ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಗೆ ಗೊರುಚ ಉಘೆ ಉಘೆ: ಗೊರುಚ

ಸರ್ಕಾರವು ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುಬೇಕು ಎಂದು ನಾನು ಕನ್ನಡಿಗರ ಪರವಾಗಿ ಒತ್ತಾಯಿಸುತ್ತೇನೆ ಎಂದು ಹೇಳಿದ ಗೊರುಚ

Go Ru Channabasappa Praised Guarantee Schemes in Karnataka grg

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ (ಮಂಡ್ಯ)(ಡಿ.21):  ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಗೊ. ರು. ಚನ್ನಬಸಪ್ಪ ಅವರು ಮುಕ್ತಕಂಠದಿಂದ ಹೊಗಳಿದರು. 

ನಮ್ಮದು ಸಮೃದ್ಧ ಆರ್ಥಿಕತೆಯಾದರೂ, ರಾಜ್ಯದಲ್ಲಿ ಜನರ ಜೀವನ ಸಮೃ ದ್ದವಾಗಿದೆಯೇ ಎನ್ನುವ ಪ್ರಶ್ನೆಗೆ ಧನಾತ್ಮಕ ಉತ್ತರ ಕೊಡಲು ಸಾಧ್ಯವಿಲ್ಲ. ಹಸಿವು, ಬಡತನ, ನಿರುದ್ಯೋಗ, ಅಪೌಷ್ಟಿಕತೆ, ಅಸಮಾನತೆ, ಆಹಾರ ಅಭದ್ರತೆ ಮುಂ ತಾದ ಸಮಸ್ಯೆಗಳು ಕೃಷಿಕರನ್ನು, ಕಾರ್ಮಿಕ ವರ್ಗವನ್ನು, ದಿನಗೂಲಿ ಗಳನ್ನು, ಬೀದಿ ಬದಿ ಮಾರಾಟಗಾರರನ್ನು, ಮಹಿಳೆಯರನ್ನು ಕಾಡುತ್ತಿವೆ. 

ಕನ್ನಡ ಉಳಿವಿಗೆ ಶಿಕ್ಷಣದಲ್ಲಿ ಬದಲಾವಣೆ ಬೇಕು: ಸಿಎಂ ಸಿದ್ದರಾಮಯ್ಯ

ಕರ್ನಾಟಕದ ಸರ್ಕಾರ 2023ರಲ್ಲಿ ಘೋಷಿಸಿರುವ 'ಭರವಸೆ ಕಾರ್ಯಕ್ರಮಗಳು ದುಡಿ ಯುವ ಯುವ ವರ್ಗಕ್ಕೆ ಅಷ್ಟೋ ಇಷ್ಟು ಬದುಕನ್ನು ನೀಡಿವೆ. ''ಭರವಸೆ ಕಾರ್ಯಕ್ರಮ" ಅಪ್ರತ್ಯಕ್ಷವಾಗಿ ದುಡಿಮೆಗೆ ಗೌರವ ನೀಡುವ ಕ್ರಮ ಮತ್ತು ಇದು ಆರ್ಥಿಕ ಸಮೃದ್ದತೆಯನ್ನು ಜನರಿಗೆ ಹಂಚುವ ಒಂದು ಕಾರ್ಯಯೋಜನೆ. ಭರವಸೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ಕೊರತೆಗಳನ್ನು ಸರಿಪಡಿಸಿ ಕೊಂಡು ಅವು ಗಳ ಯಶಸ್ಸಿಗೆ ನಾವೆಲ್ಲರೂ ಪ್ರಯತ್ನಿ ಸಬೇಕು ಎಂಬುದು ನನ್ನ ಅಭಿಪ್ರಾಯ. ನಾನೂ ಇಂತಹ ಬಡತನದ - ಹಸಿವಿನ ನೆಲೆಯಿಂದಲೇ ಬಂದವನು. ಬಡತನ ಎಂದರೇನು ಎಂಬುದು ನನಗೆ ಗೊತ್ತಿದೆ'' ಎಂದು ಗೊರುಚ ಹೇಳಿದರು.

ದುರಹಂಕಾರಿ ಹೊರನಾಡಿಗರ ಸೊಕ್ಕನ್ನು ಅಡಗಿಸಿ: 

ಬೆಂಗಳೂರು ಮತ್ತು ಇತರ ನಮ್ಮ ನಗರಗಳಿಗೆ ಕೆಲಸಕ್ಕಾಗಿ ಬಂದಿರುವ ಹೊರ ರಾಜ್ಯಗಳ ಜನ ಮೊದಲು ಕನ್ನಡ ಭಾಷೆ ಕಲಿತು ಅದರಲ್ಲೇ ಸಂವಹನ ಮಾಡುವುದು ಅವರಿಗೆ ಒಳ್ಳೆಯದು. ಹೊರರಾಜ್ಯಗಳಿಂದ ತಾವು ಬೆಂಗಳೂರಿಗೆ ಉದ್ಯೋಗ ಕ್ಕಾಗಿ ಬಂದಿರುವುದರಿಂದ ಈ ನಗರದ ಉದ್ಧಾರ ಆಗುತ್ತಿದೆ, ಇಲ್ಲಿನ ವ್ಯಾಪಾರ ಹೆಚ್ಚುತ್ತಿದೆ, ಇಲ್ಲಿನ ನಿವೇಶನಗಳು, ಬಡಾವಣೆಗಳಿಗೆ ಬೆಲೆಏರುತ್ತಿದೆ ಮುಂತಾದ ದುರಹಂಕಾರದ ಪ್ರದರ್ಶನ ಹೊರನಾಡಿಗರಿಂದ ಅಲ್ಲಲ್ಲಿ ವ್ಯಕ್ತವಾಗಿದೆ. ಇದನ್ನು ಸರ್ಕಾರ ಮತ್ತು ಕನ್ನಡಿಗರು ನಿಯಂತ್ರಿಸಬೇಕು. 

ಇಲ್ಲಿ ಔದ್ಯಮಿಕವಾಗಿ ನೆಲೆಯೂರಿ ಲಾಭದಾಯಕವಾಗಿ ಬೆಳೆಯುವ ಉದ್ಯಮಗಳು ಕನ್ನಡಿಗರಾದ ವಿದ್ಯಾವಂತ ಅಭ್ಯರ್ಥಿಗಳಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗ ನೀಡುವುದು ಅವುಗಳ ಋಣಸಂದಾಯದ ಮಾರ್ಗವೆಂದು ಭಾವಿಸಬೇಕು. ಇದು ಅವುಗಳ ನೈತಿಕ ಜವಾಬ್ದಾರಿ ಕೂಡ. ಆದರೆ ಇದನ್ನು ತಪ್ಪಿಸಲು ಹಲವಾರು ದಾರಿಗಳನ್ನು ಹುಡುಕುವ ಉದ್ಯಮಗಳನ್ನು ಕರ್ನಾಟಕ ಸರ್ಕಾರ ತನ್ನ ಷರತ್ತುಗಳು ನಿಯಮಗಳಿಂದ ಪ್ರತಿಬಂಧಿಸಿದರೆ ತಪ್ಪೇನಿಲ್ಲ. ಕನ್ನಡದ ನೆಲ ಜಲ ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸುವ ಮೊದಲು ಸರ್ಕಾರ ಇದಕ್ಕೆ ಮುಚ್ಚಳಿಕೆಯನ್ನು ಬರೆಸಿಕೊಂಡರೂ ತಪ್ಪಿಲ್ಲ.

ಗ್ರೂಪ್ 'ಸಿ', 'ಡಿ' ಹುದ್ದೆಯಲ್ಲಿ ಕನ್ನಡಿಗರಿಗೆ ಶೇ.80 ಮೀಸಲಿಡಿ 

ಮಂಡ್ಯ / ಪ್ರಧಾನ ವೇದಿಕೆ: ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಹೆಚ್ಚು ದೊರೆ ಯುತ್ತಿಲ್ಲ. ನಿರುದ್ಯೋಗವು ನಮ್ಮ ಯುವಜನತೆಯ ಬದುಕು ದುರ್ಭರಗೊಳಿಸುತ್ತಿದೆ. 1986ರ ಶ್ರೀಮತಿ ಸರೋಜಿನಿ ಮಹಿಷಿ ಸಮಿತಿ ಗ್ರೂಪ್ 'ಸಿ', 'ಡಿ' ವರ್ಗಗಳಲ್ಲಿ ಕನ್ನಡಿಗರಿಗೆ ಶೇ. 80ರಷ್ಟು ಉದ್ಯೋಗ ಮೀಸಲಿಡಬೇಕೆಂದು ಸಮಿತಿ ಶಿಫಾರಸ್ಸು ಮಾಡಿತ್ತು. ಸಾರ್ವಜನಿಕ ವಲಯವಲ್ಲದೆ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವ ಬಗ್ಗೆ ಹೇಳಿತ್ತು. ಆ ವರದಿ ಇನ್ನೂ ಅನುಷ್ಠಾನಗೊಂಡಿಲ್ಲ. 

ನಮ್ಮಪಾಲು ನಮ್ಗೆ ಕೊಡಿ, ನಮ್ಮ ಭಾಷೆ ನಮ್ಗೆ ಬಿಡಿ: ಸಮ್ಮೇಳನಾಧ್ಯಕ್ಷ ಗೊರುಚ ಗರ್ಜನೆ

ಬೆಂಗಳೂರು ಉತ್ತರ ಭಾರತದಿಂದ ವಲಸೆ ಬರುವ ಕಾರ್ಮಿಕರಿಂದ ತುಂಬಿ ಹೋಗಿದೆ. ಇದಲ್ಲದೆ ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರುವ ನೀತಿಯಿಂದಾಗಿ ಬ್ಯಾಂಕುಗಳಲ್ಲಿ, ಅಂಚೆ ಕಚೇರಿಗಳಲ್ಲಿ ಹಿಂದಿ ಭಾಷಿಕರು ತುಂಬಿ ಹೋಗಿದ್ದಾರೆ. ಕೇಂದ್ರ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿಗೆ ಪ್ರಾಶಸ್ತ್ರ ನೀಡುತ್ತಾ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಕನ್ನಡಿ ಗರಿಗೆ ಉದ್ಯೋಗದ ಅವಕಾಶಗಳು ಇಲ್ಲವಾಗುತ್ತಿವೆ. 

ಸರ್ಕಾರವು ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುಬೇಕು ಎಂದು ನಾನು ಕನ್ನಡಿಗರ ಪರವಾಗಿ ಒತ್ತಾಯಿಸುತ್ತೇನೆ ಎಂದು ಗೊರುಚ ಹೇಳಿದರು.

Latest Videos
Follow Us:
Download App:
  • android
  • ios