯ ಪ್ರಕರಣವನ್ನು ಹಂಸಲೇಖ ಪರೋಕ್ಷವಾಗಿ ನೆನೆಯುವ ಪ್ರಯತ್ನ ಮಾಡಿದ್ದಾರೆ.

Dalit: ಹಂಸಲೇಖ ಟೀಕೆ ಬೆನ್ನಲ್ಲೇ ದಲಿತರ ಕೇರಿಗೆ ಪೇಜಾವರ ಶ್ರೀ, ಪಾದಪೂಜೆ

ಇತಿಚೇಗೆ ಖ್ಯಾತ ಸಂಗೀತ ನಿರ್ದೇಶಕ, ಸಿನಿಮಾ ಸಾಹಿತಿ ನಾದ ಬ್ರಹ್ಮ ಹಂಸಲೇಖ (Hamsalekha) ಅವರು ಪೇಜಾವರ ಶ್ರೀಗಳ ಕುರಿತು ಆಡಿದ ಮಾತುಗಳಿಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು. ನೆಟ್ಟಿಗರು ಹಂಸಲೇಖ ಮಾತುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ವಿಡಿಯೋ ಮುಖಾಂತರ ಕ್ಷಮೆ ಕೇಳಿದ್ದರು. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು.

ಎಸ್ ಜಿ ಸಿದ್ದರಾಮಯ್ಯ ಆಕ್ರೋಶ!

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದೆ ಎಸ್ ಜಿ ಸಿದ್ದರಾಮಯ್ಯ "ಹಿಂದುಳಿದ ಮೂಲದಿಂದ, ಅಂಬೇಡ್ಕರ್ ಮೂಲದಿಂದ ಬಂದಂತ ರಾಜಕಾರಣಿಗಳು ಬದಲಾಗಿದ್ದಾರೆ, ಅವರೆಲ್ಲಾ ಇಂದು ದಿವಾಳಿ ಆಗೋಗಿದ್ದಾರೆ.‌ ನೆಹರು ಯಾವತ್ತು ದೇವಾಲಕ್ಕೆ ಹೋಗಿದ್ದವರಲ್ಲ, ಮಠ ಮಾನ್ಯಕ್ಕೆ ಹೋದವರಲ್ಲಅವರು ಅಭಿವೃದ್ಧಿ ಮಾತ್ರ ನಂಬಿದವರು. ಅವರು ಕಟ್ಟಿದ ಅಣೆಕಟ್ಟು ಕೆಲಸ ಸಾಧನೆ ಅನನ್ಯ. ಆದರೆ ಕೇವಲ ಹತ್ತು ವರ್ಷದಲ್ಲಿ ಎಲ್ಲಾ ಆಯ್ತು ಎಂದು ಬಿಂಬಿಸುವ ಕೆಲಸ ಆಗ್ತಿದೆ. ಮಾಧ್ಯಮ ಕೂಡ ಅದೇ ಕೆಲಸ ಮಾಡ್ತಿದೆ. ಪ್ರಧಾನಿಯನ್ನು ಕೂಡ ಪ್ರಶ್ನೆ ಮಾಡುವ ಹಕ್ಕು ಎಲ್ಲಾರಿಗೂ ಇದೆ." ಎಂದು ಹೇಳಿದ್ದಾರೆ.

Pejawar Swamiji: 'ದಲಿತರ ಕಾಲನಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದ್ರೆ ಬೇಡ ಅಂದಿದ್ರು'

"ಸಾಹಿತ್ಯ ಪರಿಷತ್ ನ ಸ್ವಾಯತ್ತತೆ ಹಾಳು ಮಾಡಿದ್ದಾರೆ. ಕೋಮುವಾದಿ ಪಕ್ಷವೊಂದರ ಸಹಾಯ ಪಡೆದು ಅಧ್ಯಕ್ಷರಾಗಿದ್ದಾರೆ. ಇದು ಆಘಾತಕಾರಿ. ಇಷ್ಟು ದಿನ ಯಾವ ಮುಖ್ಯಮಂತ್ರಿಗಳು ಸಾಹಿತ್ಯ ಪರಿಷತ್ ನ ಸ್ವಾಯತ್ತತೆ ಪ್ರಶ್ನೆ ಮಾಡಿರಲಿಲ್ಲ" ಎಂದು ಅವರು ಹೇಳಿದ್ದಾರೆ.

ಇಷ್ಟ ಲಿಂಗ ಕಟ್ಟಿಕೊಂಡವನು ದೇವಸ್ಥಾನಕ್ಕೆ ಹೋಗಬೇಕಿಲ್ಲ!

ಕಾರ್ಯಕ್ರಮದಲ್ಲಿ ಮಾತನಾಡಿದೆ ಕೆ. ಮರಳಸಿದ್ದಪ್ಪ " ಇಂದು ಶರಣ ಧರ್ಮ ಕ್ರಾಸ್ ರೋಡ್ ಗೆ ಬಂದು ನಿಂತಿದೆ. ಆದರೆ ಇಂದು ಕೆಲವರು ಶರಣ ಧರ್ಮವನ್ನು ವೈದಿಕ ಧರ್ಮ ಮಾಡೋಕೆ ಹೊರಟಿದ್ದಾರೆ.ಬಸವಣ್ಣ ದೇವಸ್ಥಾನ ಸಂಸ್ಕ್ರತಿಯನ್ನು ವಿರೋಧ ಮಾಡಿದವರು ಬಸವಣ್ಣ ಇಷ್ಟ ಲಿಂಗವೆ ಜಂಗಮ ಅದನ್ನು ಕಟ್ಟಿಕೊಂಡವನು ಚಲನಶೀಲನಾಗಿರುತ್ತಾನೆ. ಅದು ಒಂದು ಉತ್ತಮ ಚಿಂತನೆ. ಇಷ್ಟ ಲಿಂಗ ಕಟ್ಟಿಕೊಂಡವನು ದೇವಸ್ಥಾನಕ್ಕೆ ಹೋಗಬೇಕಿಲ್ಲ" ಎಂದು ಹೇಳಿದ್ದಾರೆ.

Follow Us:
Download App:
  • android
  • ios