Asianet Suvarna News Asianet Suvarna News

ಬಾರ್ & ರೆಸ್ಟೋರೆಂಟ್ ಓಪನ್ ಯಾವಾಗ? ಅಬಕಾರಿ ಸಚಿವರು ಕೊಟ್ರು ಉತ್ತರ

ಬಾರ್ & ರೆಸ್ಟೋರೆಂಟ್ ಓಪನ್ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ಮದ್ಯ ದರ ಏರಿಕೆ ಸಂಬಂಧಿಸಿದಂತೆ ಅಬಕಾರಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

govt decides not to open bar and restaurant till May 17th Says excise-minister nagesh
Author
Bengaluru, First Published May 7, 2020, 2:28 PM IST
  • Facebook
  • Twitter
  • Whatsapp

ಕೋಲಾರ, (ಮೇ.07): ಕೊರೋನಾ ವೈರಸ್ ಲಾಕ್ ಡೌನ್ 3.0 ನಡುವೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲ ಆರ್ಥಿಕ ಚಟುವಟಿಕೆಗಳಿಗೆ ವಿನಾಯಿತಿ ನೀಡಿದೆಯಾದರೂ ಸದ್ಯಕ್ಕೆ ಬಾರ್ ಮತ್ತು ರೆಸ್ಟೋರೆಂಟ್ ತೆರೆಯದಿರಲು ಸರ್ಕಾರ ನಿರ್ಧರಿಸಿದೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ.

ಇಂದು (ಗುರುವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ನಡುವೆ ಷರತ್ತುಗಳೊಂದಿಗೆ ಮೇ.04ರಿಂದ ಮದ್ಯದ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರವು ಸಂಪೂರ್ಣ ಅನುಮತಿ ನೀಡಿದೆಯಾದರೂ ಬಾರ್ ಮತ್ತು ರೆಸ್ಟೋರೆಂಟ್ ತೆರೆಯದಿರಲು ಸರ್ಕಾರ ನಿರ್ಧರಿಸಿದೆ. ಕೇವಲ ಎಂಎಸ್‌ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು.

ಮದ್ಯ ಪ್ರಿಯರ ಜೇಬಿಗೆ ಸದ್ದಿಲ್ಲದೇ ದೊಡ್ಡ ಕತ್ತರಿ,  ಕರ್ನಾಟಕದಲ್ಲಿ ಬಲು ದುಬಾರಿ!

ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಮಾಡಲಾಗುತ್ತೆ ಎಂಬ ಸುದ್ದಿ ಹಬ್ಬುತ್ತಿದೆ. ಆದರೆ ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಬಾರ್ ಅಂಡ್ ರೆಸ್ಟೋರೆಂಟ್ ಸದ್ಯ ಓಪನ್ ಮಾಡುವ ಚಿಂತನೆ ಇಲ್ಲ. 18 ನೇ ತಾರೀಖಿನ ಬಳಿಕ ತೀರ್ಮಾನ ಮಾಡ್ತೇವೆ. ಎಂದು ಸ್ಪಷ್ಟಪಡಿಸಿದರು.

ಬಜೆಟ್‌ನಲ್ಲಿ ಹೇಳಿದಂತೆ ಶೇ 6 ರಷ್ಟು ಹಾಗೂ ಈಗ ಶೇ 11ರಷ್ಟು ಸೇರಿಸಿ ಶೇ 17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಅದೇಶದಲ್ಲಿ ವಿವರಣೆ ಸಿಗಲಿದೆ. ಇನ್ನೂ ಹದಿನೈದು ದಿನಕ್ಕೆ ಬೇಕಾದಷ್ಟು ಮದ್ಯ ನಮ್ಮ ಬಳಿ ಇದೆ. ನಿನ್ನೆಗಿಂತಲೂ ಹೆಚ್ಚು ಆದಾಯ ಇವತ್ತು ಸರ್ಕಾರಕ್ಕೆ ಬಂದಿದೆ. ಇವತ್ತು ಹೊಸ ತೆರಿಗೆ ಸೇರಿದೆ. ಹೀಗಾಗಿ ಸರ್ಕಾರಕ್ಕೆ ಹೆಚ್ಚು ರಾಜಧನ ಬರುತ್ತದೆ ಎಂದು ತಿಳಿಸಿದರು.

ಲೆಕ್ಕಾಚಾರ
ರಾಜ್ಯಾದ್ಯಂತ ಶೇ.40 ರಷ್ಟು ಮದ್ಯದಂಗಡಿ ತೆರೆದಿದ್ದು, ಇದುವರೆಗೂ 500 ಕೋಟಿ ರೂ. ವರೆಗೂ ಕಲೆಕ್ಷನ್ ಆಗಿದೆ. ಇನ್ನು ಇಂದಿನಿಂದ 11 ಪರ್ಸೆಂಟ್ ಟ್ಯಾಕ್ಸ್ ಹೆಚ್ಚಿಸಲಾಗಿದ್ದು, ಒಟ್ಟು 18 ಸ್ಲ್ಯಾಬ್ ನಲ್ಲಿ 4 ಸ್ಲ್ಯಾಬ್ ನಲ್ಲಿ ಹೆಚ್ಚಿನ ಆದಾಯ ಬರಲಿದೆ. ಒಟ್ಟು 22,500 ಸಾವಿರ ಕೋಟಿ ಟಾರ್ಗೆಟ್ ಇತ್ತು. ತೆರಿಗೆ ಹೆಚ್ಚಳ ಆಗಿರೋದ್ರಿಂದ 2,500 ಕೋಟಿ ಹೆಚ್ಚಿಗೆ ಬರಲಿದೆ. ಈ ವರ್ಷ ಒಟ್ಟು 25 ಸಾವಿರ ಕೋಟಿ ನಮ್ಮ ಬೊಕ್ಕಸಗೆ ಬರಲಿದೆ ಎಂದರು.

ಆಂಧ್ರ ಹಾಗೂ ಮಹಾರಾಷ್ಟ್ರ ಮಾದರಿ ಸೇಲ್
ಕೊರೋನಾ ನಿಯಂತ್ರಣಕ್ಕಾಗಿ ಆರ್ಥಿಕ ಸಂಪನ್ಮೂಲ ಸಂಗ್ರಹದ ಉದ್ದೇಶದಿಂದ ಮದ್ಯಕ್ಕೆ ಹೆಚ್ಚುವರಿ ಬೆಲೆ ಹಾಕುವುದು ಉತ್ತಮ. ಶೇಕಡ 50 ರಷ್ಟು ಅಲ್ಲದಿದ್ದರೂ ಹೆಚ್ಚು ಮಾಡುವುದು ಒಳಿತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಮದ್ಯಪ್ರಿಯರು ಎಷ್ಟೇ ದುಬಾರಿಯಾದರೂ ಖರೀದಿ ಮಾಡ್ತಾರೆ. ದೆಹಲಿ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮಾದರಿ ಅಳವಡಿಸುವ ಬಗ್ಗೆ ಚಿಂತನೆ ಇದ್ದು, ಈ ಸಂಬಂಧ ಚರ್ಚೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

Follow Us:
Download App:
  • android
  • ios