Hampi G20 summit: ಹಂಪಿ ಸಾಮ್ರಾಜ್ಯದ ಇತಿಹಾಸ ಮೆಲುಕು ಹಾಕಿದ ಜೋಶಿ
ಸಂಸ್ಕೃತಿಯು ಕೇವಲ ನಮ್ಮ ಅಸ್ಮಿತೆಯ ಒಂದು ಭಾಗವಷ್ಟೇ ಆಗಿರದೆ, ಅದು ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಜಾಗತಿಕ ಸಾಮರಸ್ಯಕ್ಕೆ ಪ್ರೇರಕ ಶಕ್ತಿಯೂ ಆಗಿರುವಂತಹ ಭವಿಷ್ಯದತ್ತ ನಾವು ಕೆಲಸ ಮಾಡೋಣ ಎಂದು ಕೇಂದ್ರದ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಹೊಸಪೇಟೆ (ಜು.11) : ಸಂಸ್ಕೃತಿಯು ಕೇವಲ ನಮ್ಮ ಅಸ್ಮಿತೆಯ ಒಂದು ಭಾಗವಷ್ಟೇ ಆಗಿರದೆ, ಅದು ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಜಾಗತಿಕ ಸಾಮರಸ್ಯಕ್ಕೆ ಪ್ರೇರಕ ಶಕ್ತಿಯೂ ಆಗಿರುವಂತಹ ಭವಿಷ್ಯದತ್ತ ನಾವು ಕೆಲಸ ಮಾಡೋಣ ಎಂದು ಕೇಂದ್ರದ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಹಂಪಿಯಲ್ಲಿ ಸೋಮವಾರ ನಡೆದ ಮೂರನೇ ಜಿ-20 ಸಂಸ್ಕೃತಿ ಕಾರ್ಯಪಡೆ(ಸಿಡಬ್ಲ್ಯುಜಿ) ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಾವು ನಾಲ್ಕು ಆದ್ಯತೆಯ ಕ್ಷೇತ್ರಗಳನ್ನು ಗುರುತಿಸುವುದು ಮತ್ತು ಅವುಗಳ ಬಗ್ಗೆ ಚರ್ಚಿಸುವ ಹಂತದಿಂದ, ಕ್ರಿಯಾ- ಆಧರಿತ ಶಿಫಾರಸುಗಳ ಬಗ್ಗೆ ಒಮ್ಮತ ಗಿಟ್ಟಿಸುವ ಹಂತದವರೆಗೆ ಪ್ರಗತಿ ಸಾಧಿಸಿದ್ದೇವೆ. ಇದು ನೀತಿ ನಿರೂಪಣೆಯ ಹೃದಯಭಾಗದಲ್ಲಿ ಸಂಸ್ಕೃತಿಯನ್ನು ಇರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.
ಗಿನ್ನಿಸ್ ಬುಕ್ ದಾಖಲೆಗೆ ಸೇರಿದ ಲಂಬಾಣಿ ಕಸೂತಿ ಕಲೆ: ಜಿ.20 ಸಭೆಯಲ್ಲಿ ಪ್ರಮಾಪತ್ರ ಸ್ವೀಕಾರ
ಸೃಜನಶೀಲ ಆರ್ಥಿಕತೆಯ ಉತ್ತೇಜನ:
ಸಾಂಸ್ಕೃತಿಕ ಆಸ್ತಿಯ ರಕ್ಷಣೆ ಮತ್ತು ಪುನರ್‌ಸ್ಥಾಪನೆ; ಸುಸ್ಥಿರ ಭವಿಷ್ಯಕ್ಕಾಗಿ ಜೀವನ ಪರಂಪರೆಯ ಬಳಕೆ. ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳು ಹಾಗೂ ಸೃಜನಶೀಲ ಆರ್ಥಿಕತೆಯ ಉತ್ತೇಜನ. ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯತ್ತ ನಾವು ಮುಖ ಮಾಡಬೇಕಿದೆ ಎಂದರು.
ಈ ನಾಲ್ಕು ಆದ್ಯತೆಗಳು ಸಾಂಸ್ಕೃತಿಕವಾಗಿ ವೈವಿಧ್ಯಮಯವಾಗಿದ್ದರೂ ಏಕೀಕೃತವಾದ ಜಗತ್ತನ್ನು ತೋರಿಸುತ್ತವೆ. ಅಲ್ಲದೆ, ಸಾಂಸ್ಕೃತಿಕ ಪರಂಪರೆ ಎಂಬುದು ಭೂತಕಾಲದ ಆಧಾರಸ್ತಂಭ ಮತ್ತು ಭವಿಷ್ಯದ ಹಾದಿ ಎಂದು ಅವು ಪ್ರದರ್ಶಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಸಂಸ್ಕೃತಿಯು ಸೇತುವೆಗಳನ್ನು ನಿರ್ಮಿಸುತ್ತದೆ, ತಿಳಿವಳಿಕೆ ಮತ್ತು ಸಹಾನುಭೂತಿಯನ್ನು ಬೆಳೆಸುತ್ತದೆ. ಜತೆಗೆ ನಮ್ಮ ನಡುವಿನ ವ್ಯತ್ಯಾಸಗಳನ್ನು ಮೀರಿ, ಪರಸ್ಪರ ಹಂಚಿಕೊಂಡ ಮಾನವ ಪ್ರಯಾಣವನ್ನು ಬೆಂಬಲಿಸಲು ಅನುವು ಮಾಡಿಕೊಡುತ್ತದೆ ಎಂದರು.
ವೈವಿಧ್ಯತೆಯ ಸೌಂದರ್ಯ:
ಏಕತೆಯ ಶಕ್ತಿ, ವೈವಿಧ್ಯತೆಯ ಸೌಂದರ್ಯ ಮತ್ತು ಮಾನವ ಅಭಿವೃದ್ಧಿಯ ನಿಟ್ಟಿನಲ್ಲಿ ಸಂಸ್ಕೃತಿಯು ಹೊಂದಿರುವ ಅಪಾರ ಸಾಮರ್ಥ್ಯವನ್ನು ಅರಿಯಬೇಕು. ನಾವು ಒಂದೇ ಕನಸುಗಳಿಂದ, ಅದೇ ಭಾವೋತ್ಕಟತೆಯಿಂದ ಪ್ರೇರಿತರಾಗಿ ಮತ್ತು ಅದೇ ಭರವಸೆಗಳಿಂದ ಸ್ಫೂರ್ತಿ ಪಡೆದಿದ್ದೇವೆ ಎಂದರು.
ಲಂಬಾಣಿ ಕಸೂತಿ ಕಲೆ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಗಿನ್ನಿಸ್ ದಾಖಲೆ ಮಾಡುವ ಗುರಿಯನ್ನು ಸಿಡಬ್ಲ್ಯುಜಿ ಹೊಂದಿದೆ. ಸಂಡೂರು ಕುಶಲ ಕಲಾ ಕೇಂದ್ರದೊಂದಿಗೆ ನಿಕಟ ಸಂಬಂಧ ಹೊಂದಿರುವ ಲಂಬಾಣಿ ಸಮುದಾಯದ 450ಕ್ಕೂ ಹೆಚ್ಚು ಮಹಿಳಾ ಕುಶಲಕರ್ಮಿಗಳು ಜಿ- 20 ಕಾರ್ಯಕ್ರಮದಲ್ಲಿ ಸುಮಾರು 1300 ಲಂಬಾಣಿ ಕಸೂತಿ ಕಲೆಗಳನ್ನು ಪ್ರದರ್ಶಿಸಿದ್ದಾರೆ ಎಂದರು.
ಜಿ- 20 ಪ್ರತಿನಿಧಿಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾದ ಹಂಪಿ ಸಮೂಹ ಸ್ಮಾರಕಗಳ ಭಾಗವಾಗಿರುವ ವಿಜಯ ವಿಠ್ಠಲ ದೇವಸ್ಥಾನ, ರಾಯಲ್ ಎನ್‌ಕ್ಲೋಸರ್ ಮತ್ತು ಎದುರು ಬಸವಣ್ಣ ಮಂಟಪ ವೀಕ್ಷಣೆ ಮಾಡಲಿದ್ದಾರೆ. ತುಂಗಭದ್ರಾ ನದಿಯಲ್ಲಿ ಪ್ರತಿನಿಧಿಗಳು ಹರಿಗೋಲಿನಲ್ಲೂ ಪಯಣಿಸಲಿದ್ದಾರೆ. ಹಂಪಿಯ ಪಟ್ಟಾಭಿರಾಮ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಕರ್ನಾಟಕ ಲಂಬಾಣಿ ಕಸೂತಿ ಕಲೆಗೆ ಗಿನ್ನಿಸ್ ದಾಖಲೆ: ಹಂಪಿಯಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಸಭೆ
ಕೇಂದ್ರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್, ಜಂಟಿ ಕಾರ್ಯದರ್ಶಿ ಲಿಲ್ಲಿ ಪಾಂಡೆ, ಅಧಿಕಾರಿಗಳಾದ ಕೆ.ಕೆ. ಬಸಾ, ನಾನು ಭಾಸಿನ್ ಸೇರಿದಂತೆ ಜಿ- 20 ರಾಷ್ಟ್ರಗಳ ಪ್ರತಿನಿಧಿಗಳು ಇದ್ದರು.
ಜಿ-20 ಪ್ರತಿನಿಧಿಗಳಿಂದ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ
ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಗೆ ಆಗಮಿಸಿದ ಸದಸ್ಯ ಹಾಗೂ ಅತಿಥಿ ರಾಷ್ಟ್ರಗಳ ಅತ್ಯುನ್ನತ ಪ್ರತಿನಿಧಿಗಳು ಸೋಮವಾರ ಸಂಜೆ ಐತಿಹಾಸಿಕ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ (ಕೊರಾಕಲ್ ರೈಡ್) ಮಾಡಿದರು. ಬೆಳಗ್ಗಿನಿಂದ ನಡೆದ ಸಭೆಯ ನಂತರ ಸಂಜೆ ವೇಳೆ ಹಂಪಿಗೆ ಆಗಮಿಸಿದ ಅತ್ಯುನ್ನತ ಪ್ರತಿನಿಧಿಗಳು ಹಂಪಿಯ ಚಕ್ರತೀರ್ಥದ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿಯ ಕೈಗೊಂಡು ಹಂಪಿಯ ಕಲ್ಲುಬಂಡೆ, ನದಿಯ ಪ್ರಾಕೃತಿಕ ಸೌಂದರ್ಯ ಸವಿದರು.