Asianet Suvarna News Asianet Suvarna News

'ಜ್ಞಾನವಾಪಿ ಮಸೀದಿ ನಮ್ಮದಾಗಿಯೇ ಉಳಿಯುತ್ತೆ' ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಎಸ್‌ಡಿ‌ಪಿಐ ವಿರೋಧ

ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ವಾರಾಣಸಿ ನ್ಯಾಯಾಲಯ ಅನುಮತಿ ನೀಡಿದ ತೀರ್ಪು ವಿರೋಧಿಸಿ ಎಸ್‌ಡಿಪಿಐ ಕಾರ್ಯಕರ್ತರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Gyanvapi Mosque Controversy: SDPI protests against Varanasi court verdict at belagavi rav
Author
First Published Feb 8, 2024, 3:54 PM IST

ಬೆಳಗಾವಿ (ಫೆ.8): ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ವಾರಾಣಸಿ ನ್ಯಾಯಾಲಯ ಅನುಮತಿ ನೀಡಿದ ತೀರ್ಪು ವಿರೋಧಿಸಿ ಎಸ್‌ಡಿಪಿಐ ಕಾರ್ಯಕರ್ತರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ನೂರಾರು ಎಸ್‌ಡಿಪಿಐ ಕಾರ್ಯಕರ್ತರು ಭಾಗಿಯಾಗಿ 'ಜ್ಞಾನವಾಪಿ ಮಸೀದಿ ನಮ್ಮದಾಗಿಯೇ ಉಳಿಯಲಿ' ಎಂದು ಘೋಷಣೆ ಕೂಗಿದರು. ಭಿತ್ತಿ ಪತ್ರ ಪ್ರದರ್ಶಿಸಿ ವಾರಾಣಸಿ ನ್ಯಾಯಾಲಯದ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಮುಸ್ಲಿಂ ಗುರುಗಳನ್ನು ಬಿಡುಗಡೆ ಮಾಡಿ, ಜ್ಞಾನವ್ಯಾಪಿ ಮಸೀದಿಗೆ ತೊಂದರೆ ಮಾಡಬೇಡಿ; ಮುಸ್ಲಿಮರ ಪ್ರತಿಭಟನೆ

ಮಸೀದಿ ನೆಪವಷ್ಟೇ, ಮುಸ್ಲಿಮರನ್ನೇ ಗುರಿ ಮಾಡಿಕೊಂಡಿದ್ದಾರೆ. ಸುಳ್ಳು ಇತಿಹಾಸ ಸೃಷ್ಟಿಸಿ ಇನ್ನೂ ಎಷ್ಟು ಮಸೀದಿ ಕಸಿದುಕೊಳ್ಳುತ್ತೀರಿ? ದೇಶದಲ್ಲಿ ಮಸೀದಿ, ಮಂದಿರ ವಿವಾದ ಹುಟ್ಟು ಹಾಕಿ ದ್ವೇಷ, ಹಿಂಸೆಗೆ ಪ್ರಚೋದನೆ ನೀಡುತ್ತಿರುವ ಶಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ ಜ್ಞಾನವಾಪಿ ನಮ್ಮದಾಗಲಿ ಎಂಬ ಘೋಷಣೆ ಕೂಗಿದರು.

ಜ್ಞಾನವಾಪಿ ಮಸೀದಿಯಲ್ಲಿ ಅಕ್ಬರ್ ಭಾವೈಕ್ಯತೆಗಾಗಿ ಶಿವಲಿಂಗ ಇಟ್ಟಿದ್ನಾ!? ಮಂದಿರ ಒಡೆದು ಮಸೀದಿ ಕಟ್ಟಲಾಯ್ತಾ ?

 ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಘಟನೆ ಬಳಿಕ 1993ರಲ್ಲಿ ನೆಲಮಾಳಿಗೆಗೆ ಬೀಗ ಹಾಕಿಸಿದ್ದ ಆಗಿನ ಸಿಎಂ ಮುಲಾಯಂ ಸಿಂಗ್ ಯಾದವ್. ಕಳೆದ 30 ವರ್ಷಗಳಿಂದ
ವ್ಯಾಸರ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಿರಲಿಲ್ಲ ಇದೀಗ ನೆಲಮಾಳಿಗೆಯಲ್ಲಿ ಪೂಜೆ ನಡೆಸಲು  ವಾರಾಣಸಿ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಹಿಂದೂ ಅರ್ಚಕರ ಕುಟುಂಬದವರು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಪೂಜಾ ಕಾರ್ಯ ನಡೆಸುತ್ತಿದ್ದಾರೆ.

Follow Us:
Download App:
  • android
  • ios