ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿಗೆ ರಾಜ್ಯ ಸರ್ಕಾರ ನಿರ್ಧಾರ| ಜನರಲ್‌ ವಾರ್ಡ್‌ಗೆ ಪ್ರತಿ ದಿನಕ್ಕೆ 10 ಸಾವಿರ ರು., ಎಚ್‌ಡಿಯು ವಾರ್ಡ್‌ 12 ಸಾವಿರ ರು., ಐಸಿಯು ವಾರ್ಡ್‌ಗೆ 15 ಸಾವಿರ ರು., ವೆಂಟಿಲೇಟರ್‌ ಸಹಿತ ಐಸಿಯು ವಾರ್ಡ್‌ಗೆ 25 ಸಾವಿರ ರು.ಗಳಂತೆ ಹಣ ಬಿಡುಗಡೆ| 

ಬೆಂಗಳೂರು(ಏ.02):  ತುರ್ತು ಮತ್ತು ಅನಿವಾರ್ಯ ಸ್ಥಿತಿಗಳಲ್ಲಿ ಸರ್ಕಾರದ ಸಕ್ಷಮ ಪ್ರಾಧಿಕಾರದ ಶಿಫಾರಸು ಇಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದ ಸರ್ಕಾರಿ ನೌಕರರು ಅಥವಾ ಅವರ ಕುಟುಂಬ ಸದಸ್ಯರ ಚಿಕಿತ್ಸಾ ವೆಚ್ಚ ಮರುಪಾವತಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ತುರ್ತು ಮತ್ತು ಅನಿವಾರ್ಯ ಸನ್ನಿವೇಶದಲ್ಲಿ ಸರ್ಕಾರಿ ನೌಕರರು ಅಥವಾ ಅವರ ಕುಟುಂಬದ ಅವಲಂಬಿತ ಸದಸ್ಯರು ಸಾರ್ವಜನಿಕ ಆರೋಗ್ಯ ಪ್ರಾಧಿಕಾರದ ರೆಫರಲ್‌ ಇಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದಿರುತ್ತಾರೆ. 

ಕೊರೋನಾ ಕಾಟ: ಬೆಂಗ್ಳೂರಿನ ಆಸ್ಪತ್ರೆಗಳಲ್ಲಿ ಕೊರೋನಾ ಬೆಡ್‌ ಭರ್ತಿ..!

ಇಂತಹವರ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿಗೆ ಜನರಲ್‌ ವಾರ್ಡ್‌ಗೆ ಪ್ರತಿ ದಿನಕ್ಕೆ 10 ಸಾವಿರ ರು., ಎಚ್‌ಡಿಯು ವಾರ್ಡ್‌ 12 ಸಾವಿರ ರು., ಐಸಿಯು ವಾರ್ಡ್‌ಗೆ 15 ಸಾವಿರ ರು., ವೆಂಟಿಲೇಟರ್‌ ಸಹಿತ ಐಸಿಯು ವಾರ್ಡ್‌ಗೆ 25 ಸಾವಿರ ರು.ಗಳಂತೆ ಹಣ ಬಿಡುಗಡೆ ಮಾಡಲಾಗುವುದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.