ಪರಿಶಿಷ್ಟ ಜಾತಿಗಳ ಒಳಮೀಸಲಾತಿ ತೀರ್ಮಾನದ ಅನ್ವಯ, ರಾಜ್ಯ ಸರ್ಕಾರವು 400 ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಿದೆ. ಈ ಮಹತ್ವದ ನಿರ್ಧಾರದಿಂದಾಗಿ ರಾಜ್ಯದಲ್ಲಿ ಖಾಲಿ ಇರುವ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಹಸಿರು ನಿಶಾನೆ ದೊರೆತಿದೆ.

ರೋಸ್ಟರ್ ಬಿಂದು ಅಂತಿಮ 56000 ನೇಮಕಾತಿ ಸುಗಮ

ಬೆಂಗಳೂರು (ಮೇ.14): ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪ್ರಮಾಣ ಸಂಬಂಧ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ, 400 ಬಿಂದುಗಳ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಲಾಗಿದೆ. ಈ ಮೂಲಕ 56,432 ಹುದ್ದೆಗಳ ನೇಮಕಕ್ಕೆ ಹಾದಿ ಸುಗಮವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಳಮೀಸಲಾತಿ ಬೆನ್ನಲ್ಲೇ ನೇಮಕಾತಿ

ರೋಸ್ಟರ್‌ ಬಿಂದುಗಳ ಕುರಿತ ವಿವರವಾದ ಪಟ್ಟಿಯನ್ನು ರಾಜ್ಯ ಸರ್ಕಾರ ಬುಧವಾರ ಬಿಡುಗಡೆ ಮಾಡಿದ್ದು, ಜತೆಗೆ ಎಸ್ಸಿ ಪ್ರವರ್ಗ ಎ, ಬಿ ಮತ್ತು ಸಿಗಳ ಒಳಮೀಸಲಾತಿ ಬಿಂದುಗಳನ್ನೂ ಗುರುತಿದೆ. ಇತ್ತೀಚೆಗೆ ಸರ್ಕಾರ ಶೇ.15 ಎಸ್ಸಿ ಮೀಸಲಲ್ಲಿ ಪ್ರವರ್ಗ ‘ಎ’ಗೆ ಶೇ. 5.25, ‘ಬಿ’ಗೆ ಶೇ. 5.25 ಮತ್ತು ‘ಸಿ’ಗೆ ಶೇ. 4.5ರಷ್ಟು ಪಾಲನ್ನು ಮೀಸಲಿರಿಸಿ ಆದೇಶ ಮಾಡಿತ್ತು.