ಕೊನೆಗೂ ಮಂಗಳೂರು ವಿವಿಯಲ್ಲಿ ಗಣೇಶೋತ್ಸವ: ಉಪಕುಲಪತಿಯಿಂದಲೇ ಧಾರ್ಮಿಕ ಕಾರ್ಯ!

ಭಾರೀ ವಿವಾದ ಸೃಷ್ಟಿಸಿದ್ದ ಮಂಗಳೂರು ವಿವಿಯ ಗಣೇಶೋತ್ಸವ ವಿಚಾರ ಕೊನೆಗೂ ಸುಖಾಂತ್ಯ ಕಂಡಿದೆ‌. ವಿವಿಯ ಮಂಗಳಾ ಆಡಿಟೋರಿಯಂನಲ್ಲೇ ಗಣೇಶ ಪ್ರತಿಷ್ಟಾಪನೆ ಮೂಲಕ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಲಾಗಿದೆ.

Ganesh chaturthi special finally ganeshotsava celebrating in mangalore university by the vice chancellor rav

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಸೆ.19): ಭಾರೀ ವಿವಾದ ಸೃಷ್ಟಿಸಿದ್ದ ಮಂಗಳೂರು ವಿವಿಯ ಗಣೇಶೋತ್ಸವ ವಿಚಾರ ಕೊನೆಗೂ ಸುಖಾಂತ್ಯ ಕಂಡಿದೆ‌. ವಿವಿಯ ಮಂಗಳಾ ಆಡಿಟೋರಿಯಂನಲ್ಲೇ ಗಣೇಶ ಪ್ರತಿಷ್ಟಾಪನೆ ಮೂಲಕ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಲಾಗಿದೆ.

ಮಂಗಳೂರು ವಿವಿ(Mangaluru University)ಯ ಮಂಗಳಾ ಆಡಿಟೋರಿಯಂನಲ್ಲಿ ನಡೆದ ಗಣೇಶೋತ್ಸ(Ganeshotsav)ವಕ್ಕೆ ಸ್ವತಃ ಮಂಗಳೂರು ವಿವಿ ಉಪಕುಲಪತಿ ಜಯರಾಜ್ ಅಮೀನ್ ಅವರೇ ನೇತೃತ್ವ ವಹಿಸಿ ಶ್ರದ್ಧೆಯಿಂದ ಗಣಪತಿ ಪೂಜೆ ನೆರವೇರಿಸಿದ್ದಾರೆ.

ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡಿಯೇ ಮಾಡ್ತೇವೆ: ಕಲ್ಲಡ್ಕ ಪ್ರಭಾಕರ ಭಟ್ ಸವಾಲು!

 ಸಕಲ ಧಾರ್ಮಿಕ ವಿಧಿಗಳೊಂದಿಗೆ ಸ್ವತಃ ಗಣೇಶ ಮೂರ್ತಿ ಪ್ರತಿಷ್ಟಾಪಿಸಿದ ವಿಸಿಗೆ, ವಿವಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಸ್ಥಳೀಯರು ಸಾಥ್ ನೀಡಿದರು. ಸಣ್ಣ ಗಣೇಶ ಮೂರ್ತಿಗೆ ಪ್ರತಿಷ್ಟಾಪನೆ ಬಳಿಕ ಪೂಜೆ ಸಲ್ಲಿಸಲಾಯಿತು. ಅರ್ಚಕರ ಸಮ್ಮುಖದಲ್ಲಿ ಪಂಚೆ, ಶಾಲು ತೊಟ್ಟು ವಿಸಿ ಜಯರಾಜ್ ಅವರು ಧಾರ್ಮಿಕ ವಿಧಿ ನೆರವೇರಿಸಿದರು.  ಗಣೇಶ ಪ್ರತಿಷ್ಟಾಪನೆ ಬಳಿಕ ವಿವಿ ಆಡಿಟೋರಿಯಂನಲ್ಲಿ ಗಣಹೋಮ ನೆರವೇರಿತು. ಸ್ವತಃ ಗಣಹೋಮದಲ್ಲಿ ಭಾಗಿಯಾದ ಉಪಕುಲಪತಿ ಜಯರಾಜ್ ಅಮೀನ್,
ಹೋಮ ಕುಂಡದ ಬಳಿ ಕುಳಿತು ಪೂಜೆಯಲ್ಲಿ ಭಾಗಿಯಾದರು. 

ವಿವಿ ಗಣೇಶೋತ್ಸವದಲ್ಲಿ ಭಾಗವಹಿಸಿದ ಕಲ್ಕಡ್ಕ ಭಟ್, ಶಾಸಕ ಭರತ್ ಶೆಟ್ಟಿ!

ಮಂಗಳೂರು ವಿವಿ ಗಣೇಶೋತ್ಸವ(Mangaluru university ganeshotsav)ಕ್ಕೆ ಆರ್‌.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್(Kalladka prabhakar bhat) ಆಗಮಿಸಿದ್ದರು‌. ಕಲ್ಲಡ್ಕ ಪ್ರಭಾಕರ ಭಟ್ ಗೆ ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಸಾಥ್ ನೀಡಿದ್ರು. ಸ್ಥಳೀಯ ಬಿಜೆಪಿ ಮುಖಂಡರು, ಸಂಘಪರಿವಾರದ ಪ್ರಮುಖರು ಭಾಗಿಯಾದರು. ಗಣಹೋಮದಲ್ಲಿ ಪಾಲ್ಗೊಂಡು ಗಣೇಶನ ದರ್ಶನ ಪಡೆದ‌ ನಾಯಕರು ಮಹಾ ಪೂಜೆ ‌ಬಳಿಕ ಪ್ರಸಾದ ಸ್ವೀಕರಿಸಿದರು. ಮಂಗಳೂರು ವಿವಿ ರಿಜಿಸ್ಟ್ರಾರ್ ರಾಜು ಸಹಿತ ಸಿಬ್ಬಂದಿ ಭಾಗಿಯಾಗಿದ್ದು, ಯಾವುದೇ ಗೊಂದಲವಿಲ್ಲದೇ ಗಣಪತಿ ಪೂಜೆ ನೆರವೇರಿದೆ. 


ಗಣಪತಿಗೆ ವಿರೋಧ ಮಾಡುವ ತಾಕತ್ತು ಯಾರಿಗೂ ಇಲ್ಲ: ಕಲ್ಲಡ್ಕ ಭಟ್

ಮಂಗಳೂರು ವಿವಿ ಗಣೇಶೋತ್ಸವ ಬಳಿಕ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ನೀಡಿದ್ದು, ನಾಲ್ಕೈದು ವರ್ಷಗಳಿಂದ ವಿವಿಯಲ್ಲಿ ಗಣೇಶನ ಪೂಜೆ ಆಗ್ತಿತ್ತು. ಒಂದು ಸ್ವಲ್ಪ ವ್ಯತ್ಯಾಸ ಆದ್ರೂ ಮತ್ತೆ ಇಲ್ಲಿ ವಿನಾಯಕನ ಪೂಜೆ ಆಗಿದೆ. ಈ ವಿಚಾರದಲ್ಲಿ ವಿಸಿ ಜಯರಾಜ್ ಅಮೀನ್ ಮತ್ತು ರಿಜಿಸ್ಟ್ರಾರ್ ರಾಜುಗೆ ನೂರು ನಮನಗಳು. ಯಾವುದೇ ಗೊಂದಲ, ನೋವಾಗದಂತೆ ಜಯರಾಜ್ ಅಮೀನ್ ರೇ ಪೂಜೆಯಲ್ಲಿ ಕೂತಿದ್ದಾರೆ. ಆದರೆ ಇಲ್ಲಿ ಗಣೇಶ ಮೂರ್ತಿ ಸ್ವಲ್ಪ ಸಣ್ಣದಾಗಿದೆ. ಯಕ್ಷಗಾನದ ರೀತಿ ಕಿರೀಟ ಎದುರಿಗಿಟ್ಟು ಪೂಜೆ ಆಗಿದೆ. ಮುಂದಿನ ಬಾರಿ ಕಿರೀಟ ಗಣಪತಿ ತಲೆಯ ಮೇಲೆಯೇ ಇರಲಿ‌‌. ನಮ್ಮ ನಂಬಿಕೆ ಪ್ರಕಾರ ಗಣಪತಿ ಎತ್ತರಕ್ಕೆ ಏರಬೇಕು. ವಿಸಿಯವರ ಸಹಕಾರ ಮತ್ತು ನಂಬಿಕೆ ಭಾರೀ ದೊಡ್ಡದು. ಅವರ ನಂಬಿಕೆ ಮತ್ತು ಸಂಸ್ಕೃತಿಯ ಕಾರಣಕ್ಕೆ ಸುಸೂತ್ರವಾಗಿ ನಡೆದಿದೆ. ಗಣಪತಿಗೆ ವಿರೋಧ ಮಾಡುವ ತಾಕತ್ತು ಯಾರಿಗೂ ಇಲ್ಲ. ಗಣಪತಿ ಮೇಲೆ ನಂಬಿಕೆ ಇಟ್ಟವರು ಯಾರೂ ವಿರೋಧ ಮಾಡಲ್ಲ. ಈ ದೃಷ್ಟಿಕೋನ ಸರ್ಕಾರದಲ್ಲಿ ನಿತ್ಯ ನಿರಂತರ ಇರಲಿ. ಯಾವುದೇ ಸರ್ಕಾರಗಳು ಬಂದರೂ ದೇವರ ಪೂಜೆಗೆ ಅಡ್ಡಿ ಮಾಡಬಾರದು ಎಂದರು. 

ಮಂಗಳೂರು ವಿವಿ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್: ಹಾಸ್ಟೆಲ್ ವಾರ್ಡನ್ ಗಳ ಉಸ್ತುವಾರಿ!

ಮಂಗಳೂರು ವಿವಿಗೆ ಹೈ ಸೆಕ್ಯೂರಿಟಿ!

ಮಂಗಳೂರು ವಿವಿ ಆಡಿಟೋರಿಯಂನಲ್ಲಿ ಇಂದು ಗಣೇಶ ಪ್ರತಿಷ್ಟಾಪನೆ ಹಿನ್ನೆಲೆ ಮಂಗಳೂರು ವಿವಿ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೆಎಸ್ಆರ್ಪಿ ಸೇರಿದಂತೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಮಂಗಳಾ ಆಡಿಟೋರಿಯಂ ಎಂಟ್ರಿ ಗೇಟ್ ಸೇರಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಿದ್ದು, ಸರಳ ರೀತಿಯಲ್ಲಿ ಆಡಿಟೋರಿಯಂನಲ್ಲಿ ಗಣೇಶ ಪ್ರತಿಷ್ಟಾಪನೆಗೆ ಆಗಿದೆ. ಮಾವಿನ ಎಲೆ, ಹೂವು ಹಾಗೂ ಬಾಳೆ ಗಿಡ ಬಳಸಿ ಸರಳ‌ ಸಿಂಗಾರ ಮಾಡಿ ಯಾವುದೇ ಬಂಟಿಂಗ್ಸ್, ಬ್ಯಾನರ್ ಬಳಸದೇ ಪ್ರತಿಷ್ಟಾಪನೆ ಮಾಡಲಾಗಿದೆ. ವಿವಿಯ ಮಂಗಳಾ ಆಡಿಟೋರಿಯಂ ಒಳಭಾಗದಲ್ಲೂ ಪೊಲೀಸ್ ಭದ್ರತೆ ಹಾಕಿದ್ದು, ಡಿಸಿಪಿ ಸಿದ್ದಾರ್ಥ್ ಗೋಯಲ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಹಾಕಲಾಗಿತ್ತು.

Latest Videos
Follow Us:
Download App:
  • android
  • ios