ರಾಜಭವನ ಮಾಹಿತಿ ಸೋರಿಕೆ ಹೇಗಾಯ್ತು?: ಸಿದ್ದು ಸರ್ಕಾರಕ್ಕೆ ರಾಜ್ಯಪಾಲರ ಪತ್ರಭಾಣ..!

ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿ ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರದಿಂದ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟ ಹೆಚ್ಚಾಗುತ್ತಿದೆ. ಮುಡಾದಿಂದ ನಿಯಮ ಮೀರಿ ಕಾಮಗಾರಿ ಕೈಗೊಂಡಿರುವ ಕುರಿತು ಪಿ.ಎಸ್.ನಟರಾಜ್ ಎಂಬುವವರು ಮುಖ್ಯಮಂತ್ರಿ ವಿರುದ್ಧ ಸಲ್ಲಿಸಿದ್ದ ದೂರಿನ ಬಗ್ಗೆ ವಿವರಣೆ ಕೋರಿ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರ ಬೆನ್ನಲ್ಲೇ ರಾಜ್ಯಪಾಲರು ಸರ್ಕಾರಕ್ಕೆ ಬರೆದಿರುವ ಮತ್ತೊಂದು ಪತ್ರ ಬಹಿರಂಗವಾಗಿದೆ.

Governors letter to Siddaramaiah government for How did the Raj Bhavan information leak grg

ಬೆಂಗಳೂರು(ಸೆ.21):  ರಾಜ್ಯ ಸರ್ಕಾರದೊಂದಿಗಿನ ಪತ್ರ ಸಮರ ಮುಂದುವರಿಸಿರುವ ರಾಜ್ಯಪಾಲರು, ಲೋಕಾಯುಕ್ತ ಸಂಸ್ಥೆ ಮತ್ತು ತಮ್ಮ ಕಚೇರಿ ನಡುವಿನ ಗೌಪ್ಯ ಪ್ರಕ್ರಿಯೆಗಳು ಸಚಿವ ಸಂಪುಟದಲ್ಲಿ ಚರ್ಚೆಯಾಗಿರುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಆ. 28ರಂದು ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಗೌಪ್ಯ ಮಾಹಿತಿ ಬಹಿರಂಗಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕ ಮತ್ತು ಶೀಘ್ರ ವರದಿ ನೀಡುವಂತೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿ ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರದಿಂದ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟ ಹೆಚ್ಚಾಗುತ್ತಿದೆ. ಮುಡಾದಿಂದ ನಿಯಮ ಮೀರಿ ಕಾಮಗಾರಿ ಕೈಗೊಂಡಿರುವ ಕುರಿತು ಪಿ.ಎಸ್.ನಟರಾಜ್ ಎಂಬುವವರು ಮುಖ್ಯಮಂತ್ರಿ ವಿರುದ್ಧ ಸಲ್ಲಿಸಿದ್ದ ದೂರಿನ ಬಗ್ಗೆ ವಿವರಣೆ ಕೋರಿ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರ ಬೆನ್ನಲ್ಲೇ ರಾಜ್ಯಪಾಲರು ಸರ್ಕಾರಕ್ಕೆ ಬರೆದಿರುವ ಮತ್ತೊಂದು ಪತ್ರ ಬಹಿರಂಗವಾಗಿದೆ.

ಸಿಎಂಗೆ ಮತ್ತೊಂದು ಗೌರ್ನರ್‌ ಕಂಟಕ: ಸಿಬಿಐ ತನಿಖೆಗೆ ಆಗ್ರಹಿಸಿ ಗೆಹಲೋತ್‌ಗೆ ದೂರು

ಅದರಲ್ಲಿ ರಾಜಭವನಕ್ಕೆ ಸಚಿವ ಸಂಪುಟ ಸಭೆಯ ನಿರ್ಣಯ ಸಮರ್ಪಕವಾಗಿ ಸಲ್ಲಿಸದಿ ರುವುದು ಹಾಗೂ ಲೋಕಾಯುಕ್ತ ಸಂಸ್ಥೆ ಮತ್ತು ತಮ್ಮ ಕಚೇರಿ ನಡುವಿನ ಪ್ರಕ್ರಿಯೆಗಳು ಬಹಿರಂಗವಾಗಿರುವ ಬಗ್ಗೆ ರಾಜ್ಯಪಾಲರು ಮಾಹಿತಿ ಕೋರಿದ್ದಾರೆ. ಗೌಪ್ಯ ಮಾಹಿತಿ ಬಹಿರಂಗವಾಗಿದ್ದು ಹೇಗೆ?: ಲೋಕಾಯುಕ್ತ ಸಂಸ್ಥೆಯು ಎಚ್.ಡಿ.ಕುಮಾರ ಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧ ಅಭಿಯೋಜನೆಗೆ (ಪ್ರಾಸಿಕ್ಯೂಷನ್) ಅನುಮತಿ ಕೋರಿ ನನ್ನ ಕಚೇರಿಯೊಂದಿಗೆ ವ್ಯವಹರಿಸಿರುವುದುಗೌಪ್ಯ ಮಾಹಿತಿಯಾಗಿದೆ. ಆದರೆ, ಈ ಪ್ರಕ್ರಿಯೆಯ ದಿನಾಂಕ ಸಹಿತ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಲೋಕಾಯುಕ್ತಸಂಸ್ಥೆಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಮೇಲೆ ಸರ್ಕಾರದ ಹಿಡಿತವಿಲ್ಲ. ಆದರೂ, ಲೋಕಾಯುಕ್ತ ಸಂಸ್ಥೆ ಮತ್ತು ರಾಜಭವನದ ನಡುವಿನ ಪ್ರಕ್ರಿಯೆಗಳು ಸಚಿವ  ಸಂಪುಟದಲ್ಲಿ ಚರ್ಚೆಯಾಗಿದ್ದು ಹೇಗೆ?  ಹಾಗೂ ಗೌಪ್ಯ ಮಾಹಿತಿ ಸೋರಿಕೆಯಾಗಿದ್ದೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ಮಾಧ್ಯಮಗಳಲ್ಲೂ ಪ್ರಕಟವಾಗಿದೆ. ಹೀಗೆ ಗೌಪ್ಯ ಮಾಹಿತಿ ಸೋರಿಕೆ, ಸಚಿವ ಸಂಪುಟದಲ್ಲಿ ಚರ್ಚೆಯಾಗಲು ದೊರೆತ ದಾಖಲೆಗಳು ಈ ಮಾಹಿತಿಗಳು ಸೇರಿದಂತೆ ಸಂಪೂರ್ಣ ದಾಖಲೆಗಳ ಸಹಿತ ಪ್ರಾಮಾಣಿಕ ಮತ್ತು ಶೀಘ್ರ ವರದಿ ನೀಡುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಸಿಗದ ಸಂಪುಟ ನಿರ್ಣಯ- ಅಸಮಾಧಾನ: 

16 ಮತ್ತು 17ನೇ ಸಚಿವ ಸಂಪುಟ ಸಭೆಗೆ ಸಂಬಂಧಿಸಿದ ಅಜೆಂಡಾ ಕಾಪಿಗಳನ್ನು ಮಾತ್ರ ರಾಜಭವನಕ್ಕೆ ಕಳುಹಿಸಲಾಗಿದೆ. ಆದರೆ, ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳ ಬಗ್ಗೆ ದಾಖಲೆಗಳನ್ನು ಕಳುಹಿಸಿರಲಿಲ್ಲ. ಅದರಲ್ಲೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಆ.22ರಂದು ನಡೆದ ಸಚಿವ ಸಂಪುಟ ಸಭೆಯ ಹೆಚ್ಚುವರಿ ಅಜೆಂಡಾದ ನಿರ್ಣಯವನ್ನು ತಲುಪಿಸಿರಲಿಲ್ಲ. ಈ ಕುರಿತು ದೂರವಾಣಿ ಮೂಲಕ ಸಚಿವ ಸಂಪುಟ ವಿಭಾಗಕ್ಕೆ ತಿಳಿಸಿದ ನಂತರ ಆ.27ರಂದು ಸಚಿವ ಸಂಪುಟ ಸಭೆಯ ನಿರ್ಣಯಗಳ ದಾಖಲೆಗಳನ್ನು ಸಲ್ಲಿಸಲಾಗಿದೆ. ಆದರೆ, ಡಿಸಿಎಂ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿನ ಹೆಚ್ಚುವರಿ ಅಜೆಂಡಾ ವಿಷಯಗಳ ನಿರ್ಣಯಗಳು ಈವರೆಗೆ ತಲುಪಿಲ್ಲ. ಕೂಡಲೇ ಅವುಗಳನ್ನು ಕಳುಹಿಸಬೇಕು ಎಂದು ಸೂಚಿಸಿದ್ದಾರೆ.

ಸೋರಿಕೆ ಮೂಲದ ಪತ್ತೆಗೂ ಎಸ್‌ಐಟಿ ತನಿಖೆ ಸಾಧ್ಯತೆ! 

ವಿವಿಧ ನಾಯಕರ ಅಭಿಯೋಜನೆಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಸೋರಿಕೆ ಎಲ್ಲಿಂದ ಆಗಿದೆ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿರುವ ಲೋಕಾ ಯುಕ್ತ ಎಸ್‌ಐಟಿಯ ಪೊಲೀಸ್ ಮಹಾನಿರೀಕ್ಷಕರು, ಅದರ ತನಿಖೆಗೆ ಅನುಮತಿ ಕೋರಿಕಾನೂನುಸುವ್ಯವ್ಯಸ್ಥೆ ಎಡಿಜಿಪಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಈ ಕುರಿತು ಲೋಕಾಯುಕ್ತ ಎಸ್‌ಐಟಿ ಪೊಲೀಸ್ ಮಹಾನಿರೀಕ್ಷಕರಿಗೆ ಸೆ. 4ರಂದು ರಾಜಭವನದಿಂದಲೂ ಸೂಚನೆ ನೀಡಲಾಗಿದೆ.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗೌರ್ನರ್‌ ಲೋಕಾಯುಕ್ತ ತನಿಖೆ ದಾಳ: ಸಂಘರ್ಷ ಇನ್ನಷ್ಟು ತೀವ್ರ..!

ಪತ್ರದಲ್ಲೇನಿದೆ? 

* ಲೋಕಾಯುಕ್ತ ಸಂಸ್ಥೆ ಮತ್ತು ರಾಜಭವನದ ನಡುವೆ ನಡೆದ ಗೌಪ್ಯ ಪ್ರಕ್ರಿಯೆಗಳನ್ನು ಸಚಿವ ಸಂಪುಟದಲ್ಲಿ ಚರ್ಚಿಸಿದ್ದು ಹೇಗೆ ಮತ್ತು ಏಕೆ? 

* ವಿಪಕ್ಷ ನಾಯಕರ ಅಭಿಯೋ ಜನೆ ಕೋರಿ ಲೋಕಾಯು ಕ್ತವು ರಾಜಭವನಕ್ಕೆ ಬರೆದ ಪತ್ರ ಸೋರಿಕೆಯಾಗಿದ್ದು ಎಲ್ಲಿಂದ ಮತ್ತು ಹೇಗೆ? 

* ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಅವರ ಪ್ರಾಸಿಕ್ಯೂಷನ್ ಬಗ್ಗೆ ನನ್ನ ಮತ್ತು ಲೋಕಾಯುಕ್ತದ ನಡುವೆ ನಡೆದಿರುವುದು ಗೌಪ್ಯ ಪತ್ರ ವ್ಯವಹಾರ

Latest Videos
Follow Us:
Download App:
  • android
  • ios