Asianet Suvarna News Asianet Suvarna News

ಸಾರಿಗೆ ಬಸ್‌ಗಳ ಆಯುಧ ಪೂಜೆಗೆ ಕೇವಲ 100 ರು. ಕೊಟ್ಟ ಸರ್ಕಾರ..!

*   ಬಸ್‌ಗಳು ಹಾಗೂ ಯಂತ್ರೋಪಕರಣಗಳಿಗೆ ಸಾಂಪ್ರದಾಯಿಕ ಪೂಜೆ
*   ಪ್ರತಿ ಬಸ್‌ಗೆ ತಲಾ 100 ರು. ಹಾಗೂ ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1 ಸಾವಿರ ರು
*   ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ

Government Given 100 Rs to Ayudha Puja to KSRTC Buses in Karnataka grg
Author
Bengaluru, First Published Oct 13, 2021, 7:40 AM IST

ಬೆಂಗಳೂರು(ಅ.13): ಆಯುಧ ಪೂಜೆ(Ayudha Puja) ದಿನ ರಾಜ್ಯ ರಸ್ತೆ ಸಾರಿಗೆ ನಿಗಮಗಳ(KSRTC) ಬಸ್‌ಗಳು ಹಾಗೂ ಯಂತ್ರೋಪಕರಣಗಳನ್ನು ಸಾಂಪ್ರದಾಯಿಕವಾಗಿ ಪೂಜಿಸುವಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಪ್ರತಿ ಬಸ್‌ಗೆ(Bus) ತಲಾ 100 ರು. ಹಾಗೂ ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1 ಸಾವಿರ ರು. ಮುಂಗಡ ನಗದು ಪಡೆದು ಪೂಜಾ ಕಾರ್ಯ ನೆರವೇರಿಸಬೇಕು ಎಂದು ಸೂಚಿಸಿದ್ದಾರೆ. ಇದೇ ವೇಳೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಮಸ್ತ ನೌಕರರು ಹಾಗೂ ಅಧಿಕಾರಿಗಳಿಗೆ ನಾಡಹಬ್ಬ ದಸರಾಕ್ಕೆ(Dasara) ಸಚಿವರು ಶುಭಾಶಯ ಕೋರಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ(Chamundeshwari Devi) ಎಲ್ಲರಿಗೂ ಸುಖ, ಸಂತೋಷ, ಆರೋಗ್ಯವನ್ನು ಅನುಗ್ರಹಿಸಲಿ. ಸಾಂಕ್ರಾಮಿಕದ ಕರಿನೆರಳು ದೂರಸರಿದು, ಸಂಭ್ರಮ, ಸಮೃದ್ಧಿಗಳ ಹೊಂಗಿರಣ ಮೂಡಲಿ ಎಂದು ಸಚಿವರು ಹಾರೈಸಿದ್ದಾರೆ.

ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ

ದಸರಾ ಅ. 14, 15ರಂದು, ಈದ್‌ ಮಿಲಾದ್‌(Eid Milad) ಅ. 19 ಮತ್ತು ಅ. 20ರ ಮಹರ್ಷಿ ವಾಲ್ಮೀಕಿ ಜಯಂತಿ(Valmiki Jayanti) ನಿಮಿತ್ತ ವಾಕರಸಾ(NWKRTC) ಸಂಸ್ಥೆಯಿಂದ ವಿಶೇಷ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ ಮಾಡಲಾಗುತ್ತಿದೆ. 

Bengaluru| 300 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ BMTC ಹಸಿರು ನಿಶಾನೆ

ಹುಬ್ಬಳ್ಳಿ(Hubballi), ಧಾರವಾಡ(Dharwad), ಗದಗ(Gadag), ಬೆಳಗಾವಿ(Belagavi), ಉತ್ತರ ಕನ್ನಡ(Uttara Kannada), ಹಾವೇರಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಒಟ್ಟು 700ಕ್ಕಿಂತ ಹೆಚ್ಚು ವಿಶೇಷ ಹೆಚ್ಚುವರಿ ಸಾರಿಗೆ ಬಸ್‌ ಕಾರ್ಯಾಚರಣೆ ಮಾಡಲಾಗುತ್ತಿದೆ. ಬೆಂಗಳೂರು(Bengaluru), ಮಂಗಳೂರು(Mangaluru), ಹೈದರಾಬಾದ್‌(Hyderabad), ಪಣಜಿ(Panajim), ಪುಣೆ ಇನ್ನಿತರ ಪ್ರಮುಖ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಅ. 17 ಮತ್ತು 20ರಂದು ಸಂಸ್ಥೆಯ ಎಲ್ಲ ವಿಭಾಗಗಳ ಪ್ರಮುಖ ಬಸ್‌ ನಿಲ್ದಾಣಗಳಿಂದ ವಿಶೇಷ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ. 

ಪ್ರಯಾಣಿಕರು ಮುಂಗಡ ಬುಕ್ಕಿಂಗ್‌ ಮಾಡಬಹುದು. ಕೋವಿಡ್‌-19(Covid-19) ಮಾರ್ಗಸೂಚಿಗಳನ್ನು ಗಮನದಲ್ಲಿ ಇಟ್ಟುಕೊಂಡು ಸಾರ್ವಜನಿಕರು ಈ ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios