ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯಡಿ ಬಿಲ್ ವಿತರಣೆ ಶುರುವಾಗಿದ್ದು, ಆ.1 ರಂದು ಒಂದೇ ದಿನ 5 ಲಕ್ಷ ಮಂದಿಗೆ ಶೂನ್ಯ ಬಿಲ್ ವಿತರಣೆ ಮಾಡಿರುವುದಾಗಿ ಬೆಸ್ಕಾಂ ತಿಳಿಸಿದೆ.
ಬೆಂಗಳೂರು (ಆ.3) : ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯಡಿ ಬಿಲ್ ವಿತರಣೆ ಶುರುವಾಗಿದ್ದು, ಆ.1 ರಂದು ಒಂದೇ ದಿನ 5 ಲಕ್ಷ ಮಂದಿಗೆ ಶೂನ್ಯ ಬಿಲ್ ವಿತರಣೆ ಮಾಡಿರುವುದಾಗಿ ಬೆಸ್ಕಾಂ ತಿಳಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ 89 ಲಕ್ಷ ಗೃಹ ಬಳಕೆದಾರರು ಇದ್ದಾರೆ. ಈ ಪೈಕಿ ಗೃಹ ಜ್ಯೋತಿ ಅಡಿ ಉಚಿತ ವಿದ್ಯುತ್ ಪಡೆಯಲು ಜು.27ರ ವೇಳೆಗೆ 55 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಮೊದಲ ದಿನವೇ 5 ಲಕ್ಷ ಮಂದಿಗೆ ಶೂನ್ಯ ಬಿಲ್ ನೀಡಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
Congress guarantee: ಗೃಹಜ್ಯೋತಿಗೆ ನೀರಸ ಪ್ರತಿಕ್ರಿಯೆ; 1 ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಸಿಲ್ಲ!
ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿಯೂ ಪ್ರೊಸೆಸಿಂಗ್ ಎಂದು ಬರುತ್ತಿರುವ ಬಗ್ಗೆ ಗ್ರಾಹಕರು ಆತಂಕ ಪಡಬೇಕಾಗಿಲ್ಲ. ಎಲ್ಲರ ಅರ್ಜಿಗಳ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ. ಬೆಸ್ಕಾಂ ಗ್ರಾಹಕರಿಗೆ ಅವರ ಬಿಲ್ ಅವಧಿ ಆಧಾರದ ಮೇಲೆ ಮೀಟರ್ ರೀಡಿಂಗ್ ಮಾಡಿ ಬಿಲ್ ವಿತರಣೆ ಮಾಡಲಾಗುತ್ತದೆ.
ಒಂದು ಭಾಗದಲ್ಲಿ ತಿಂಗಳ ಮೊದಲ ವಾರದಲ್ಲಿ ಬಿಲ್ ವಿತರಿಸಿದರೆ, ಒಂದೊಂದು ಕಡೆ ಎರಡನೇ ವಾರದಲ್ಲಿ ಬಿಲ್ ವಿತರಿಸಲಾಗುತ್ತದೆ. ಗ್ರಾಹಕರಿಗೆ ಜುಲೈ 1ರಿಂದ ಆಗಸ್ಟ್ 1, ಜುಲೈ 10ರಿಂದ ಆಗಸ್ಟ್ 10 ಹೀಗೆ ಮೀಟರ್ ರೀಡಿಂಗ್ ಅವಧಿಯಲ್ಲಿ ವ್ಯತ್ಯಾಸವಿರುತ್ತದೆ. ಅವರ ಸರದಿ ಬಂದಾಗ ಬೆಸ್ಕಾಂ ಸಿಬ್ಬಂದಿ ಮೀಟರ್ ರೀಡ್ ಮಾಡಿ ಅರ್ಹರಿಗೆ ಉಚಿತ ಬಿಲ್ ನೀಡುತ್ತಾರೆ. ಈ ಬಗ್ಗೆ ಗೊಂದಲಗಳು ಬೇಡ ಎಂದು ತಿಳಿಸಿದ್ದಾರೆ.
ಗೃಹಜ್ಯೋತಿ ಅರ್ಜಿಗೆ ಶುಲ್ಕ ಪಡೆಯದಂತೆ ಸರ್ಕಾರ ಎಚ್ಚರಿಕೆ ನೀಡಿದ್ರೂ ₹ 20 ಬದಲು ₹50 ವಸೂಲಿ!
ಮೊದಲ ತಿಂಗಳು ಮೊದಲ ವಾರದಲ್ಲಿ ಬಿಲ್ ಪಡೆಯುತ್ತಿದ್ದವರಿಗೆ 3-4 ದಿನಗಳಲ್ಲಿ ಎಲ್ಲರಿಗೂ ಬಿಲ್ ತಲುಪಿಸಲಾಗುವುದು. ಹಿಂದಿನ ಸಾಲಿನ ಸರಾಸರಿ ಬಳಕೆಗಿಂತ ಶೇ.10ರಷ್ಟುಹೆಚ್ಚು ಬಳಕೆಗೆ ಶೂನ್ಯ ಬಿಲ್ ನೀಡಲಾಗುವುದು. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ಮಾತ್ರ ಶುಲ್ಕ ಪಾವತಿಸುವಂತೆ ಸೂಚಿಸಲಾಗುವುದು. 200 ಯುನಿಟ್‌ಗಿಂತ ಹೆಚ್ಚು ಬಳಕೆ ಮಾಡಿದ್ದರೆ ಪೂರ್ಣ ಶುಲ್ಕ ಪಾವತಿಸಬೇಕು ಎಂದು ಮಾಹಿತಿ ನೀಡಿದರು.
