ಮಾಸಿಕ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುವ ರಾಜ್ಯ ಸರ್ಕಾ​ರದ ಮಹ​ತ್ವಾ​ಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಯ ಸೌಲಭ್ಯ ಪಡೆಯಲು ಜೂ.18ರಿಂದ (ಭಾ​ನು​ವಾ​ರ​ದಿಂದ) ನೋಂದಣಿಗೆ ಅವಕಾಶ ನೀಡಲಾಗಿದೆ. 

ಬೆಂಗಳೂರು (ಜೂ.18): ಮಾಸಿಕ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುವ ರಾಜ್ಯ ಸರ್ಕಾ​ರದ ಮಹ​ತ್ವಾ​ಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಯ ಸೌಲಭ್ಯ ಪಡೆಯಲು ಜೂ.18ರಿಂದ (ಭಾ​ನು​ವಾ​ರ​ದಿಂದ) ನೋಂದಣಿಗೆ ಅವಕಾಶ ನೀಡಲಾಗಿದೆ. ಒಂದು ಹಂತ​ದಲ್ಲಿ ನೋಂದಣಿ ಪೂರ್ಣಗೊಂಡ ಬಳಿಕ ಇಂಧನ ಇಲಾಖೆಯಿಂದ ಅಧಿಕೃತವಾಗಿ ಪ್ರತ್ಯೇಕ ಕಾರ್ಯಕ್ರಮ ನಡೆಸಿ ಯೋಜನೆ ಲೋಕಾರ್ಪಣೆ ಮಾಡಲು ತೀರ್ಮಾನಿಸಲಾಗಿದೆ. ಆದರೆ ನೋಂದ​ಣಿಗೆ ಯಾವುದೇ ಅಂತಿಮ ಗಡುವು ಇಲ್ಲ.

ಮಾಸಿಕ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುವ ಅರ್ಹ ಗೃಹಬಳಕೆ ವಿದ್ಯುತ್‌ ಗ್ರಾಹಕರು https://sevasindhugs.karnataka.gov.in/gruhajyothi ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಜತೆಗೆ ಬೆಂಗಳೂರು ಒನ್‌, ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರ, ನಾಡಕಚೇರಿ, ಎಲ್ಲ ವಿದ್ಯುತ್‌ ಕಚೇರಿಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಹಿಂದಿನ ವರ್ಷದ ಸರಾಸರಿ ಬಳಕೆಯ ಶೇ.10 ರಷ್ಟು ಹೆಚ್ಚುವರಿ ವಿದ್ಯುತ್‌ ಉಚಿತವಾಗಿ ಬಳಸಬಹುದು. ಗರಿಷ್ಠ ವಿದ್ಯುತ್‌ ಬಳಕೆ ಮಿತಿ 200 ಯುನಿಟ್‌ ದಾಟಿದರೆ ಪೂರ್ಣ ಶುಲ್ಕ ಪಾವತಿಸಬೇಕು ಎಂದು ಇಂಧನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮನೆ ಯಜಮಾನಿಗೆ ಗೃಹಲಕ್ಷ್ಮಿ ಸವಲತ್ತು ಸಿಗಬೇಕು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ನೋಂದಣಿ ಹೇಗೆ?: ನೋಂದಣಿ ಮಾಡುವಾಗ ಆಧಾರ್‌ ಸಂಖ್ಯೆ, ವಿದ್ಯುತ್‌ ಬಿಲ್‌ನಲ್ಲಿ ನೀಡಲಾದ ವಿದ್ಯುತ್‌ ಖಾತೆ ಸಂಖ್ಯೆ, ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಆಯ್ಕೆಗಳ ವೇಳೆ ಸ್ವಂತ ಮನೆ ಅಥವಾ ಬಾಡಿಗೆದಾರ ಎಂಬ ಆಯ್ಕೆ ಬರುತ್ತದೆ. ಬಾಡಿಗೆದಾರರಾಗಿದ್ದಲ್ಲಿ ಬಾಡಿಗೆ ಮನೆ ವಾಸ ದೃಢೀಕರಿಸುವ ಆಧಾರ್‌ ಅಥವಾ ಮತದಾರರ ಗುರುತಿನ ಚೀಟಿ ವಿವರಗಳನ್ನು ನೀಡಬೇಕು.

ಕಾಂಗ್ರೆಸ್‌ ‘ಗ್ಯಾರಂಟಿ’ಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲವೆನ್ನುವುದು ಸರಿಯಲ್ಲ: ಸಂಸದ ಸಿದ್ದೇಶ್ವರ

ಗೊಂದಲ ಬಗೆಹರಿಸಲು ಸಹಾಯವಾಣಿ:ಯೋಜನೆ ಹಾಗೂ ಅರ್ಜಿ ಸಲ್ಲಿಕೆ ಸಂಬಂಧ ಯಾವುದೇ ಗೊಂದಲಗಳಿದ್ದರೂ ಹೆಚ್ಚಿನ ಮಾಹಿತಿಗೆ 24/7 ಸೇವೆಯ 1912 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ https://sevasindhugs.karnataka.gov.in/gruhajyothi ಗೆ ಭೇಟಿ ನೀಡಬಹುದು ಎಂದು ಇಂಧನ ಇಲಾಖೆ ತಿಳಿಸಿದೆ.