ಶವ ಸಂಸ್ಕಾರಕ್ಕೆ ತೆರಳಿದ್ದವರ ಮೇಲೆ ಹೆಜ್ಜೇನು ದಾಳಿ; 40ಕ್ಕೂ ಅಧಿಕ ಮಂದಿ ಗಾಯ!
ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿಯಿಂದ ಸುಮಾರು 42 ಮಂದಿ ಗಾಯಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ನೆಡದಿದೆ.
ಚಾಮರಾಜನಗರ (ಜು.6): ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿಯಿಂದ ಸುಮಾರು 42 ಮಂದಿ ಗಾಯಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ನೆಡದಿದೆ.
ಗ್ರಾಮದ ಮಹಾದೇವಯ್ಯ ಎಂಬುವವರು ಮೃತಪಟ್ಟಿದ್ದರು. ಮೃತರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಕುಟುಂಬಸ್ಥರು, ಗ್ರಾಮದ ಜನರು. ಗ್ರಾಮದ ಜಮೀನಿನಲ್ಲಿ ಅಂತ್ಯ ಸಂಸ್ಕಾರದ ವೇಳೆ ಬೆಂಕಿ ಹಾಕಿದ್ದಾರೆ. ಆದರೆ ಪಕ್ಕದ ಮರದಲ್ಲಿ ಹೆಜ್ಜೇನು ಗೂಡು ಕಟ್ಟಿರುವುದು ಗಮನಿಸಿಲ್ಲ. ಬೆಂಕಿ ಹಾಕಿದ ಬಳಿಕ ಎದ್ದ ದಟ್ಟ ಹೊಗೆ ಜೇನುಗೂಡಿಗೆ ತಟ್ಟಿದೆ. ಇದರಿಂದ ಮರದ ಹೆಜ್ಜೇನು ಹುಳುಗಳು ಏಕಾಏಕಿ ಜನರ ಮೇಲೆ ದಾಳಿ ನಡೆಸಿವೆ.
ವದಂತಿಗಳಿಗೆ ತೆರೆ; ಲಾಲ್ ಕೃಷ್ಣ ಅಡ್ವಾಣಿ ಆರೋಗ್ಯದ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ
ಹೆಜ್ಜೇನು ದಾಳಿಯಾಗುತ್ತಿದ್ದಂತೆ ದಿಕ್ಕಪಾಲಾಗಿ ಓಡಿದ ಜನರು. ಆದರೂ ಹೆಜ್ಜೇನು ದಾಳಿಗೆ ಸುಮಾರು 42 ಮಂದಿ ಅಸ್ತವ್ಯಸ್ತಗೊಂಡಿದ್ದಾರೆ. ಆ ಪೈಕಿ ಸುಮಾರು 19 ಜನರು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಮಾಹಿತಿ ತಿಳಿದು ಆಸ್ಪತ್ರೆಗೆ ಡಿಎಚ್‌ಒ ಚಿದಂಬರಂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.