ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲರಿಗೂ ಬರುತ್ತದೆ: ಯತೀಂದ್ರ ಸಿದ್ದರಾಮಯ್ಯ ಭರವಸೆ

ಗೃಹಲಕ್ಷ್ಮಿ ಯೋಜನೆಯ ಹಣ ನೊಂದಾಯಿಸಿರುವ ಪ್ರತಿಯೊಬ್ಬ ಮಹಿಳೆಗೂ ಬರುತ್ತದೆ. ಇದರ ಬಗ್ಗೆ ಮಹಿಳೆಯರು ಯಾವುದೇ ಅನುಮಾನ ಪಡುವುದು ಬೇಡ ಎಂದು ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Gruhalahakshmi Yojana: All beneficiaries get money  says Yathindra siddaramaiah at mysuru rav

ನಂಜನಗೂಡು (ಜ.10): ಗೃಹಲಕ್ಷ್ಮಿ ಯೋಜನೆಯ ಹಣ ನೊಂದಾಯಿಸಿರುವ ಪ್ರತಿಯೊಬ್ಬ ಮಹಿಳೆಗೂ ಬರುತ್ತದೆ. ಇದರ ಬಗ್ಗೆ ಮಹಿಳೆಯರು ಯಾವುದೇ ಅನುಮಾನ ಪಡುವುದು ಬೇಡ ಎಂದು ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ವರುಣ ಕ್ಷೇತ್ರದ ಮಲ್ಲೂಪುರ ಗ್ರಾಪಂ ವ್ಯಾಪ್ತಿಯ ಕಿರುಗುಂದ, ಸೋನಹಳ್ಳಿ, ಸಣ್ಣ ಮಲ್ಲುಪುರ, ಮಡಹಳ್ಳಿ, ಅಳಗಂಚಿ, ಅಳಗಂಚಿಪುರ, ಗ್ರಾಮಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಮಂದಿರ, ಹಿಂದುತ್ವ ಎಂದು ಜನರನ್ನು ಮರಳು ಮಾಡುತ್ತಿರುವ ಬಿಜೆಪಿ: ಯತೀಂದ್ರ ಸಿದ್ದರಾಮಯ್ಯ

ಕಿರಗುಂದ ಸಂಪರ್ಕ ರಸ್ತೆ ಅಭಿವೃದ್ಧಿಗೆ 1.20 ಕೋಟಿ ಹಾಕಿದ್ದೇವೆ. ಟೆಂಡರ್ ಪ್ರಕ್ರಿಯೆಯಲ್ಲಿದೆ, ಗ್ರಾಮ ಠಾಣಾ ವ್ಯಾಪ್ತಿಯ ಜಾಗವನ್ನು ಸೈಟ್ ಕೊಡಲು ಹಾಗೂ ಸ್ಮಶಾನಕ್ಕೆ ಮೀಸಲಿಡಲು ಕ್ರಮ ಕೈಗೊಳ್ಳಬೇಕೆಂದು ಆರ್‌ ಐಗೆ ಸೂಚಿಸಿದರು.

ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಶಿವಸ್ವಾಮಿ, ಪ್ರದೀಪ್ ಕುಮಾರ್, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ರಂಗಸ್ವಾಮಿ, ಎಪಿಎಂಸಿ ಅಧ್ಯಕ್ಷ, ದಕ್ಷಿಣಾಮೂರ್ತಿ, ಗ್ರಾಪಂ ಅಧ್ಯಕ್ಷೆ ಕೋಮಲ, ಉಪಾಧ್ಯಕ್ಷ ಎಂ.ಆರ್. ಗುರಸ್ವಾಮಿ, ಗುರುಸಿದ್ದೇಗೌಡ, ರತ್ನಮ್ಮ, ಆನಂದ, ಶಿವನಾಗ, ಪ್ರಕಾಶ್, ಶ್ರೀನಿವಾಸ್, ಪುಟ್ಟಸ್ವಾಮಿ, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇದ್ದರು. 

ಭಾರತವನ್ನು ಪಾಕಿಸ್ತಾನ ಮಾಡಲು ಸಿದ್ಧತೆ ನಡೆಸಲಾಗುತ್ತಿದೆಯೇ? ಯತೀಂದ್ರ ಹೇಳಿಕೆಗೆ ಪೇಜಾವರಶ್ರೀ ತಿರುಗೇಟು!

Latest Videos
Follow Us:
Download App:
  • android
  • ios