ನಕಲಿ ಗೊಬ್ಬರ, ಬಿತ್ತನೆ ಬೀಜ ಮಾರಿದ್ರೆ ಗೂಂಡಾ ಕಾಯ್ದೆ?: ಸಚಿವ ಬಿ.ಸಿ.ಪಾಟೀಲ್
* ಗೂಂಡಾ ಕಾಯ್ದೆ ಜಾರಿಗೆ ತರಲು ಚಿಂತನೆ
* ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ
* ಕಾನೂನು ಉಲ್ಲಂಘನೆಮಾಡಿದವರಿಗೆ ಕಾನೂನಿನ ಮೂಲಕವೇ ಕ್ರಮ
ನಾಗಮಂಗಲ(ಮಾ.16): ರಾಜ್ಯಾದ್ಯಂತ ನಕಲಿ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟ ತಡೆಗೆ ಗೂಂಡಾ ಕಾಯ್ದೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್(BC Patil) ಮಂಗಳವಾರ ತಿಳಿಸಿದರು. ಆದಿಚುಂಚನಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ(Karnataka) ನಕಲಿ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ(Sowing seed)ಮಾರಾಟ ಹೆಚ್ಚಳವಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೈದರಾಬಾದ್ - ಕರ್ನಾಟಕ(Hyderabad Karnataka) ಭಾಗದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜ್ಯದ(Karnataka) ರೈತರಿಗೆ(Farmers) ಅನ್ಯಾಯವಾಗಲು ಬಿಡುವುದಿಲ್ಲ. ಈಗಾಗಲೇ ನಕಲಿ ರಸಗೊಬ್ಬರದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಂಡ್ಯ(Mandya) ಜಿಲ್ಲೆ ಮದ್ದೂರಿನ ನಿಸರ್ಗ ಆಗ್ರ್ಯಾನಿಕ್ , ಮಳವಳ್ಳಿಯ ಸಜ್ಜಲೂರು, ಎಂಟಿಕೆ ಆಗ್ರ್ಯಾನಿಕ್ ವಿರುದ್ಧ ಪತ್ತೆ ಮಾಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದರು.
Mekedatu Project: ಜನರ ಗಮನ ಸೆಳೆಯಲು ಕಾಂಗ್ರೆಸ್‌ನ ಗಿಮಿಕ್: ಬಿ ಸಿ ಪಾಟೀಲ್
ನಕಲಿ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟ ಸಂಬಂಧ 148 ಕಂಪನಿಗಳ ಲೈಸನ್ಸ್ ರದ್ದು ಮಾಡಿ ಅಮಾನತ್ತು ಮಾಡಲಾಗಿದೆ. ಇದು ನನ್ನ ಅಧಿಕಾರದ ಅವಧಿಯಲ್ಲಿ ಇಷ್ಟು ಲೈಸನ್ಸ್ ರದ್ದು ಮಾಡಿ ಅಮಾನತ್ತು ಮಾಡಿರುವುದು ಇತಿಹಾಸದಲ್ಲಿ ಇದೇ ಪ್ರಥಮ ಎಂದು ಹೇಳಿದರು.
ಇದುವರೆಗೂ 4.16 ಕೋಟಿ ರು. ಮೌಲ್ಯದ 1394 ಕ್ವಿಂಟಲ್ ವಿವಿಧ ಬೀಜ, 10,128 ಲೀಟರ್ ಕೀಟನಾಶಕ ಜಪ್ತಿ ಮಾಡಲಾಗಿದೆ. ರಾಜ್ಯದಲ್ಲಿ ಇದುವರೆಗೂ ನಕಲಿ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟ ಸಂಬಂಧ 137 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರ ಮೌಲ್ಯ ಸುಮಾರು 17.31 ಕೋಟಿ ರು. ಆಗಿದೆ ಎಂದರು.
ನಕಲಿ ರಸಗೊಬ್ಬರ ಮಾರಾಟದ ಹಿಂದೆ ಅಧಿಕಾರಿಗಳ ವೈಪಲ್ಯವೂ ಇದೆ. ಸರ್ಕಾರ ಇದನ್ನು ತಡೆಯುವ ನಿಟ್ಟನಲ್ಲಿ ಅಗತ್ಯ ಕ್ರಮ ವಹಿಸಿದೆ. ರೈತರಿಗೆ ಈ ಬಗ್ಗೆ ಮಾಹಿತಿ ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಹೈಕೋರ್ಟ್ ತೀಪು ಸ್ವಾಗತಾರ್ಹ
ಹಿಜಾಬ್(Hijab) ವಿಚಾರವಾಗಿ ರಾಜ್ಯ ಹೈಕೋರ್ಟ್(High Court of Karnataka) ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ. ಶಾಲೆ, ಕಾಲೇಜುಗಳಲ್ಲಿ ವಿದ್ಯೆ ಕಲಿಯುವ ಮಕ್ಕಳ ಮನಸ್ಸಿನಲ್ಲಿ ಜಾತಿ, ಬೇದ ಭಾವ ಇರಬಾರದು. ಎಲ್ಲರೂ ಒಂದಾಗಿರಬೇಕು ಎಂಬ ದೃಷ್ಟಿಯಿಂದ ಸಮವಸ್ತ್ರ ಧರಿಸಲು ಆದೇಶ ನೀಡಿದೆ. ಇದನ್ನು ಸರ್ಕಾರವೂ ಕೂಡ ಕಡ್ಡಾಯವಾಗಿ ಹೇಳಿದೆ. ಕಾನೂನು ಉಲ್ಲಂಘನೆಮಾಡಿದವರಿಗೆ ಕಾನೂನಿನ ಮೂಲಕವೇ ಕ್ರಮ ಜರುಗಿಸಲಾಗುತ್ತದೆ ಅಂತ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
PMFBY: ರೈತರ ಮನೆ ಬಾಗಿಲಿಗೇ ಫಸಲ್ ಬಿಮಾ ಪಾಲಿಸಿ: ಬಿ.ಸಿ. ಪಾಟೀಲ್
ಮಾಸಾಂತ್ಯಕ್ಕೆ 100 ‘ಕೃಷಿ ಸಂಜೀವಿನಿ’ ವಾಹನ
ಬೆಂಗಳೂರು: ಕೃಷಿ (Agriculture) ಸಂಬಂಧ ಬೆಳೆ, ಕೀಟ ನಿಯಂತ್ರಣ ಕುರಿತು ಮಾಹಿತಿ ಹಾಗೂ ಮಣ್ಣು ಪರೀಕ್ಷೆಗಳನ್ನು ರೈತರ ಜಮೀನಿನ ಬಳಿಯೇ ಮಾಡುವ 100 ‘ಕೃಷಿ ಸಂಜೀವಿನಿ’ ಸಂಚಾರಿ ವಾಹನಗಳ (Krushi Sanjeevini Vehicles) ಸೇವೆಯನ್ನು ಈ ತಿಂಗಳೊಳಗೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದರು.
ಕೊಪ್ಪಳ (Koppal) ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಕೃಷಿ ಸಂಜೀವಿನಿ ವಾಹನಗಳ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಉದ್ದೇಶಿಸಿದ್ದು, ಒಟ್ಟು 164 ‘ಕೃಷಿ ಸಂಜೀವಿನಿ’ ವಾಹನಗಳ ಖರೀದಿಗೆ ಆರ್ಥಿಕ ಇಲಾಖೆ (finance department) ಒಪ್ಪಿಗೆ ನೀಡಿದೆ. 100 ವಾಹನಗಳನ್ನು ಮಾರ್ಚ್ ಅಂತ್ಯದೊಳಗೆ ತಾಲ್ಲೂಕುಗಳಿಗೆ ನೀಡಲಾಗುವುದು, ಉಳಿದವುಗಳನ್ನು ಮುಂದಿನ ದಿನಗಳಲ್ಲಿ ಕೊಡಲಾಗುವುದು ಎಂದು ಅವರು ಹೇಳಿದ್ದರು.