ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡಿಯೇ ಮಾಡ್ತೇವೆ: ಕಲ್ಲಡ್ಕ ಪ್ರಭಾಕರ ಭಟ್ ಸವಾಲು!
ನಾವು ಸೆ.19ರಂದು ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡಿಯೇ ಮಾಡ್ತೇವೆ. ಅದನ್ನು ಯಾರು ಬೇಡ ಅಂದರೂ ವಿವಿಯ ಮಂಗಳಾ ಆಡಿಟೋರಿಯಂನಲ್ಲೇ ಗಣೇಶೋತ್ಸವ ಆಗುತ್ತೆ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸವಾಲು ಹಾಕಿದ್ದಾರೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಸೆ.10): ನಾವು ಸೆ.19ರಂದು ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡಿಯೇ ಮಾಡ್ತೇವೆ. ಅದನ್ನು ಯಾರು ಬೇಡ ಅಂದರೂ ವಿವಿಯ ಮಂಗಳಾ ಆಡಿಟೋರಿಯಂನಲ್ಲೇ ಗಣೇಶೋತ್ಸವ ಆಗುತ್ತೆ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸವಾಲು ಹಾಕಿದ್ದಾರೆ. ಮಂಗಳೂರು ವಿವಿ ಗಣೇಶೋತ್ಸವ ಆಚರಣೆ ವಿವಾದಕ್ಕೆ ಸದ್ಯ ಸಂಘಪರಿವಾರ ಎಂಟ್ರಿಯಾಗಿದ್ದು, ಮಂಗಳೂರು ವಿವಿ ಉಪಕುಲಪತಿ ನಡೆ ಖಂಡಿಸಿ ಮಂಗಳೂರಿನ ಅಸೈಗೋಳಿ ಮೈದಾನದಲ್ಲಿ ಭಜನೆ ಮೂಲಕ ಪ್ರತಿಭಟನೆ ನಡೆಸಲಾಗಿದೆ. ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿ ಹಲವರು ಭಾಗಿಯಾಗಿದ್ದು, ಬಿಜೆಪಿ, ಎಬಿವಿಪಿ, ಸಂಘಪರಿವಾರದ ಹಲವು ಸಂಘಟನೆಗಳು ಭಾಗಿಯಾಗಿದೆ.
ದೇವರಿಗೆ ಪ್ರಾರ್ಥನೆ, ಭಜನೆ ಮೂಲಕ ಪ್ರತಿಭಟನೆ ನಡೆಸಲಾಗಿದೆ. ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ನಿರಾಕರಿಸಿದ್ದ ವಿವಿ ಉಪಕುಲಪತಿ ಜಯರಾಜ್ ಆಮೀನ್, ವಿವಾದದ ಬಳಿಕ ಹಾಸ್ಟೆಲ್ ವಾರ್ಡನ್ ಗಳ ಉಸ್ತುವಾರಿಯಲ್ಲಿ ಗಣೇಶೋತ್ಸವ ನಡೆಸಲು ಅನುಮತಿ ನೀಡಿದ್ದರು. ಆದರೆ ಹಲವು ಕಂಡೀಷನ್ ಹಾಕಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ್ದು, ಅನುಮತಿ ಬಗ್ಗೆ ಸಂಘಪರಿವಾರ ಸಂಘಟನೆಗಳಲ್ಲಿ ಇನ್ನೂ ಗೊಂದಲ ಮುಂದುವರೆದಿದೆ. ಅಸೈಗೋಳಿಯ ಭಜನಾ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿದರು. ನಮಗೆ ಈಗ ಸಮಸ್ಯೆ ಬಂದಿರೋದು ಕಾಂಗ್ರೆಸ್ ನಿಂದ.
5 ಭರವಸೆಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದ ಕಾಂಗ್ರೆಸ್: ಸಂಸದ ಸುರೇಶ್
ಕಾಂಗ್ರೆಸ್ ನಮ್ಮನ್ನ ನಿರ್ವೀರ್ಯರನ್ನಾಗಿ, ಹೇಡಿಗಳನ್ನಾಗಿ ಮಾಡಿತು. ಈಗಲೂ ಪಾಕಿಸ್ತಾನ ಜಿಂದಾಬಾದ್ ಹೇಳುವವರು ಇದಾರೆ. ಅವರಿಗೆ ಕುಮ್ಮಕ್ಕು ಕೊಡೋರು ಇದಾರೆ, ಕಾಂಗ್ರೆಸ್ ಅವರಿಗೆ ಬೆಂಬಲ ಕೊಡ್ತಾ ಇದೆ. ಸ್ಟಾಲಿನ್ ಪುತ್ರ ಉದಯನಿಧಿ ಎಂಬ ಮಂತ್ರಿ ತನ್ನ ಕಂತ್ರಿ ಬುದ್ದಿ ತೋರಿಸಿದ. ಅದರ ಬಗ್ಗೆ ಈ ಕಾಂಗ್ರೆಸ್ ಏನೂ ಮಾತನಾಡಲ್ಲ, ಅದರ ಪರವಾಗಿ ಇವರು ನಿಂತರು. ಇನ್ನೊಬ್ಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಇನ್ನೊಬ್ಬ ಗೃಹಮಂತ್ರಿ. ಇಬ್ಬರೂ ಹಿಂದೂ ಧರ್ಮದ ಬಗ್ಗೆ ಮಾತನಾಡ್ತಾರೆ. ಹೆಸರು ಪರಮೇಶ್ವರ್, ಹೆಸರಲ್ಲೇ ಈಶ್ವರ ಇದೆ ಮಾರ್ರೆ. ಗಣೇಶ ಎಲ್ಲ ಅಡ್ಡಿಗಳ ನಿವಾರಿಸುವ ಮೊಟ್ಟ ಮೊದಲ ದೇವರು.
ಅವನು ವಿಘ್ನ ನಿವಾರಕ, ಸರ್ವ ವ್ಯಾಪಿ ಇರೋನು ಗಣೇಶ. ಮುಸ್ಲಿಮರೇ ಇರೋ ಇಂಡೋನೇಷ್ಯಾದ ನೋಟಿನ ಮೇಲೆ ಗಣೇಶನ ಚಿತ್ರ ಇದೆ. ಇಲ್ಲೊಬ್ಬರು ಅಮೀನರಿದ್ದಾರೆ, ಅವರ ಹೆಸರು ಜಯರಾಜ್. ಮಂಗಳೂರು ವಿವಿ ಉಪಕುಲಪತಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಭಟ್, ನಾವು ಹೊಸತಾಗಿ ವಿವಿಯಲ್ಲಿ ಗಣಪತಿ ಇಡಿ ಅಂತ ಹೇಳ್ತಾ ಇಲ್ಲ. ಮಂಗಳಾ ಆಡಿಟೋರಿಯಂನಲ್ಲೇ ಗಣಪತಿ ಇಟ್ಟರೆ ಇಡೀ ವಿವಿಗೆ ಒಳ್ಳೆದಾಗುತ್ತೆ. ಸ್ವಲ್ಪ ಇದರ ಹಿಂದೆ ನಮ್ಮ ಉಳ್ಳಾಲದ ಶಾಸಕರು ಇದ್ದಾರೆ. ಅವರು ನಮ್ಮ ದೇವಸ್ಥಾನಕ್ಕೆಲ್ಲಾ ಹೋಗ್ತಾರೆ, ನಾಡಿದ್ದು ಗಣೇಶೋತ್ಸವಕ್ಕೂ ಹೋಗ್ತಾರೆ. ಗಣೇಶನ ಹೆಸರಿನಲ್ಲಿ ರಾಜಕೀಯ ಮಾಡಬೇಡಿ.
ಎಲ್ಲಾ ಜನರು ಒಟ್ಟಾಗಿ ದೇಶಕ್ಕೋಸ್ಕರ ಗಣೇಶನ ಆರಾಧನೆ ಮಾಡಿದ್ರು. ಈಗ ಅವರು ಸ್ಪೀಕರ್, ಗಣೇಶನ ಅಲ್ಲೇ ಇಡಿ ಅಂತ ಅವರು ಹೇಳಬೇಕು. ನಾವು ಸೆ.19ರಂದು ಗಣೇಶನ ಪ್ರತಿಷ್ಟಾಪನೆ ಮಾಡಿಯೇ ಮಾಡ್ತೇವೆ. ಅದನ್ನ ಯಾರು ಬೇಡ ಅಂದರೂ ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಗುತ್ತೆ. ಅದಕ್ಕೆ ವಿವಿಯ ಅಮೀನರು ಹಾಗೂ ರಾಜ್ಯದ ಅಮೀನರಾದ ಸ್ಪೀಕರ್ ಕೂಡ ಬೆಂಬಲ ಕೊಡಬೇಕು. ಮಂಗಳೂರು ವಿವಿ ಸ್ಟ್ಯಾಂಡರ್ಡ್ ಕಡಿಮೆ ಆಗಿದೆ ಅಂತ ಸ್ಪೀಕರ್ ಖಾದರ್ ಹೇಳಿದ್ದಾರೆ. ಅದಕ್ಕಾಗಿ ಗಣೇಶನ ಕೂರಿಸಿ, ಆಗ ಮತ್ತೆ ಗುಣಮಟ್ಟ ಮೇಲೆ ಬರುತ್ತೆ. ನಮಗೆ ಇನ್ನೂ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಿಲ್ಲ, ಅದಕ್ಕಾಗಿ ಈ ಹೋರಾಟ ಎಂದರು.
'ನಾವೆಲ್ಲರೂ ವಿವಿ ಗಣೇಶೋತ್ಸವಕ್ಕೆ ಬಂದೇ ಬರ್ತೇವೆ, ಬಂದರೆ ಏನು ಮಾಡ್ತಾರೆ, ಅರೆಸ್ಟ್ ಮಾಡ್ತಾರಾ?':ಇನ್ನು ವಿವಿ ಗಣೇಶೋತ್ಸವಕ್ಕೆ ಹೊರಗಿನವರು ಬರಬೇಡಿ ಎಂಬ ಸ್ಪೀಕರ್ ಖಾದರ್ ಹೇಳಿಕೆಗೆ ಕಲ್ಲಡ್ಕ ಪ್ರಭಾಕರ ಭಟ್ ತಿರುಗೇಟು ನೀಡಿದ್ದಾರೆ. ಹೊರಗಿನವರು ಅಂದರೆ ಯಾರು? ನಾವೆಲ್ಲರೂ ಈ ದೇಶದಲ್ಲಿ ಇರುವವರೇ. ನಾವೆಲ್ಲರೂ ಗಣೇಶನ ಭಕ್ತರೇ ಅಲ್ವಾ? ಹೊರಗಿನವರು ಅಂದ್ರೆ ಯಾರು? ಒಳಗಿರೋರು ಅಂದ್ರೆ ವಿದ್ಯಾರ್ಥಿಗಳು, ಅವರು ಬೇರೆ ಬೇರೆ ಜಾಗದಿಂದ ಬಂದವರು. ಇಡೀ ರಾಜ್ಯದಿಂದ ಅಲ್ಲಿಗೆ ಜನ ಬಂದಿರ್ತಾರೆ, ಇದರಲ್ಲಿ ಹೊರಗಿನವರು ಅಂತ ಇಲ್ಲ.
ನಾವೆಲ್ಲರೂ ವಿವಿ ಗಣೇಶೋತ್ಸವಕ್ಕೆ ಬಂದೇ ಬರ್ತೇವೆ, ಅಲ್ಲಿ ಇರ್ತೇವೆ, ಅದರಲ್ಲಿ ಎರಡು ಪ್ರಶ್ನೆ ಇಲ್ಲ. ಬಂದರೆ ಏನು ಮಾಡ್ತಾರೆ, ಅರೆಸ್ಟ್ ಮಾಡ್ತಾರಾ? ನಾನು ಬಂದೇ ಬರ್ತೇನೆ. ನನ್ನನ್ನ ಅರೆಸ್ಟ್ ಮಾಡಿದ್ರೆ ತುಂಬಾ ಸಂತೋಷ, ಅರೆಸ್ಟ್ ಆಗದೇ ತುಂಬಾ ಸಮಯ ಆಯ್ತು. ಅರೆಸ್ಟ್ ಮಾಡಿದರೆ ಮಾಡಲಿ, ಅದರಲ್ಲಿ ನನಗೆ ಗಡಿಬಿಡಿ ಇಲ್ಲ. ಗಣೇಶನ ಇದಕ್ಕೆ ಯಾರೂ ಬರಬಾರದು ಅನ್ನೋದು ಒಳ್ಳೆಯ ಮಾತಲ್ಲ. ಸ್ಪೀಕರ್ ಹಾಗೆಲ್ಲ ಮಾತನಾಡಲ್ಬಾ ಅಂತ, ಅವರು ಎಲ್ಲರನ್ನ ಒಂದೇ ಕಲ್ಪನೆಯಲ್ಲಿ ಕೊಂಡು ಹೋಗಬೇಕು. ನಮ್ಮದು ಧರ್ಮಾಧರಿತ ದೇಶ, ಜಗತ್ತಿನ ಮೋಸ್ಟ್ ಸೆಕ್ಯುಲರ್ ಹಿಂದು. ನಿಮ್ಮ ದೇವರನ್ನ ನೀವು ಪೂಜೆ ಮಾಡಿ, ನಮ್ಮದಕ್ಕೆ ವಿರೋಧ ಬೇಡ.
ಮೆಡಿಕಲ್ ಕಾಲೇಜು ಸ್ಥಳಾಂತರ ಹಿಂದೆ ಡಿಕೆ ಬ್ರದರ್ಸ್‌ಗೆ ಲಾಭದ ಉದ್ದೇಶ: ಸಿ.ಪಿ.ಯೋಗೇಶ್ವರ್
ವಿವಿ ಅನ್ನೋದು ಹಿಂದೂ ಮೆಜಾರಿಟಿ ಇರೋ ಒಂದು ಸಂಸ್ಥೆ. ಅಲ್ಲಿ ದೇವರನ್ನು ಪೂಜೆ ಮಾಡಬಾರದು ಅಂದ್ರೆ ಏನರ್ಥ. ಸೆಕ್ಯೂಲರ್ ಹೆಸರಿನಿಂದ ಹಿಂದೂಗಳ ಜೀವನಕ್ಕೆ ತೊಂದರೆ ಆಗಿದೆ. ಅವರ ಮಸೀದಿ, ಮನೆಯಲ್ಲಿ ಅಲ್ಲಾನನ್ನೇ ಪೂಜೆ ಮಾಡಲಿ. ಇದು ರಾಷ್ಟ್ರಧರ್ಮ, ಹಾಗಾಗಿ ಮುಸಲ್ಮಾನರು ಗೌರವ ಕೊಡಲಿ. ಎಲ್ಲರೂ ಒಟ್ಟಿಗೆ ಬದುಕಲು ನಾವು ಪರಸ್ಪರ ಗೌರವಿಸಬೇಕು. ವಿವಿಯಲ್ಲಿ ಅಲ್ಲಾನನ್ನ ಪೂಜೆ ಮಾಡೋದಾದ್ರೆ ಮಾಡಲಿ. ಇವರು ನಿನ್ನೆ ಕಮ್ಯುನಿಸ್ಟರಿಗೆ ಕಾರ್ಯಕ್ರಮ ಮಾಡಲು ವಿವಿಯಲ್ಲಿ ಅವಕಾಶ ಕೊಡ್ತಾರೆ. ಹಿಂದೂ ವಿರೋಧಿ ಮಾತನಾಡುವ ಶಂಸುಲ್ ಇಸ್ಲಾಂಗೆ ಅವಕಾಶ ಕೊಡಲಿಲ್ವಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ.