ಮೇಕೆದಾಟು ಯೋಜನೆ: ಅಣ್ಣಾಮಲೈಗೆ ತಿರುಗೇಟು ಕೊಟ್ಟ ನೂತನ ಜಲಸಂಪನ್ಮೂಲ ಸಚಿವ
* ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಜಾರಿಗೆಗೆ ವಿರೋಧ
* ಅಣ್ಣಾಮಲೈಗೆ ತಿರುಗೇಟು ಕೊಟ್ಟ ನೂತನ ಜಲಸಂಪನ್ಮೂಲ ಸಚಿವ
* ಕೆ.ಅಣ್ಣಾಮಲೈ ಹೋರಾಟದಲ್ಲಿ ಯಾವುದೇ ಅರ್ಥ ಇಲ್ಲ ಎಂದ ಕಾರಜೋಳ
ಬಾಗಲಕೋಟೆ, (ಆ.08): ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಜಾರಿಗೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ಕೊಟ್ಟಿದ್ದಾರೆ.
ಬಾಗಲಕೋಟೆಯಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯ, ನಮ್ಮ ನೀರಿಗೆ ಸಂಬಂಧಿಸಿ ಕೆಲಸ ಮಾಡಲು ಯಾರ ಅಪ್ಪಣೆಯೂ ಬೇಕಿಲ್ಲ. ಕಾನೂನಾತ್ಮಕವಾಗಿ ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ. ಕುಡಿಯುವ ನೀರಿಗೆ ಬಳಸಿ, ವಿದ್ಯುತ್ ಉತ್ಪಾದನೆ ಮಾಡಿ ಬಳಿಕ ನೀರನ್ನು ನದಿಗೆ ಹರಿಬಿಡುತ್ತೇವೆ ಎಂದರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ತಿರುಗೇಟು ಕೊಟ್ಟ ಸಿಎಂ ಬೊಮ್ಮಾಯಿ
ಕೆ.ಅಣ್ಣಾಮಲೈ ಹೋರಾಟದಲ್ಲಿ ಯಾವುದೇ ಅರ್ಥ ಇಲ್ಲದ ಅರ್ಥಹೀನವಾದ ಹೋರಾಟ. ನ್ಯಾಯ ಸಮ್ಮತವಾಗಿ ಮೇಕೆದಾಟು ಯೋಜನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯದಲ್ಲಿ ಉಂಟಾದ ಪ್ರವಾಹದ ಬಗ್ಗೆ ಪ್ರತಿಕ್ರಿಯಿಸಿ, ಪ್ರವಾಹ ಈಗಷ್ಟೇ ಕಡಿಮೆ ಆಗಿದೆ, ಇನ್ನೂ ಕೆಲವೆಡೆ ಕೆಸರಿದೆ. ಪ್ರವಾಹ ಹಾನಿ ಕುರಿತು ಏಳೆಂಟು ದಿನ ಸಂಪೂಣ೯ ಸವೆ೯ ಕಾಯ೯ ನಡೆಯಲಿದೆ. ಬಳಿಕ ಯಾವುದೇ ಚೆಕ್ ಅಥವಾ ಕ್ಯಾಶ್ ಮೂಲಕ ಪರಿಹಾರ ನೀಡೋದಿಲ್ಲ. ಈ ಬಾರಿ ಆರ್.ಟಿ.ಜಿ.ಎಸ್ ಮೂಲಕ ಪರಿಹಾರ ಹಾಕಲಾಗುತ್ತದೆ ಎಂದು ಹೇಳಿದರು.
ಪ್ರತಿ ಗ್ರಾಮದಲ್ಲೂ ಹಾನಿ ಬಗ್ಗೆ ಲಿಸ್ಟ್ ಮಾಡಿ ಹಚ್ಚಲಾಗುತ್ತೆ. ಯಾರಾದಾದ್ರೂ ಬಿಟ್ಟು ಹೋಗಿದ್ದರೆ ತಹಶೀಲ್ದಾರ್ ಇಲ್ಲವೇ ಡಿಸಿಗೆ ಅಜಿ೯ ನೀಡಲಿ.
ಪರಿಹಾರದಲ್ಲಿ ಗೊಂದಲವಾಗಬಾರದೆನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದ ತಿಳಿಸಿದರು.