Karwar: ಸಂಭ್ರಮದ ನೇವಿ ಡೇ ಆಚರಣೆ: ರಾಜ್ಯಪಾಲ ಗೆಹ್ಲೋಟ್ ಭಾಗಿ
ಪಾಕಿಸ್ತಾನ ವಿರುದ್ಧದ ಗೆಲುವಿನ ಸವಿ ನೆನಪಿಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಣಗಾದಲ್ಲಿರುವ ಕದಂಬ ನೌಕಾ ನೆಲೆಯಲ್ಲಿ ಭಾನುವಾರ ಸಂಭ್ರಮದ ನೇವಿ ಡೇ ಆಚರಿಸಲಾಯಿತು.
ಕಾರವಾರ (ಡಿ.05): ಪಾಕಿಸ್ತಾನ ವಿರುದ್ಧದ ಗೆಲುವಿನ ಸವಿ ನೆನಪಿಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಣಗಾದಲ್ಲಿರುವ ಕದಂಬ ನೌಕಾ ನೆಲೆಯಲ್ಲಿ ಭಾನುವಾರ ಸಂಭ್ರಮದ ನೇವಿ ಡೇ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭಾಗಿಯಾಗಿದ್ದು, ಕರ್ನಾಟಕ ಫ್ಲ್ಯಾಗ್ ಆಫಿಸರ್ ಅತುಲ್ ಆನಂದ್, ಕರ್ನಾಟಕ ನೌಕಾವಲಯದ ನೇವಿ ವೈವ್ಸ್ ಸಂಘದ ಅಧ್ಯಕ್ಷೆ ಗುಲ್‌ರುಖ್ ಆನಂದ್, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ, ರಿಯರ್ ಅಡ್ಮಿರಲ್ ಡಿ.ಕೆ.ಗೋಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಸೂರ್ಯಾಸ್ತಕ್ಕೂ ಮೊದಲು ನೌಕಾಪಡೆಯ ಬ್ಯಾಂಡ್ ಸಿಬ್ಬಂದಿ ವಾದ್ಯ ಪರಿಕರಗಳ ಮೂಲಕ ವಿವಿಧ ದೇಶಭಕ್ತಿ ಗೀತೆಗಳನ್ನು ನುಡಿಸಿದರು.
ಬ್ಯಾಂಡ್ ಸಿಬ್ಬಂದಿ ಬೀಟಿಂಗ್ ರಿಟ್ರೀಟ್ ಮೂಲಕ ದೇಶದ ನೌಕಾಪಡೆಯ ಸಿಬ್ಬಂದಿಯ ತ್ಯಾಗ, ಬಲಿದಾನ ಮತ್ತು ಸಾಮರ್ಥ್ಯವನ್ನು ಸ್ಮರಿಸಿದರು. ನಂತರ ನೌಕಾಪಡೆಯ ಧ್ವಜ ಅವರೋಹಣ ಮಾಡಲಾಯಿತು. ಸಂಭ್ರಮಾಚರಣೆಯ ಭಾಗವಾಗಿ ನೌಕಾಪಡೆಯ ನೌಕೆಗಳಾದ ಐ.ಎನ್.ಎಸ್ ಸುವರ್ಣಾ, ಐ.ಎನ್.ಎಸ್ ತಿಲ್ಲಾಂ ಚಾಂಗ್ ಮತ್ತು ಐ.ಎನ್.ಎಸ್ ಕೋಸ್ವಾರಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೌಕೆಗಳಿಂದ ಸುಡುಮದ್ದುಗಳ ಚಿತ್ತಾರವು ಆಗಸವನ್ನು ವರ್ಣಮಯಗೊಳಿಸಿತ್ತು.1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಭಾರತದ ಜಯಭೇರಿಗೆ ನೌಕಾಪಡೆಯ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಡಿ.4ರಂದು ಕರಾಚಿಯ ಬಂದರಿನ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ಜಂಘಾಬಲವನ್ನೇ ಉಡುಗಿಸಿತ್ತು. ಬಳಿಕ ಭಾರತವು ವಿಜಯ ಸಾಧಿಸಿತು. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ದೇಶದ ವಿವಿಧ ನೌಕಾನೆಲೆಯಲ್ಲಿ ನೌಕಾ ದಿನವನ್ನು ಆಚರಿಸಲಾಗುತ್ತಿದೆ.
ಪಿಎಫ್‌ಐ, ಸಿಎಫ್‌ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನ ಇದ್ದಾರೆ: ಸಿ.ಟಿ.ರವಿ
ಅಭಿವೃದ್ಧಿ ಭಾರತಕ್ಕೆ ಬುಡಕಟ್ಟಿನವರು ಕೊಡುಗೆ ನೀಡಿ: ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಸೇರಲು ಬುಡಕಟ್ಟು ಯುವಜನರು ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಕರೆ ನೀಡಿದರು. ಯವನಿಕಾ ಸಭಾಂಗಣದಲ್ಲಿ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ನಡೆದ 14ನೇ ರಾಷ್ಟ್ರೀಯ ಬುಡಕಟ್ಟು ಯುವಜನ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಾತಂತ್ರ್ಯ ಶತಮಾನೋತ್ಸವ ವೇಳೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರದ ಸಾಲಿಗೆ ಸೇರಿಸುವ ಗುರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಸಾಂಸ್ಕೃತಿಕ ಅವಿಭಾಜ್ಯ ಅಂಗವಾಗಿರುವ ಬುಡಕಟ್ಟು ಜನರು ಕೂಡ ಶ್ರಮದಾನಕ್ಕೆ ಮುಂದಾಗಬೇಕು. ಅಭಿವೃದ್ಧಿ ರಾಷ್ಟ್ರದ ಹಾದಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು. ‘ಮಾತೃ ಭಾಷೆಯಲ್ಲಿ ಶಿಕ್ಷಣ ಸಿಕ್ಕಾಗ ಸಮಗ್ರ ಅಭಿವೃದ್ಧಿಯಾಗುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಭದ್ರಕೋಟೆ ಸೃಷ್ಟಿಗೆ ಕೈ ಜೋಡಿಸಿ: ಸಚಿವ ಸೋಮಣ್ಣ
ಸಾಂಸ್ಕೃತಿಕ, ಆಧ್ಯಾತ್ಮಿಕ ಶ್ರೀಮಂತ: ಕರ್ನಾಟಕ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾಗಿ ಶ್ರೀಮಂತವಾಗಿದೆ. ಇಲ್ಲಿನ ಸಾಕಷ್ಟುಮಠಗಳಲ್ಲಿ ಮಕ್ಕಳಿಗೆ ಆಶ್ರಯ ನೀಡಲಾಗುತ್ತಿದೆ. ಕೆಲವು ಮಠಗಳಲ್ಲಿ ಐದು ಹತ್ತು ಸಾವಿರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಊಟ ವಸತಿ ನೀಡಲಾಗುತ್ತಿದೆ. ಸಿದ್ಧಗಂಗಾ ಮಠ, ಆದಿಚುಂಚಗಿರಿ ಮಠ, ಸುತ್ತೂರು ಸಂಸ್ಥಾನ, ಸತ್ಯಸಾಯಿ ಆಶ್ರಮಗಳು ಪ್ರಮುಖವಾಗಿವೆ ಎಂದು ರಾಜ್ಯಪಾಲರು ಸ್ಮರಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ರಾಜ್ಯ ಸರ್ಕಾರದಿಂದ ಗ್ರಾಮೀಣ ಭಾಗದಲ್ಲಿ ಸ್ವಾಮಿ ವಿವೇಕಾನಂದ ಸ್ವ ಸಹಾಯ ಸಂಘಗಳನ್ನು ಕಟ್ಟಿಯುವ ಸಮುದಾಯಗಳಿಗೆ ಸ್ಥಳೀಯ ಉದ್ಯೋಗ ಮತ್ತು ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಪ್ರತಿ ಸಂಘಕ್ಕೆ ಒಂದು ಲಕ್ಷ ರು. ಸಹಾಯ ಧನ, ನಾಲ್ಕು ಲಕ್ಷ ರು. ಸಾಲ ಸೇರಿ ಐದು ಲಕ್ಷ ರು.ನೆರವು ನೀಡಲಾಗುತ್ತಿದೆ. ಈ ಯೋಜನೆ ದೇಶಕ್ಕೆ ಮಾದರಿಯಾಗಿದೆ’ ಎಂದರು.