Asianet Suvarna News Asianet Suvarna News

ಅಪ್ರಾಪ್ತ ಯುವತಿಯನ್ನ ಮದುವೆಯಾಗಿ ಸಂಕಷ್ಟಕ್ಕೆ ಸಿಲುಕಿದ ಹಾಡ್ಯಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ!

ನಂಜನಗೂಡು (ಸೆ.13):ಹಾಡ್ಯ ಗ್ರಾಪಂ ಉಪಾಧ್ಯಕ್ಷ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಘಟನೆ ನಂಜನಗೂಡಿನ ಹಾಡ್ಯಾ ಗ್ರಾಮದಲ್ಲಿ ನಡೆದಿದೆ.

Hadya village panchayat vice president who got childmarriage at nanjanagudu rav
Author
First Published Sep 13, 2023, 9:59 AM IST

ನಂಜನಗೂಡು (ಸೆ.13) :  ನಂಜನಗೂಡು (ಸೆ.13):ಹಾಡ್ಯ ಗ್ರಾಪಂ ಉಪಾಧ್ಯಕ್ಷ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಘಟನೆ ನಂಜನಗೂಡಿನ ಹಾಡ್ಯಾ ಗ್ರಾಮದಲ್ಲಿ ನಡೆದಿದೆ.

ಹಾಡ್ಯಾ ಗ್ರಾಮಪಂಚಾಯಿತಿ ಉಪಾಧ್ಯಕ್ಷನಾಗಿರುವ ಹರೀಶ್ ಕುಮಾರ ಎಂಬುವವರು ಅರಿಯೂರು ಗ್ರಾಮದ ಬಾಲಕಿಯನ್ನು ಪುಸಲಾಯಿಸಿ ಕಳೆದ (2023) ಫೆಬ್ರುವರಿ ತಿಂಗಳಲ್ಲಿ ನಂಜನಗೂಡಿನ ಕಲ್ಯಾಣಮಂಟಪದಲ್ಲಿ ಅದ್ಧೂರಿಯಾಗಿ ಮದುವೆಯಾಗಿದೆ. ಶಾಲಾ ದಾಖಲಾತಿ ಪ್ರಕಾರ ಯುವತಿ ಜನ್ಮದಿನಾಂಕ ಮೇ.19, 2005 ಎಂದಿದೆ. ಅಂದರೆ ಯುವತಿಗೆ ಇನ್ನೂ 18 ವರ್ಷ ತುಂಬಿಲ್ಲ.  

ಆದರೆ ಮದುವೆಯಾದ ಬಳಿಕ ಆಧಾರ್ ತಿದ್ದುಪಡಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಯುವತಿ ಈಗ ಗರ್ಭಿಣಿಯಾಗಿರುವುದು ಕಾನೂನು ಉಲ್ಲಂಘಿಸಿದಂತಾಗಿದೆ. ಈ ಪ್ರಕರಣ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಬಾಲ್ಯ ವಿವಾಹ ಕಾಯ್ದೆಯಡಿ ಸೂಕ್ತ ಕ್ರಮ ಕ್ರಮ ಕೈಗೊಳ್ಳುವಂತೆ ದೂರು ನೀಡಿದ ಗ್ರಾಮಸ್ಥರು. ಗ್ರಾಮಸ್ಥರು ದೂರಿನ ಪತ್ರದ ಮೇಲೆ ಸಹಿ ಸಂಗ್ರಹಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.  

11ನೇ ವಯಸ್ಸಿನಲ್ಲಿ ಮದುವೆ, 20ರ ವೇಳೆಗೆ ತಂದೆಯಾದ ವ್ಯಕ್ತಿ ನೀಟ್‌ ಪರೀಕ್ಷೆ ಪಾಸ್‌ ಆಗಿ ವೈದ್ಯನಾಗಲು ಹೊರಟ!

Follow Us:
Download App:
  • android
  • ios