ಬೆಂಗಳೂರು (ಏ.02):  ಕೊರೋನಾ ಕೇಸ್‌ಗಳು ರಾಜ್ಯದಲ್ಲಿ ಮತ್ತೆ ಮತ್ತೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿಗಳು ಸಿದ್ಧವಾಗುತ್ತಿದೆ. 

ಈ ಬಗ್ಗೆ ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಕಳೆದ ಎರಡು ದಿನಗಳಿಂದ ಕೊರೋನಾ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಮುಖ್ಯಮಂತ್ರಿಗಳೂ ಸಭೆ ಕರೆದಿದ್ದು ಎಲ್ಲಾ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು. 

ಅಲ್ಲದೇ ಯಾವ ರೀತಿ ಮಾರ್ಗ ಸೂಚಿಗಳನ್ನು ಅನುಸರಿಸಬೇಕು ಎಂದು ಕೆಲವೇ ಗಂಟೆಗಳಲ್ಲಿ ತಿಳಿಸಲಾಗುವುದು ಎಂದು ಸುಧಾಕರ್ ಹೇಳಿದರು. ಈ ಬಗ್ಗೆ ಮುಖ್ಯಮಂತ್ರಿಗಳೇ ಅಧಿಕೃತ ಮಾರ್ಗಸೂಚಿ ಬಿಡುಗಡೆ ಮಾಡುತ್ತಾರೆಂದು ಹೇಳಿದರು. 

ಸರ್ಕಾರಿ ನೌಕರರ ಕೋವಿಡ್‌ ಚಿಕಿತ್ಸೆ ವೆಚ್ಚ ಮರುಪಾವತಿಗೆ ನಿರ್ಧಾರ

ಇಂದು ಸೆಂಟ್ರಲ್ ಕ್ಯಾಬಿನೆಟ್ ಸೆಕ್ರೆಟರಿ ಸಭೆ ನಡೆಯುತ್ತಿದ್ದು, ಕೋವಿಡ್ ಸಂಬಂಧ ನಿಯಂತ್ರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರ ಮಾಹಿತಿ ಕೂಡ ಅಧಿಕೃತವಾಗಿ ಹೊರಗೆ ಬರಲಿದೆ ಎಂದರು.

"

ತಾಂತ್ರಿಕ ಸಲಹಾ ಸಮಿತಿಯ ವರದಿಯ ಜೊತೆಗೆ ನಾವು ಭೇಟಿಯಾಗಿದ್ದೆವು. ಮುಖ್ಯ ಕಾರ್ಯದರ್ಶಿಗಳ ಮಾರ್ಗಸೂಚಿ ಅಂತಿಮವಾಗಲಿದೆ. ಈಗಾಗಲೇ ಶಾಲೆಗಳಲ್ಲಿ ಪರೀಕ್ಷೆ ನಡೆಸುವುದು, ತರಗತಿಗಳ ಬಗ್ಗೆಯೂ ಶಿಕ್ಷಣ ಸಚಿವರು ತಿಳಿಸಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು.