ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವ್ಯಾಪ್ತಿಯ ಅಧಿಕಾರಿ ಮತ್ತು ನೌಕರರು ವಾರಿಯರ್ಸ್ 2020ರ ಏಪ್ರಿಲ್‌ 1ರಿಂದ ಪೂರ್ವಾನ್ವಯವಾಗುವಂತೆ ‘ಕೊರೋನಾ ವಾರಿಯರ್ಸ್‌’ ಎಂದು ಘೋಷಣೆ

ಬೆಂಗಳೂರು (ಜು.03): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವ್ಯಾಪ್ತಿಯ ಅಧಿಕಾರಿ ಮತ್ತು ನೌಕರರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು 2020ರ ಏಪ್ರಿಲ್‌ 1ರಿಂದ ಪೂರ್ವಾನ್ವಯವಾಗುವಂತೆ ‘ಕೊರೋನಾ ವಾರಿಯರ್ಸ್‌’ ಎಂದು ಘೋಷಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆದೇಶ ಹೊರಡಿಸಿದೆ. 

ಅಲ್ಲದೆ ಸೇವೆಯಲ್ಲಿರುವಾಗ ಕೊರೋನಾದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ಪರಿಹಾರ ನೀಡಲು ಹಾಗೂ ಅನಾರೋಗ್ಯ ಉಂಟಾದರೆ ಚಿಕಿತ್ಸೆಗೆ ತಗಲುವ ವೈದ್ಯಕೀಯ ವೆಚ್ಚ ಭರಿಸಲು ಕ್ರಮ ಕೈಗೊಳ್ಳಬೇಕು. ಈ ಅವಧಿಯಲ್ಲಿ 14 ದಿನಗಳ ವಿಶೇಷ ರಜೆಯನ್ನು ಪಡೆಯಲು ಅವಕಾಶ ನೀಡಬೇಕು. ರಜೆ ಅವಧಿ ಮೀರಿ ವೈಯಕ್ತಿಕ ಕಾರಣಗಳ ಮೇಲೆ ರಜೆ ತೆರಳುವ ಅಧಿಕಾರಿ, ನೌಕರರು ಹಾಗೂ ಅಮಾನತ್ತಿನಲ್ಲಿರುವ ಅಧಿಕಾರಿ, ನೌಕರರು ಸರ್ಕಾರದ ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.

ದ.ಕ., ಉಡುಪಿ ಹಳ್ಳಿಗಳಲ್ಲಿ ಕೋವಿಡ್‌ ಸೋಂಕು ಉಲ್ಬಣ!

ಕೊರೋನಾ ಸಂಕಷ್ಟದ ಅವಧಿಯಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿ, ನೌಕರರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಕೊರೋನಾ ಯೋಧರಾಗಿರುತ್ತಾರೆ. ಹೀಗಾಗಿ ತಾ.ಪಂ., ಜಿ.ಪಂ. ಹಾಗೂ ಗ್ರಾ.ಪಂ. ಅಧಿಕಾರಿಗಳು, ನೌಕರರನ್ನು ಆಯಾ ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿಯ ತಾಲೂಕು ನಿರ್ವಾಹಕ ಅಧಿಕಾರಿಗಳು ಕೊರೋನಾ ವಾರಿಯರ್ಸ್‌ ಎಂದು ಗುರುತಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.