Raichur: ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಬಸ್ ಖರೀದಿಗೆ ಸರ್ಕಾರ ಚಿಂತನೆ: ಸಚಿವ ಬಿ.ಸಿ.ನಾಗೇಶ್
ಕೇಳಲು ಸ್ವಲ್ಪ ಅಚ್ಚರಿ ಅನ್ನಿಸಿದರೂ ಇದು ಸತ್ಯ. ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುವ ಬಡ ಮಕ್ಕಳು ಬಸ್ ವ್ಯವಸ್ಥೆ ಇಲ್ಲದೆ ಪರದಾಟ ಮಾಡುವುದು ಎಲ್ಲರಿಗೂ ಗೊತ್ತು. ಈ ಸಮಸ್ಯೆ ತಪ್ಪಿಸಬೇಕು ಎಂಬ ಮಹಾದಾಸೆಯಿಂದ ಶಿಕ್ಷಣ ಸಚಿವರು ಹೊಸ ಪ್ಲಾನ್ ಒಂದನ್ನು ಹಾಕಿಕೊಂಡಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಜು.08): ಕೇಳಲು ಸ್ವಲ್ಪ ಅಚ್ಚರಿ ಅನ್ನಿಸಿದರೂ ಇದು ಸತ್ಯ. ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುವ ಬಡ ಮಕ್ಕಳು ಬಸ್ ವ್ಯವಸ್ಥೆ ಇಲ್ಲದೆ ಪರದಾಟ ಮಾಡುವುದು ಎಲ್ಲರಿಗೂ ಗೊತ್ತು. ಈ ಸಮಸ್ಯೆ ತಪ್ಪಿಸಬೇಕು ಎಂಬ ಮಹಾದಾಸೆಯಿಂದ ಶಿಕ್ಷಣ ಸಚಿವರು ಹೊಸ ಪ್ಲಾನ್ ಒಂದನ್ನು ಹಾಕಿಕೊಂಡಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಬಸ್ ಸಿಗದೇ ಪರದಾಟ ನಡೆಸಿದ್ದಾರೆ.
ಇದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಬಸ್ ಖರೀದಿಗೆ ಸರ್ಕಾರ ಚಿಂತನೆ ನಡೆಸಿದೆ. ಎಲ್ಲೆಲ್ಲಿ ಎಸ್ ಡಿಎಂಸಿ ಮತ್ತು ಪೋಷಕರ ಸಂಘಗಳು ಆಕ್ಟಿವ್ ಇವೆ. ಪೋಷಕರು ವಾಹನಗಳ ನಿರ್ವಹಣೆ ಮಾಡಲು ಮುಂದಾಗಿದ್ದಾರೆ. ಆ ಶಾಲೆಗಳಿಗೆ ಶಾಸಕರ ಅನುದಾನದಲ್ಲಿ ಬಸ್ ಖರೀದಿಗೆ ಚಿಂತನೆ ನಡೆದಿದೆ. ಯಾರು ಯಾರು ಸಿಎಸ್ ಫಂಡ್ ಖರ್ಚು ಮಾಡಲು ಬಂದಿದ್ದಾರೆ. ಅವರಿಗೆ ಬಸ್ ಖರೀದಿ ಮಾಡಿಸಿಕೊಡಲು ಹೇಳಿದ್ದೇವೆ. ಮಕ್ಕಳಿಗೆ ಶಾಲೆಗೆ ಬರಲು ತೊಂದರೆ ಆಗುವುದನ್ನು ನೋಡಿ ಈ ಯೋಚನೆ ಮಾಡಿದ್ದೇವೆ. ಪ್ರಾಯೋಗಿಕವಾಗಿ ಈಗ ರಾಮನಗರದಲ್ಲಿ ಆರಂಭವಾಗಿದೆ.
ಕಲ್ಯಾಣ ಕರ್ನಾಟಕ ಶಿಕ್ಷಣ ಇಲಾಖೆಯ ಸಭೆ, ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ನಾಗೇಶ್
ತುಮಕೂರು ಜಿಲ್ಲೆ ತಿಪಟೂರಿನಲ್ಲಿಯೂ ಖಾಸಗಿ ಬ್ಯಾಂಕ್ ಸಹಯೋಗದಲ್ಲಿ ಶುರುವಾಗಿದೆ. ಅದೇ ಮಾದರಿಯಲ್ಲಿ ರಾಜ್ಯ ಎಲ್ಲೆಡೆಯೂ ಬಸ್ ಖರೀದಿ ಮಾಡುವ ಪ್ಲಾನ್ ಇದೆ. ಅದಕ್ಕೆ ಲೋಕಲ್ ಎಂಎಲ್‌ಎ ತನ್ನ ಅನುದಾನದಲ್ಲಿ ಅಥವಾ ಸಿಎಸ್‌ಆರ್ ಫಂಡ್‌ನಲ್ಲಿ ಬಸ್ ಖರೀದಿ ಮಾಡಲು ಮುಂದಾಗಬೇಕಾಗಿದೆ. ಬಸ್ ಖರೀದಿ ವಿಚಾರವಾಗಿ ಎಲ್ಲಾ ಶಾಸಕರಿಗೆ ಪತ್ರ ಹಾಕಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಇನ್ನೂ ಈ ಸಂಬಂಧ ರಾಜ್ಯ ಸರಕಾರದಿಂದ ಈಗಾಗಲೇ ಆದೇಶ ಹೊರಸಿದ್ದು, ಯಾವ ರೀತಿಯ ವಾಹನ, ನಿರ್ವಹಣೆ ಹೇಗೆ ಎನ್ನುವ ಬಗ್ಗೆ ಶೀಘ್ರವೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಲಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಶಾಲೆಗೆ ಬಸ್ ವ್ಯವಸ್ಥೆ ಆಗಿದ್ರೆ ಪ್ರಯೋಜನವೇನು?: ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರಿಗೆ ಹೊಸ ಆಕರ್ಷಣೆ ಆಗಿ ಕಾಣುತ್ತೆ.. ಖಾಸಗಿ ಶಾಲಾ ಮಕ್ಕಳಂತೆ ಸರಕಾರಿ ಶಾಲಾ ಮಕ್ಕಳ ಮನೆ ಮುಂದೆ ಬಸ್ ಬಂದು ನಿಲ್ಲುತ್ತೆ ಮಕ್ಕಳ ಮನಸ್ಸಿನಲ್ಲಿ ಕೀಳು ಅರಿಮೆ ದೂರುವಾಗುತ್ತೆ. ಉತ್ತಮ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಅನುಕೂಲವಾಗುತ್ತೆ ಎನ್ನುವ ಕಾರಣಕ್ಕೆ ಬಸ್‌ಗಳನ್ನು ಖರೀದಿಗೆ ಸರ್ಕಾರ ಚಿಂತನೆ ನಡೆಸಿದೆ. ಸ್ಥಳೀಯ ಶಾಸಕರು ತಮ್ಮ ಅನುದಾನದಲ್ಲಿ ಅಥವಾ ಎಸ್‌ಜಿಪಿ, ಇನ್ನಿತರ ಸಂಸ್ಥೆಗಳು ಮುಂದೆ ಬಂದು ಈ ವಾಹನಗಳನ್ನು ನಿರ್ವಹಣೆ ಮಾಡಬಹುದು. ಇದರಿಂದ ಮಕ್ಕಳಿಗೆ ಉತ್ತಮ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯಬೇಕೆಂಬ ಕನಸು ನನಸಾಗುತ್ತದೆ ಎಂಬುವುದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಅಭಿಪ್ರಾಯವಾಗಿದೆ. ಅಷ್ಟೇ ಅಲ್ಲದೇ ಸರಕಾರಿ ಶಾಲಾ ಮಕ್ಕಳಲ್ಲಿ ಇರುವ ಕೀಳರಿಮೆ ಹೊಗಲಾಡಿಸಲು ಅನುಕೂಲವಾಗುತ್ತೆ. ದೂರದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರ ಆತಂಕ ದೂರ ಮಾಡಬಹುದು. ಗ್ರಾಮೀಣರು ಕೂಲಿ, ರೈತಾಪಿ ಪೋಷಕರ ಬಹುದೊಡ್ಡ ಸಮಸ್ಯೆಗೆ ಪರಿಹಾರ ಪರಿಹಾರವಾಗಬಹುದು.
ಬಸ್‌ಗಳ ನಿರ್ವಹಣೆ ಹೇಗೆ?: ಸರ್ಕಾರ ಸರ್ಕಾರಿ ಶಾಲೆಗಳಿಗೆ ಬಸ್‌ಗಳ ಖರೀದಿಗೆ ಚಿಂತನೆ ನಡೆಸಿದೆ. ಈ ಯೋಜನೆ ಜಾರಿಗೆ ಬಂದ್ರೆ ಬಸ್‌ಗಳ ನಿರ್ವಹಣೆಯೂ ಬಗ್ಗೆಯೂ ಈಗ ಚರ್ಚೆ ಶುರುವಾಗಿದೆ. ಬಸ್ ಗಳ ನಿರ್ವಹಣೆ, ಚಾಲಕರ ವೇತನ, ಡಿಸೇಲ್‌ಗೆ ತಗಲುವ ವೆಚ್ಚವನ್ನು ಸ್ಥಳೀಯ ಎಸ್‌ಡಿಎಂಸಿ ಅನುದಾನದಲ್ಲಿಯೇ ನಿರ್ವಹಣೆ ಮಾಡಬೇಕು ಎಂದು ಇಲಾಖೆ ಹೇಳಿದೆ. ಆದರೆ, ಮೂಲಗಳ ಪ್ರಕಾರ ಎಸ್‌ಡಿಎಂಸಿ ಬಳಿ, ಇಷ್ಟು ದೊಡ್ಡ ಪ್ರಮಾಣದ ಅನುದಾನವಿಲ್ಲ. ಆದ್ದರಿಂದ ಜಿಲ್ಲಾ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳು, ಖಾಸಗಿ ಸಂಸ್ಥೆಗಳಿಂದ ಸಿಎಸ್‌ಆರ್ ಅನುದಾನ ಕ್ರೋಡೀಕರಿಸಲು ಚಿಂತನೆ ನಡೆಸಲಾಗಿದೆ. ಇದರೊಂದಿಗೆ, ಆಯಾ ಶಾಲೆಯ ಭಾಗದಲ್ಲಿರುವ ಎನ್‌ಜಿಒ, ಸಮಾಜ ಸೇವಕರಿಂದ ದೇಣಿಗೆ ರೂಪದಲ್ಲಿ ಅನುದಾನ ಸಂಗ್ರಹಿಸುವ ಲೆಕ್ಕಾಚಾರದಲ್ಲಿ ಇಲಾಖೆ ಇದೆ.
Raichur: ಸಿಂಗಾಪುರ ಕಾಮುಕ ಶಿಕ್ಷಕನ ಬಗ್ಗೆ ಸಚಿವ ನಾಗೇಶ್ ಗರಂ!
ಒಟ್ಟಿನಲ್ಲಿ ಸರ್ಕಾರಿ ಶಾಲಾ ಮಕ್ಕಳು ಕೂಡ ಖಾಸಗಿ ಶಾಲೆಯ ಮಕ್ಕಳಂತೆ ಪ್ರತ್ಯೇಕ ವಾಹನಗಳಲ್ಲಿ ಓಡಾಟ ಮಾಡಲು ಸರ್ಕಾರ ಸರ್ಕಾರಿ ಶಾಲೆಗಳಿಗೆ ಬಸ್ ಖರೀದಿಗೆ ಚಿಂತನೆ ನಡೆಸಿದೆ. ಇದು ಆದ್ರೆ ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರಿಗೆ ನಾವು ಯಾವುದರಲ್ಲೂ ಕಮ್ಮಿ ಇಲ್ಲವೆಂದು ತೋರಿಸಲು ಸರ್ಕಾರ ಮುಂದಾಗಿದೆ ಎನ್ನಬಹುದು.