Asianet Suvarna News Asianet Suvarna News

ಕರ್ನಾಟಕ ರತ್ನ ಬೆನ್ನಲ್ಲೇ ಪುನೀತ್‌ಗೆ ಮತ್ತೊಂದು ಮರಣೋತ್ತರ ಪ್ರಶಸ್ತಿ

* ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ.
* ರಾಜ್ಯ ಸರ್ಕಾರದಿಂದ ಸಹಕಾರ ರತ್ನ ಪ್ರಶಸ್ತಿ ಪ್ರಶಸ್ತಿ ಪ್ರದಾನ
* ಕರ್ನಾಟಕ ರತ್ನ ಬೆನ್ನಲ್ಲೇ ಪುನೀತ್‌ಗೆ ಮತ್ತೊಂದು ಮರಣೋತ್ತರ ಪ್ರಶಸ್ತಿ
* ಮಾರ್ಚ್ 20ರಂದು ಪ್ರಶಸ್ತಿ ಪ್ರದಾನ ಮಾಡಲಿರುವ ಸಿಎಂ ಬೊಮ್ಮಾಯಿ

Govt decided cooperative ratna award to punith rajkumar Says Minister somashekar rbj
Author
First Published Mar 18, 2022, 4:37 PM IST | Last Updated Mar 18, 2022, 4:38 PM IST

ಬೆಂಗಳೂರು, (ಮಾ.19): ನಟ ಪವರ್ ಸ್ಟಾರ್ ದಿ. ಪುನೀತ್ ರಾಜ್ ಕುಮಾರ್ (Punith Rajkumar) ಅವರಿಗೆ ಈಗಾಗಲೇ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇದೀಗ ಸಹಕಾರ ರತ್ನ ಪ್ರಶಸ್ತಿ (Cooperative Ratna Award) ನೀಡಲು ತೀರ್ಮಾನಿಸಲಾಗಿದೆ. 

ಹೌದು...ಈ  ಬಗ್ಗೆ ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಮಾಹಿತಿ ನೀಡಿದ್ದು, ನಟ ಪವರ್ ಸ್ಟಾರ್ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶೀಘ್ರದಲ್ಲೇ ಅಪ್ಪುಗೆ ಕರ್ನಾಟಕ ರತ್ನ: ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಗ್ಗೆ ಸಿಎಂ ಹೇಳಿದ್ದೇನು?

ಪುನೀತ್ ರಾಜ್ ಕುಮಾರ್ ಡೈರಿ ಅಂಬಾಸಿಡರ್ ಆಗಿದ್ದರು ಹೀಗಾಗಿ ಅಪ್ಪುಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಒಟ್ಟು 50 ಮಂದಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಅಂತಿಪಟ್ಟಿ ಸಿಎಂಗೆ ಕೊಟ್ಟಿದ್ದೇವೆ ಸಂಜೆ ಸಿಎಂ ಪ್ರಶಸ್ತಿ ಪಟ್ಟಿ ನೀಡಲಿದ್ದಾರೆ. ನಂತರ ಸಹಕಾರ ರತ್ನ ಪ್ರಶಸ್ತಿ ಪಟ್ಟಿ  ಪ್ರಕಟಿಸುತ್ತೇವೆ ಎಂದರು.

ಪ್ರತಿವರ್ಷ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಹಲವು ಕಾರ್ಯಕ್ರಮ ಮಾಡ್ತೀವಿ. ಒಂದು ಜಿಲ್ಲೆಗೆ ಒಬ್ಬರಂತೆ ಆಯ್ಕೆ ಮಾಡಿದ್ದೇವೆ. ಈ ಪ್ರಶಸ್ತಿಗೆ ನೂರು ಅರ್ಜಿಗಳು ಬಂದಿವೆ. ಯಾರು ಸಾಧನೆ ಮಾಡಿದ್ದಾರೆ ಅವರನ್ನು ಗುರುತಿಸಿ ಎಂದು ಸಿಎಂ ಹೇಳಿದ್ದಾರೆ. ನಾವೇ ಒಂದಷ್ಟು ಮಂದಿಯನ್ನು ಗುರುತಿಸಿದ್ದೇವ ಎಂದು ತಿಳಿಸಿದರು.

ಸ್ತೀಶಕ್ತಿ, ಸ್ವಸಹಾಯ ಸಂಘಗಳಿಗೆ 20 ಕೋಟಿ ರೂ.ವರೆಗೆ ಸಾಲ ಕೊಡ್ತೀವೆ. ಭಾನುವಾರ ಎರಡನೇ ಹಂತದ ಬೆಳೆ ಸಾಲಕ್ಕೂ ಚಾಲನೆ ಕೊಡಲಾಗುವುದು ಎಂದು ಹೇಳಿದರು.

ಮಾರ್ಚ್ 20ರಂದು ಪ್ರಶಸ್ತಿ ಪ್ರದಾನ 
ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ  ರಾಜ್ಯ ಸರ್ಕಾರದಿಂದ ಸಹಕಾರ ರತ್ನ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮಾರ್ಚ್ 20ರಂದು  ಸಿಎಂ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೆಂಗೇರಿ ಉಪನಗರದಲ್ಲಿ  ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಶಸ್ತಿ ಪ್ರದಾನ ಬಗ್ಗೆ ಸಹಕಾರ ಮಂಡಳಿ ಅಧ್ಯಕ್ಷ ಜಿಟಿ ದೇವೇಗೌಡ ಮಾಹಿತಿ ನೀಡಿದರು.

ಹಾಗೆಯೇ ಸಹಕಾರ ರತ್ನ ಪ್ರಶಸ್ತಿ 15 ಗ್ರಾಂ ಚಿನ್ನದ ಪದಕ  ಒಂದು ಸರ್ಟಿಫಿಕೇಟ್ ಒಳಗೊಂಡಿದೆ ಎಂದರು. ನಟ ಅಪ್ಪುಗೆ ಈಗಾಗಲೇ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದ್ದು ಶೀಘ್ರವೇ ಪ್ರದಾನ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಡಿಸಿಸಿ-ಅಪೆಕ್ಸ್ ಬ್ಯಾಂಕ್ ವಿಲೀನ
ಇನ್ನು ಇದೇ ವೇಳೆ ಡಿಸಿಸಿ-ಅಪೆಕ್ಸ್ ಬ್ಯಾಂಕ್ ವಿಲೀನ ಮಾಡುವ ವಿಚಾರದ ಬಗ್ಗೆ ಸೋಮೇಶರ್ ಪ್ರತಿಕ್ರಿಯಿಸಿದ್ದು, ಡಿಸಿಸಿ ಬ್ಯಾಂಕ್ ಗಳನ್ನು ಅಪೆಕ್ಸ್ ಬ್ಯಾಂಕ್ ನೊಡನೆ ವಿಲೀನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಸುತ್ತಿನ ಸಭೆ ಮಾಡಿದ್ದೇವೆ. ಈಗಾಗಲೇ ಜಾರ್ಖಂಡ್ ಮತ್ತು ಕೇರಳದಲ್ಲಿ ಈ ಮಾದರಿ ಚಾಲನೆಯಲ್ಲಿ ಇದೆ. ಈ ರೀತಿಯ ವಿಲೀನ ಪ್ರಕ್ರಿಯೆ ಯಿಂದ ರೈತರಿಗೆ ಬಡ್ಡಿಯಲ್ಲಿ ಉಳಿತಾಯ ಆಗುತ್ತದೆ. ಕರ್ನಾಟಕದಲ್ಲಿ ಕೂಡಾ ಇದೇ ರೀತಿ ವಿಲೀನ ಮಾಡುವ ಚಿಂತನೆ ಇದೆ ಎಂದರು.

ಅಧಿವೇಶನ ಮುಗಿದ ಬಳಿಕ ಅಧಿಕಾರಿಗಳು ಕೇರಳ ಮತ್ತು ಜಾರ್ಖಂಡ್ ಗೆ ಅದ್ಯಯನ ಪ್ರವಾಸಕ್ಕೆ ಹೋಗಲಿದ್ದು,  ಅಲ್ಲಿನ ಸಾಧಕಬಾಧಕಗಳನ್ನು ನೋಡಿ ವರದಿ ಕೊಡಲಿದ್ದಾರೆ. ನಂತರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ತೀವಿ ಎಂದು ವಿವರಿಸಿದರು.

ಕರ್ನಾಟಕ ರತ್ನ ಘೋಷಣೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ(Karnataka Ratna award) ನೀಡುವುದಾಗಿ ಕರ್ನಾಟಕ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಇತ್ತೀಚಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ದಿ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ 'ಪುನೀತ ನಮನ' ಕಾರ್ಯಕ್ರಮ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), 'ಪುನೀತ್ ಅವರನ್ನು ನಾನು ಬಾಲ್ಯದಿಂದ ಬಲ್ಲೆ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಬಾಲಕ ಪುನೀತ್​. ಅಷ್ಟು ಸಣ್ಣ ವಯಸ್ಸಿನಲ್ಲಿ ಹಾಗೆ ನಟಿಸೋದು ಸುಲಭವಲ್ಲ' ಎಂದಿದ್ದರು. ಇದೇ ಸಮಯದಲ್ಲಿ ಪವರ್ ಸ್ಟಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದ್ದರು.

Latest Videos
Follow Us:
Download App:
  • android
  • ios