Asianet Suvarna News Asianet Suvarna News

ಕೊನೆಗೂ ಸಿಎಂಬೊಮ್ಮಾಯಿಗೆ ಸರ್ಕಾರಿ ಬಂಗಲೆ ಹಂಚಿಕೆ

  • ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ಬಂಗ್ಲೆ ಪಡೆದುಕೊಂಡಿದ್ದಾರೆ.
  • ರೇಸ್‌ಕೋರ್ಸ್‌ ರಸ್ತೆಯ ನಂ.1 ಬಂಗ್ಲೆಯನ್ನು ಇದೀಗ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹಂಚಿಕೆ
Govt allotted bungalow for CM basavaraj bommai snr
Author
Bengaluru, First Published Aug 18, 2021, 6:57 AM IST
  • Facebook
  • Twitter
  • Whatsapp

ಬೆಂಗಳೂರು (ಆ.18): ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ಬಂಗ್ಲೆ ಪಡೆದುಕೊಂಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ನೀಡಲಾಗಿದ್ದ ರೇಸ್‌ಕೋರ್ಸ್‌ ರಸ್ತೆಯ ನಂ.1 ಬಂಗ್ಲೆಯನ್ನು ಇದೀಗ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹಂಚಿಕೆ ಮಾಡಿ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದೆ.

'ಸಿಎಂ ಬೊಮ್ಮಾಯಿಗೆ ತಂದೆ ಮಾರ್ಗದರ್ಶನ ಆಗಬೇಕು-ಅತ್ತೆಯದ್ದಲ್ಲ'

ಆರ್‌.ಟಿ.ನಗರದಲ್ಲಿನ ಬೊಮ್ಮಾಯಿ ಅವರ ಸ್ವಂತ ನಿವಾಸಕ್ಕೆ ಸಾರ್ವಜನಿಕರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಆ ಭಾಗದಲ್ಲಿ ಸಂಚಾರ ವ್ಯವಸ್ಥೆ ಏರುಪೇರಾಗುತ್ತಿದೆ. ಸುತ್ತಲಿನ ನಿವಾಸಿಗಳಿಗೂ ಕಿರಿಕಿರಿಯಾಗುತ್ತಿದೆ.

 ಹೀಗಾಗಿ, ಸರ್ಕಾರಿ ನಿವಾಸಕ್ಕೆ ಮುಖ್ಯಮಂತ್ರಿಗಳು ಸ್ಥಳಾಂತರವಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಸಿವೆ.

Follow Us:
Download App:
  • android
  • ios