ಬೆಂಗಳೂರು(ಆ.28): ಎರಡು-ಮೂರು ವರ್ಷದೊಳಗೆ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಗರ್ಭ ಗುಡಿಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಆಗಲಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಪ್ರಧಾನ ಕಾರ್ಯದರ್ಶಿ ಮಿಲಿಂದ್‌ ಪರಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಚಾಮರಾಜಪೇಟೆಯ ಕೇಶವ ಶಿಲ್ಪದಲ್ಲಿನ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಮುಂದಿನ ದಿನಗಳಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸ್‌ ರಾಮ ಜನ್ಮಭೂಮಿ ಮಂದಿರಕ್ಕಾಗಿ ದೇಣಿಗೆ ನೀಡಲು ಮನವಿ ಮಾಡಿದರೆ ವಿಶ್ವ ಹಿಂದೂ ಪರಿಷತ್‌ ದೇಣಿಗೆ ಸಂಗ್ರಹ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಲಿದೆ. ರಾಜ್ಯದ ಅಂಜನಾದ್ರಿ ದೇವಾಲಯ ಅಭಿವೃದ್ಧಿಪಡಿಸಲು ವಿಎಚ್‌ಪಿ ಮುಂದಾಗಲಿದೆ ಎಂದು ತಿಳಿಸಿದರು.

ಬೆಳಗಾವಿಯಿಂದ ಅಯೋಧ್ಯೆಗೆ ರೈಲು: ಕೇಂದ್ರ ಸಚಿವ ಅಂಗಡಿ

ಗಲಭೆಕೋರರಿಂದಲೇ ನಷ್ಟ ವಸೂಲಿ:

ಇತ್ತೀಚಿನ ಬೆಂಗಳೂರಿನ ಗಲಾಟೆಯ ಸಂದರ್ಭದಲ್ಲಿ ದಾಂಧಲೆ ಮಾಡಿದವರ ಮೇಲೆ ಕರ್ನಾಟಕ ಸರ್ಕಾರ ಕಠಿಣ ಕ್ರಮವನ್ನು ಕೈಗೊಂಡಿದೆ. ಮುಸ್ಲಿಂ ಸಮಾಜದ ಒಂದು ವರ್ಗ ಮಾಡಿದ ದಾಂಧಲೆಯಿಂದ ಆಗಿರುವ ಹಾನಿಯನ್ನು ಗಲಭೆಕೋರರೇ ಭರಿಸಬೇಕು ಎಂಬುದು ನಮ್ಮ ಅಭಿಪ್ರಾಯ. ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಹಿಂದೂ ಸಮಾಜದ ಮೇಲೆ ಮುಸ್ಲಿಂ ಸಮಾಜದ ಒಂದು ವರ್ಗ ಉದ್ದೇಶ ಪೂರ್ವಕವಾಗಿ ದಾಳಿ ನಡೆಸಿದೆ. ಈ ಗಲಭೆಕೋರರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಇಂತಹ ಗಲಭೆಯನ್ನು ಪ್ರಚೋದಿಸುವ, ಬೆಂಬಲಿಸುವವರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.