ಆಗಸ್ಟ್ 15 ರಿಂದ 'ಬೆಂಗಳೂರು ಹಸಿರೂರು' ಅಭಿಯಾನ ಆರಂಭವಾಗಲಿದ್ದು, ನಾಗರಿಕರು ತಮ್ಮ ಬಡಾವಣೆಗಳಲ್ಲಿ ಸಸಿಗಳನ್ನು ನೆಡಲು ಆಗಸ್ಟ್ 10ರೊಳಗೆ ಮನವಿ ಸಲ್ಲಿಸಬಹುದು. ಪಾಲಿಕೆಯು ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಸ್ಥಳಗಳಲ್ಲಿ ತಾನೇ ಸಸಿಗಳನ್ನು ನೆಡಲಿದೆ. ಈ ಅಭಿಯಾನದಡಿ 60 ಸಾವಿರ ಸಸಿ ನೆಡುವ ಗುರಿ ಹೊಂದಲಾಗಿದೆ.
ಆ.15ರಿಂದ ಬೆಂಗಳೂರು ಹಸಿರೂರು ಅಭಿಯಾನ
ಬೆಂಗಳೂರು (ಆ.2): ರಾಜಧಾನಿ ಬೆಂಗಳೂರಿನಲ್ಲಿ ಆ.15ರಿಂದ ಆರಂಭವಾಗುವ ‘ಬೆಂಗಳೂರು ಹಸಿರೂರು’ ಅಭಿಯಾನ(Green bengaluru Campaign)ಕ್ಕಾಗಿ ನಗರದ ನಾಗರಿಕರು ಹಾಗೂ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ಬಡಾವಣೆಗಳಲ್ಲಿ ಕನಿಷ್ಠ 30 ಸಸಿಗಳನ್ನು ನೆಡಲು ಅವಕಾಶವಿದ್ದಲ್ಲಿ, ಆಗಸ್ಟ್ 10ರ ಒಳಗೆ ಪಾಲಿಕೆ ವೆಬ್‌ಸೈಟ್, ಇ-ಮೇಲ್ ಹಾಗೂ ವಾಟ್ಸಪ್ ಮೂಲಕ ಮನವಿ ಸಲ್ಲಿಸಬಹುದು ಎಂದು ಜಿಬಿಎ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಶನಿವಾರ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ನಡೆದ ವರ್ಚುವಲ್ ಸಭೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಾಗರಿಕರಿಂದ ಬಂದ ಮನವಿಗಳ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಸಿ ನೆಡಲು ಸೂಕ್ತ ಸ್ಥಳವಿದ್ದಲ್ಲಿ ಪಾಲಿಕೆಯಿಂದಲೇ ಸಸಿಗಳನ್ನು ನೆಡಲಾಗುವುದು. ಸಸಿ ನೆಡುವವರು ಪಾಲಿಕೆ ವೆಬ್ ಸೈಟ್ https://gbatreeplantation.com, ಇ-ಮೇಲ್ dcfgba26
ನಗರದಲ್ಲಿ ಈ ಬಾರಿ 60 ಸಾವಿರ ಸಸಿಗಳನ್ನು ನೆಡುವ ಹಾಗೂ 40 ಸಾವಿರ ಸಸಿಗಳನ್ನು ವಿತರಿಸುವ ಯೋಜನೆಯಿದೆ. ಸಸಿ ನೆಡುವ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಈಗಾಗಲೇ 43 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲು ನಾಗರಿಕರಿಂದ 236 ಅರ್ಜಿಗಳು ಬಂದಿವೆ ಎಂದು ಹೇಳಿದರು. ಸಭೆಯಲ್ಲಿ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್, ತೋಟಗಾರಿಕಾ ವಿಭಾಗದ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ನಗರ ಪಾಲಿಕೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

