Asianet Suvarna News Asianet Suvarna News

ಹೋರಾಟಗಾರರ ಕೇಸ್ ವಾಪಸ್‌ಗೆ ಸರ್ಕಾರ ಹಿಂದೇಟು

ಆಂಗ್ಲ ನಾಮಫಲಕದ ವಿರುದ್ಧ ಸಮರ ಸಾರಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷಟಿ.ಎ.ನಾರಾಯಣಗೌಡ ಸೇರಿ 53 ಮಂದಿ ವಿರುದ್ಧ ಎಫ್‌ಐಅರ್‌ ದಾಖಲಿಸಿ ಬಂಧಿಸಲಾಗಿದೆ. ಇನ್ನೂ ಬಿಡುಗಡೆಯೇ ಆಗಿಲ್ಲದೇ ಇದೇ ರೀತಿ. ಕನ್ನಡ ನಾಡು, ನೆಲ, ಜಲ ಹಾಗೂ ರೈತರ ಪರವಾಗಿ ದಶಕಗಳಿಂದ ಹೋರಾಟ ನಡೆಸಿದ ನಾಡಿನ ಸಾವಿರಾರು ಕನ್ನಡ ವರ, ರೈತರ ಪರ ಹೋರಾಟಗಾರರ ವಿರುದ್ಧ ರಾಜ್ಯಾದ್ಯಂತ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 300 ದಾಟಿವೆ. 

Government of Karnataka Reluctant to Withdraw the Cases of the Fighters grg
Author
First Published Dec 30, 2023, 12:55 PM IST

ಬೆಂಗಳೂರು(ಡಿ.30):  ಚುನಾವಣಾ ಸಮಯದಲ್ಲಿ ರಾಜಕೀಯ ಕಾರಣಗಳಿಗಾಗಿ ನಡೆಸಿದ ಹೋರಾಟಗಳ ದೆಸೆಯಿಂದ ಬೀಳುವ ಕ್ರಿಮಿನಲ್ ಪ್ರಕರಣಗಳಿಂದ ಅಧಿಕಾರ ಹಿಡಿದ ಕೂಡಲೇ ರಾಜಕಾರಣಿಗಳು ಮುಕ್ತಿ ಪಡೆಯುತ್ತಾರೆ. ಆದರೆ, ಕನ್ನಡನಾಡು ನುಡಿ ಹಾಗೂ ಆಸ್ಥಿತೆಗಾಗಿ ಯಾವ ಫಲಾಪೇಕ್ಷೆಯಿಲ್ಲದೆ ಹೋರಾಡುವ ಕನ್ನಡಪರ, ರೈತ ಪರ ಹೋರಾಟಗಾರರಿಗೆ ಇಂತಹ ದಯೆ ಸಿಗುವುದೇ ಇಲ್ಲ!

ಹೌದು, ಆಂಗ್ಲ ನಾಮಫಲಕದ ವಿರುದ್ಧ ಸಮರ ಸಾರಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷಟಿ.ಎ.ನಾರಾಯಣಗೌಡ ಸೇರಿ 53 ಮಂದಿ ವಿರುದ್ಧ ಎಫ್‌ಐಅರ್‌ ದಾಖಲಿಸಿ ಬಂಧಿಸಲಾಗಿದೆ. ಇನ್ನೂ ಬಿಡುಗಡೆಯೇ ಆಗಿಲ್ಲದೇ ಇದೇ ರೀತಿ. ಕನ್ನಡ ನಾಡು, ನೆಲ, ಜಲ ಹಾಗೂ ರೈತರ ಪರವಾಗಿ ದಶಕಗಳಿಂದ ಹೋರಾಟ ನಡೆಸಿದ ನಾಡಿನ ಸಾವಿರಾರು ಕನ್ನಡ ವರ, ರೈತರ ಪರ ಹೋರಾಟಗಾರರ ವಿರುದ್ಧ ರಾಜ್ಯಾದ್ಯಂತ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 300 ದಾಟಿವೆ. 

Narayana Gowda: ಕರವೇ ನಾರಾಯಣ ಗೌಡರ ಮೊದಲ ಪ್ರತಿಭಟನೆ ಪ್ರಾರಂಭವಾಗಿದ್ದು ಹೇಗೆ? ಹಿಂದಿ ಭಾಷಿಕರನ್ನು ಕಂಡ್ರೆ ಆಗುವುದಿಲ್ವಾ ?

ಮುಖಂಡರು, ಕಾರಕರ್ತರ ಮೇಲಿನ ಯುತ್ತಿವೆಯೇ ಹೊರತು ಕನ್ನಡಪರ ಹಾಗೂ ರೈತಪರ ಹೋರಾಟಗಾರರ ಮೇಲಿನ ಕೇಸುಗಳನ್ನು ಹಿಂಪಡೆದ ಇಚ್ಛಾಶಕ್ತಿಯನ್ನೇ ತೋರಿಲ್ಲ. ರ್ನಾಟಕ ಏಕೀಕರಣದ ಹೋರಾಟ ಕಾಲದಿಂದಲೂ ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳಿಗೆ ಹೋರಾಟ ಗಾರರ ಮೇಲೆ ಮೃಧುಧೋರಣೆ ಇತ್ತು. ಕೆ.ಚೆಂಗಲರಾಯರೆಡ್ಡಿ, ಕೆಂಗಲ್ ಹನುಮಂ ತಯ್ಯ, ಎಸ್. ನಿಜಲಿಂಗಪ್ಪ, ಬಿ.ಡಿ.ಜತ್ತಿ, ದೇವರಾಜ ಅರಸು ಸೇರಿದಂತೆ ಅನೇಕ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿ ಯಲ್ಲಿ ಹೋರಾಟಗಾರರ ಮೇಲಿನ ಕೇಸು ಕೈ ಬಿಡುವ ಮೂಲಕ ಕರ್ನಾಟಕದಲ್ಲಿ ಕನ್ನಡ, ಕನ್ನಡಿಗರುಸಾರ್ವಭೌಮರಾಗಿಬೆಳೆಯಲು, ಮೆರೆಯಲು ಸಹಕಾರ ನೀಡಿದ್ದಾರೆ.

ಕರವೇ ಕಾಠ್ಯಕರ್ತರ ವಿರುದ್ಧ 1350 ಕೇಸು

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ನೀಡಿದ ಮಾಹಿತಿ ಪ್ರಕಾರ, ಪ್ರಸ್ತುತ ಆಂಗ್ಲ ನಾಮಫಲಕದ ವಿರುದ್ಧದ ಪ್ರಕರಣಗಳು ಸೇರಿ ಕರವೇ ಮುಖಂಡರು, ಕಾರ್ಯಕರ್ತರ ಮೇಲೆ ಬೆಂಗಳೂರು, ಬೆಳಗಾವಿ ಹಾಗೂ ರಾಜ್ಯದ ಇನ್ನಿ ತರೆ ಜಿಲ್ಲೆಗಳಲ್ಲಿನ 1350ಕ್ಕೂ ಹೆಚ್ಚು ಕೇಸುಗಳು ದಾಖಲಾಗಿದೆ. ಇದರಲ್ಲಿ ತಮ್ಮ ವಿರುದ್ಧವೂ 65 ಕಸುಗಳಿವೆ ಎಂದು ಹೇಳುತ್ತಾರೆ. ಕನ್ನಡ ಒಕ್ಕೂಟದ ಅಧ್ಯಕ್ಷ ಕನ್ನಡ ಚಳವಳಿ ವಾಟಾಳ್‌ ನಾಗರಾಜ್‌ ಕನ್ನಡಪರ ಸಂಘ ಟನೆಗಳ ಕಾರ್ಯಕರ್ತರ ಮೇಲೆ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ 900 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ನನ್ನ ವಿರುದ್ಧವೇ 25ರಿಂದ 30 ಪ್ರಕರಣಗಳಿವೆ ಎನ್ನುತ್ತಾರೆ. ಇನ್ನು ರೈತ ಸಂಘಟನೆಗಳ ವಿವಿಧ ಮುಖಂಡರ ವಿರುದ್ಧ ಕೂಡ ಸುಮಾರು 500 ಕ್ಕೂ ಹೆಚ್ಚು ಪ್ರಕರಣಗಳು ನನ್ನ ವಿರುದ್ಧವೂ ಸುಮಾರು 20 ಪ್ರಕರಣಗಳನ್ನು ದಾಖಲಿಸಲಾಗಿದೆ ಎನ್ನುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್.
ಪರಿಷತ್‌ ಸದಸ್ಯರ ವಿರುದ್ಧದ ಪ್ರಕರಣಗಳನ್ನು ಮಾತ್ರ ಹಿಂಪಡೆದು ಹೈಕೋರ್ಟ್ ಒಪ್ಪಿಗೆಗೆ ಕಳುಹಿಸಿದೆ. ನಮ್ಮ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟಗಳು ನಡೆಯೋದೇಕೆ?: ಕನ್ನಡಪರ, ರೈತಪರ ಹೋರಾಟಗಾರರು ಸ್ವಾರ್ಥಕ್ಕಾಗಿ ಎಂದೂ ಹೋರಾಟ ನಡೆಸಿದ ವರಲ್ಲ, ಐಎಎಸ್, ಐಪಿಎಸ್, ಬ್ಯಾಂಕಿಂಗ್ ಸೇರಿದಂತೆ ಕೇಂದ್ರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯುವ ಅವಕಾಶಕ್ಕಾಗಿ, ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ, ಕನ್ನಡ ನೆಲದಲ್ಲಿ ಕಡ್ಡಾಯ ಕನ್ನಡ ನಾಮಫಲಕ ಕಡ್ಡಾಯ, ಕನ್ನಡಪರ ಹೋರಾಟಗಾ ರರು ವೈಯಕ್ತಿಕ ಲಾಭಕ್ಕಾಗಿ ಹೋರಾಟ ಮಾಡುವವರಲ್ಲ. ನಾಡು ನುಡಿ, ನೆಲ, ಜಲ ರಕ್ಷಣೆಗಾಗಿ ನಿಂತ ವರು. ಅವರ ವಿರುದ್ಧದ ಎಲ್ಲ ಪ್ರಕರಣ ಗಳನ್ನು ವಾಪಸ್ ಪಡೆಯಲು ಸಿದ್ದರಾ ಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾ ಗಿಲ್ಲ. ಈ ಹಿಂದೆ ಯಡಿಯೂರಪ್ಪ, ಕುಮಾರಸ್ವಾಮಿ ಅವರಿಗೂ ಮನವಿ ಮಾಡಿದ್ದೆವು. ಎಲ್ಲರಿಗೂ ಕನ್ನಡಪರ ಹೋರಾಟಗಾರರ ಬಗ್ಗೆ ಅಸಡ್ಡೆ ಧೋರಣೆ.

ಕರವೇ ರಾಜ್ಯಾಧ್ಯಕ್ಷ

ಫಲಕ ಅಳವಡಿಕೆಗಾಗಿ, ರಾಜ್ಯಕ್ಕೆ ನೀರು ಸಾಲದಿದ್ದಾಗ ತಮಿಳುನಾಡಿಗೆ ನೀರು ಹರಿ ಸುವುದರ ವಿರುದ್ಧ, ನದಿ ನೀರು ಹಂಚಿಕೆ ಯಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗ ಹೀಗೆ ಕನ್ನಡತನ, ಕನ್ನಡಿಗರ ಸ್ವಾಭಿಮಾನ, ರೈತರ ಹಕ್ಕುಗಳಿಗೆ ಚ್ಯುತಿ ಬಂದಾಗಲೆಲ್ಲಾ ಪ್ರಾಣ ವನ್ನು ಪಣಕ್ಕಿಟ್ಟು ಬೀದಿಗಿಳಿದು ಹೋರಾಡಿ ದ್ದಾರೆ. ಇದಕ್ಕಾಗಿ 3000ಕ್ಕೂ ಅಧಿಕ ಕಸು ಗಳುದಾಖಲಾಗಿದೆ.ಪರಿಣಾಮಸಾವಿರಾರು ಹೋರಾಟಗಾರರು ಹಲವು ವರ್ಷಗಳಿಂದ ತಮ್ಮ ಮೇಲಿನ ಕೇಸುಗಳಿಂದ ಮುಕ್ತಿ ಸರ್ಕಾರಗಳು ನಡೆಸುತ್ತಿರುವ ಹುನ್ನಾರ. ಪಡೆಯಲು ಕೋರ್ಟ್‌ಗೆ ಅಲೆಯುತ್ತಾ, ಲಕ್ಷಾಂತರ ರು. ಶುಲ್ಕ ಧರಿಸಬೇಕಾದ ಸಂಕಷ್ಟದ ಬದುಕು ಸವೆಸುವಂತಾಗಿದೆ.

ಚುನಾವಣೆಯಲ್ಲಿ ನಿಮಗೆ ಶಕ್ತಿ ತುಂಬಿದ್ದೆವು, ಈಗ ಕ್ರಮ ಕೈಗೊಳ್ಳಿ ಅಂತೀರಿ: ಸಿಎಂ ವಿರುದ್ಧ ಕರವೇ ನಾರಾಯಣ ಗೌಡ ಆಕ್ರೋಶ!

ರೈತ ಪರ ಹೋರಾಟಗಾರರ ಮೇಲಿನ ಕೇಸು ವಾಪಸ್ ಪಡೆವಂತೆ ಈಗಿನ ಕಾಂಗ್ರೆಸ್ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರ, ಅದಕ್ಕೂ ಮೊದಲ ಮೈತ್ರಿ ಸರ್ಕಾರವೂ ಸೇರಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳಿಗೂ ಹತ್ತಾರು ವರ್ಷಗಳಿಂದ ಮನವಿ ಮಾಡುತ್ತಲೇ ಬರುತ್ತಿದ್ದೇವೆ. ಇದು ಹೋರಾಟಗಾರರನ್ನು ಹತ್ತಿಕ್ಕಲು ಸರ್ಕಾರಗಳು ನಡೆಸುತ್ತಿರುವ ಹುನ್ನಾರ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. 

ಕನ್ನಡಪರ ಹೋರಾಟಗಾ ರರು ವೈಯಕ್ತಿಕ ಲಾಭಕ್ಕಾಗಿ ಹೋರಾಟ ಮಾಡುವವರಲ್ಲ. ನಾಡು ನುಡಿ, ನೆಲ, ಜಲ ರಕ್ಷಣೆಗಾಗಿ ನಿಂತ ವರು. ಅವರ ವಿರುದ್ಧದ ಎಲ್ಲ ಪ್ರಕರಣ ಗಳನ್ನು ವಾಪಸ್ ಪಡೆಯಲು ಸಿದ್ದರಾ ಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾ ಗಿಲ್ಲ. ಈ ಹಿಂದೆ ಯಡಿಯೂರಪ್ಪ, ಕುಮಾರಸ್ವಾಮಿ ಅವರಿಗೂ ಮನವಿ ಮಾಡಿದ್ದೆವು. ಎಲ್ಲರಿಗೂ ಕನ್ನಡಪರ ಹೋರಾಟಗಾರರ ಬಗ್ಗೆ ಅಸಡ್ಡೆ ಧೋರಣೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ. 

Follow Us:
Download App:
  • android
  • ios