Asianet Suvarna News Asianet Suvarna News

'ಕೇಂದ್ರದಿಂದ ಹೆಚ್ಚುವರಿ ಆಮ್ಲಜನಕ : ರೋಗಿಗಳಿಗೂ ಅನುಕೂಲಕರ ವ್ಯವಸ್ಥೆ'

ರಾಜ್ಯ ಸದ್ಯ 300 ಟನ್ ಆಕ್ಸಿಜನ್ ಸಾಮರ್ಥ್ಯ ಹೊಂದಿದೆ, ಕೇಂದ್ರದಿಂದ 800 ಟನ್ ರವಾನೆ ಆಗಿದೆ.  ರೆಮ್ಡಿಸಿವರ್ 1.22 ಲಕ್ಷ ವಯಲ್ಸ್ ಕೇಂದ್ರದಿಂದ ನೀಡಲಾಗಿದೆ. ಇನ್ನು ಮುಂದೆ ರಾಜ್ಯದಲ್ಲಿ ಆಕ್ಸಿಜನ್, ರೆಮಿಡಿಸಿವರ್ ಕೊರತೆ ಆಗುವುದಿಲ್ಲ ಎಂದು ಸುಧಾಕರ್ ಹೇಳಿದರು. 

Government reclaims 75 percent of private hospital beds for Covid Treatment snr
Author
Bengaluru, First Published Apr 25, 2021, 3:51 PM IST

ಬೆಂಗಳೂರು (ಏ.25):  ರಾಜ್ಯ ಸದ್ಯ 300 ಟನ್ ಆಕ್ಸಿಜನ್ ಸಾಮರ್ಥ್ಯ ಹೊಂದಿದೆ.  ನಿನ್ನೆ ಕೇಂದ್ರದಿಂದ 800 ಟನ್ ಆಕ್ಸಿಜನ್ ಕರ್ನಾಟಕಕ್ಕೆ ರವಾನೆ ಆಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿಂದು ಮಾತನಾಡಿದ ಆರೋಗ್ಯ ಸಚಿವ ಸುಧಾಕರ್  ರಾಜ್ಯದಲ್ಲಿ ಸದ್ಯ ಆಕ್ಸಿಜನ್ ಕೊರತೆ ಇಲ್ಲವೆಂದು ತಿಳಿಸಿದ್ದಾರೆ.  ನಿನ್ನೆ ಸಿಎಂ ಜೊತೆ ಸಭೆ ಆಗಿದೆ. ಗೃಹ ಸಚಿವರು, ಕಂದಾಯ ಸಚಿವರು, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ ಜೊತೆ ತಾವೂ ಸಭೆಯಲ್ಲಿ ಭಾಗಿಯಾಗಿದ್ದಾಗಿದ್ದು, ಈ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು. 

ರಾಜ್ಯ ಸದ್ಯ 300 ಟನ್ ಆಕ್ಸಿಜನ್ ಸಾಮರ್ಥ್ಯ ಹೊಂದಿದೆ, ಕೇಂದ್ರದಿಂದ 800 ಟನ್ ರವಾನೆ ಆಗಿದೆ.  ರೆಮ್ಡಿಸಿವರ್ 1.22 ಲಕ್ಷ ವಯಲ್ಸ್ ಕೇಂದ್ರದಿಂದ ನೀಡಲಾಗಿದೆ. ಇನ್ನು ಮುಂದೆ ರಾಜ್ಯದಲ್ಲಿ ಆಕ್ಸಿಜನ್, ರೆಮಿಡಿಸಿವರ್ ಕೊರತೆ ಆಗುವುದಿಲ್ಲ ಎಂದು ಸುಧಾಕರ್ ಹೇಳಿದರು. 

ಮುಂದಿನ ತಿಂಗಳು ಮತ್ತಷ್ಟು ಆಕ್ಸಿಜನ್, ರೆಮ್ಡಿಸಿವರ್  ವ್ಯವಸ್ಥೆ ಮಾಡಲಾಗುತ್ತದೆ.  ವಿಕ್ಟೋರಿಯಾ ಕ್ಯಾಂಪಸ್‌ನಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲು ಚಿಂತಿಸಲಾಗಿದೆ
ವೆಂಟಿಲೇಟರ್ ಆಸ್ಪತ್ರೆ ಕೊರತೆ ಕಾಣುತ್ತಿದೆ.  ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎಂದರು. 

ಕೊರೋನಾ ಸೋಂಕಿತರ ಯೋಗಕ್ಷೇಮ ವಿಚಾರಿಸಿದ ಡಿಸಿಎಂ ..

ಖಾಸಗಿ ಆಸ್ಪತ್ರೆಗಳಲ್ಲಿ 75% ಕೋವಿಡ್ ಬೆಡ್ ತೆಗೆದುಕೊಳ್ಳುವ ನಿರ್ಧಾರ ಆಗಿದೆ.  2 ರಿಂದ 2500 ಐಸಿಯು ಹಾಸಿಗೆ, ವೆಂಟಿಲೇಟರ್ ಘಟಕಗಳು ‌ಮಾಡಬೇಕು ಎನ್ನುವ ನಿರ್ಧಾರ ಆಗಿದೆ.  ಎಲ್ಲಾ ವೈದ್ಯಕೀಯ ಕಾಲೇಜು, ತೃತೀಯ ಚಿಕಿತ್ಸಕ ಹಂತದ ಆಸ್ಪತ್ರೆಗಳಲ್ಲಿ ಮೇಕ್ ಶಿಫ್ಟ್ ಹಾಸ್ಪಿಟಲ್ ಮಾಡಲು‌ ನಿರ್ಧಾರ ಮಾಡಲಾಗಿದೆ. ಎಲ್ಲಾ ಕಡೆ 100 ರಿಂದ 150 ಬೆಡ್ ನ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಲಾಗುತ್ತದೆ.  ಬೀದರ್, ಶಿವಮೊಗ್ಗ, ಮೈಸೂರು, ತುಮಕೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಾಡ್ಯೂಲರ್ ಐಸಿಯು ತೆರೆಯಲು ಸಿಎಂ‌ ಸೂಚಿಸಿದ್ದಾರೆ ಎಂದರು.

ಮೈಲ್ಡ್ ಕೇಸ್ ನವರಿಗೆ ಪೋರ್ಟೆಬಲ್ ಆಕ್ಸಿಜನ್ ಸಿಗುವ ವ್ಯವಸ್ಥೆ ಮಾಡಲಾಗುತ್ತದೆ.  ಪ್ರತಿ ಜಿಲ್ಲೆಗೆ 1 ಸಾವಿರ, ನಗರ ವ್ಯಾಪ್ತಿಯಲ್ಲಿ 5 ಸಾವಿರ ಪೋರ್ಟಬಲ್ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುವುದು.  ಇಸ್ರೇಲ್ ನಿಂದ ಪೋರ್ಟಬಲ್ ಆಕ್ಸಿಜನ್ ಉಪಕರಣಗಳು ತರಿಸಲಾಗುತ್ತದೆ.  ಮನೆಯಲ್ಲಿ ಇರುವವರಿಗೆ ಹೆಲ್ಪ್ ಡೆಸ್ಕ್ ಮಾಡಿ, ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುವ ವಿಧಾನದ ಬಗ್ಗೆ ಟೆಲಿ ಕಾಲಿಂಗ್ ವ್ಯವಸ್ಥೆ ಮಾಡುವ ನಿರ್ಧಾರ ಮಾಡಲಾಗಿದೆ.  ಶೀಘ್ರದಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ ಎಂದರು. 
 
ಪ್ರೈವೇಟ್ ಆಸ್ಪತ್ರೆ, ಮೆಡಿಕಲ್ ಕಾಲೇಜಿನಿಂದ ಹೆಚ್ಚುವರಿ ಬೆಡ್ ಸಿಗಲಿದೆ.  ಖಾಸಗಿ ಆಸ್ಪತ್ರೆಗಳ 75% ಬೆಡ್ ನಿರ್ಧಾರದಿಂದ ಬೆಂಗಳೂರಿಗೆ 71400 ಬೆಡ್ ಸಿಗಲಿವೆ ಎಂದು  ಆರೋಗ್ಯ ಸಚಿವ ಸುಧಾಕರ್ ಹೇಳಿದರು. 

Follow Us:
Download App:
  • android
  • ios