ನನಗೆ ಎಂಟು ತಿಂಗಳ ಹಿಂದೆ ಚೈತ್ರಾ ಕುಂದಾಪುರಳ ಪರಿಚಯವಾಯಿತು. ನನ್ನ ಆಸ್ತಿಯನ್ನು ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಸಾಲ ಮಾಡಿ ದುಡ್ಡು ಕೊಟ್ಟಿದ್ದೇನೆ. ಯಾವುದೇ ಪಕ್ಷವಿರಲಿ. ಬಿಜೆಪಿ ಹಾಗೂ ಕಾಂಗ್ರೆಸ್ ಯಾವುದೇ ಇರಲಿ. ಯಾರಿಗೂ ಮೋಸವಾಗಬಾರದು: ಎಂದು ಉದ್ಯಮಿ ಗೋವಿಂದಬಾಬು ಪೂಜಾರಿ  

ಬೆಂಗಳೂರು(ಸೆ.14): ನಾನು ಬ್ಯಾಂಕ್‌ನಲ್ಲಿ ಆಸ್ತಿಯನ್ನು ಅಡಮಾನವಿಟ್ಟು ಬೈಂದೂರು ಕ್ಷೇತ್ರದ ಟಿಕೆಟ್ ಪಡೆಯಲು ಚೈತ್ರಾ ಕುಂದಾಪುರಳಿಗೆ ಕೊಟ್ಟಿದ್ದೆ. ನನಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಉದ್ಯಮಿ ಗೋವಿಂದಬಾಬು ಪೂಜಾರಿ ಹೇಳಿದ್ದಾರೆ.

ಈ ವಂಚನೆ ಸಂಬಂಧ ಮಾಧ್ಯಮಗಳಿಗೆ ಮಾತನಾಡಿರುವ ಪೂಜಾರಿ ಅವರು, ನಾನು ಮೋಸ ಹೋದಂತೆ ಯಾರಿಗೂ ಆಗಬಾರದು ಎಂಬ ಕಾರಣಕ್ಕೆ ಪೊಲೀಸರಿಗೆ ದೂರು ಕೊಟ್ಟಿದ್ದೇನೆ ಎಂದಿದ್ದಾರೆ.
"ನನಗೆ ಎಂಟು ತಿಂಗಳ ಹಿಂದೆ ಚೈತ್ರಾ ಕುಂದಾಪುರಳ ಪರಿಚಯವಾಯಿತು. ನನ್ನ ಆಸ್ತಿಯನ್ನು ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಸಾಲ ಮಾಡಿ ದುಡ್ಡು ಕೊಟ್ಟಿದ್ದೇನೆ. ಯಾವುದೇ ಪಕ್ಷವಿರಲಿ. ಬಿಜೆಪಿ ಹಾಗೂ ಕಾಂಗ್ರೆಸ್ ಯಾವುದೇ ಇರಲಿ. ಯಾರಿಗೂ ಮೋಸವಾಗಬಾರದು" ಎಂದು ಮಾಧ್ಯಮಗಳಿಗೆ ಪೂಜಾರಿ ಹೇಳಿಕೆ ನೀಡಿದ್ದಾರೆ.

ಚೈತ್ರಾ ಕುಂದಾಪುರ ಆ ಮಾತು ಹೇಳಿದ್ಯಾಕೆ? ಆ ಯೋಜನೆಗೂ.. ಈ ಕೇಸ್‌ಗೂ ಏನು ಲಿಂಕ್?

"ಪ್ರಧಾನ ಮಂತ್ರಿಗಳ ಕಾರ್ಯಾಲಯ ಹಾಗೂ ಆರ್‌ಎಸ್‌ಎಸ್ ನಾಯಕರ ಸಂಪರ್ಕದ ಹೇಳಿ ನನ್ನನ್ನು ನಂಬಿಸಿದರು. ನಾನು ಅವರ ಮಾತುಗಳನ್ನು ನಂಬುವಂತೆ ಸನ್ನಿವೇಶ ಸೃಷ್ಟಿಸಿದ್ದರು. ಈ ಬಗ್ಗೆ ಕೆಲವೇ ದಿನಗಳಲ್ಲಿ ವಿಸ್ತೃತವಾಗಿ ಹೇಳುತ್ತೇನೆ" ಎಂದು ಪೂಜಾರಿ ತಿಳಿಸಿದ್ದಾರೆ.