ಮಂಗಳೂರು ವಿವಿ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್: ಹಾಸ್ಟೆಲ್ ವಾರ್ಡನ್ ಗಳ ಉಸ್ತುವಾರಿ!
ಮಂಗಳೂರು ವಿವಿಯಲ್ಲಿ ಗಣೇಶೋತ್ಸವ ಆಚರಣೆ ವಿವಾದ ವಿಚಾರ ಕೊನೆಗೂ ಸುಖಾಂತ್ಯ ಕಂಡಿದ್ದು, ಕೊನೆಗೂ ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮಂಗಳೂರು ವಿವಿ ಉಪಕುಲಪತಿ ಜಯರಾಜ್ ಅಮೀನ್ ಮಂಗಳ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ್ದಾರೆ.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಸೆ.7): ಮಂಗಳೂರು ವಿವಿಯಲ್ಲಿ ಗಣೇಶೋತ್ಸವ ಆಚರಣೆ ವಿವಾದ ವಿಚಾರ ಕೊನೆಗೂ ಸುಖಾಂತ್ಯ ಕಂಡಿದ್ದು, ಕೊನೆಗೂ ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮಂಗಳೂರು ವಿವಿ ಉಪಕುಲಪತಿ ಜಯರಾಜ್ ಅಮೀನ್ ಮಂಗಳ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ್ದಾರೆ.
ವಿವಿಯ ಹಾಸ್ಟೆಲ್ ವಾರ್ಡನ್ ಗಳ ನೇತೃತ್ವದಲ್ಲಿ ಗಣೇಶೋತ್ಸವ(Ganeshotsav in Mangaluru university) ಆಚರಣೆಗೆ ಅನುಮತಿ ನೀಡಿದ್ದು, ವಿವಿಯಿಂದ ಅಧಿಕೃತವಾಗಿ ಆಚರಣೆ ಅಲ್ಲ, ವಾರ್ಡನ್ ಗಳ ನೇತೃತ್ವದಲ್ಲಿ ಆಚರಣೆ ಅಂದಿದ್ದಾರೆ. ಹಾಸ್ಟೆಲ್ ಗಳಿಗೆ ಬರುವ ಸಾಂಸ್ಕೃತಿಕ ನಿಧಿ ಬಳಸಿಕೊಂಡು ಗಣೇಶೋತ್ಸವ ಆಚರಣೆಗೆ ಸೂಚಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ವಿವಿಯ ಭೋದಕ, ಬೋಧಕೇತರ ಸಿಬ್ಬಂದಿ ಭಾಗವಹಿಸಬಹುದು ಎಂದಿದ್ದಾರೆ.
ಹಾಸ್ಟೆಲ್ ವಾರ್ಡನ್ ಗಳು ಈ ಗಣೇಶೋತ್ಸವ ಆಚರಣೆ ನೇತೃತ್ವ ವಹಿಸಲಿದ್ದಾರೆ ಎಂದಿದ್ದು, ಈ ಬಗ್ಗೆ ಮಂಗಳೂರು ವಿವಿ ಕಚೇರಿಯಲ್ಲಿ ವಿವಿ ಉಪಕುಲಪತಿ ಜಯರಾಜ್ ಅಮೀನ್ ಹೇಳಿಕೆ ನೀಡಿದ್ದಾರೆ. ನಾನು ವಿವಿಯಲ್ಲಿ ಗಣೇಶೋತ್ಸವ ಆಚರಣೆ ಮಾಡಬೇಡಿ ಅಂತ ಹೇಳಿಲ್ಲ. ಕಳೆದ 40 ವರ್ಷಗಳಿಂದ ವಿವಿಯ ಹಾಸ್ಟೆಲ್ ನಲ್ಲಿ ಗಣೇಶೋತ್ಸವ ಆಚರಣೆ ಆಗ್ತಿದೆ. ಆದರೆ ಕೋವಿಡ್ ಬಳಿಕದ ಎರಡು ವರ್ಷದಿಂದ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆ ಆಗ್ತಿದೆ. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಮೇಲುಸ್ತುವಾರಿಯಲ್ಲಿ ಆಗ್ತಿದೆ. ವಿವಿ ಸಿಂಡಿಕೇಟ್ ಸಭೆಯಲ್ಲೇ ಇದರ ಹಣಕಾಸು ವೆಚ್ಚ ಮೀಸಲಿಡಲಾಗಿತ್ತು. ಆದರೆ ಈ ಬಾರಿ ಸರ್ಕಾರದ ನಿರ್ದೇಶನ ಇದ್ದ ಕಾರಣ ಹಾಸ್ಟೆಲ್ ನಲ್ಲಿ ನಡೆಸಲು ಸೂಚಿಸಿದ್ದೆ. ಮಂಗಳಾ ಆಡಿಟೋರಿಯಂ ಬದಲು ಈ ಹಿಂದಿನಂತೆ ಹಾಸ್ಟೆಲ್ ನಲ್ಲಿ ನಡೆಸಲು ಹೇಳಿದ್ದೆ. ಆದರೆ ಈ ಬಗ್ಗೆ ಬೇರೆ ಬೇರೆ ಅಭಿಪ್ರಾಯ ವ್ಯಕ್ತವಾದ ಕಾರಣ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಈವರೆಗೆ ಸರ್ಕಾರದಿಂದ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ನಿನ್ನೆ ವಿವಿ ಆಡಳಿತದ ಸಭೆ ನಡೆಸಿ ತೀರ್ಮಾನ ಮಾಡಲಾಗಿದೆ. ಈ ಬಾರಿ ಮಂಗಳಾ ಆಡಿಟೋರಿಯಂನಲ್ಲೇ ಗಣೇಶೋತ್ಸವ ಆಚರಣೆ ನಡೆಯಲಿದೆ. ಹಾಸ್ಟೆಲ್ ವಾರ್ಡನ್ ಗಳ ಉಸ್ತುವಾರಿಯಲ್ಲಿ ಗಣೇಶೋತ್ಸವ ಆಚರಣೆ ಆಗಲಿದೆ ಎಂದಿದ್ದಾರೆ.
ವಿವಿಯಲ್ಲಿ ಹಣ ಇಲ್ಲದಿದ್ದರೆ ನಾನೇ 2-3 ಲಕ್ಷ ಕೊಡ್ತೇನೆ: ಶಾಸಕ ವೇದವ್ಯಾಸ ಕಾಮತ್
ಮಂಗಳೂರು ವಿವಿಯಲ್ಲಿ ಗಣೇಶೋತ್ಸವ ಆಚರಣೆ ವಿವಾದ ವಿಚಾರ ಸಂಬಂಧಿಸಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಬೆದರಿಕೆ ಹಾಕಿದ್ದಾರೆ ಅಂತ ಉಪಕುಲಪತಿಯಿಂದ ಸರ್ಕಾರಕ್ಕೆ ಪತ್ರ ವಿಚಾರ ಸದ್ದು ಮಾಡಿದೆ. ಈ ಪತ್ರದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ನೀಡಿದ್ದಾರೆ. ಉಪಕುಲಪತಿಗಳು ಮೊದಲು ಬೆದರಿಕೆ ಶಬ್ದದ ಅರ್ಥ ತಿಳಿದುಕೊಳ್ಳಲಿ. ನಾನು ಹಿಂದಿನಂತೆ ಗಣಪತಿ ಹಬ್ಬ ಆಚರಿಸಿ ಅಂತ ಒತ್ತಾಯ ಮಾಡಿದ್ದೆ. ಆದರೆ ವಿಸಿ ಸರ್ಕಾರಕ್ಕೆ ಪತ್ರ ಬರೆಯುವ ಮೊದಲೇ ಗಣಪತಿ ಹಬ್ಬ ಆಚರಿಸಲ್ಲ ಎಂದಿದ್ದರು. ಹೀಗಾಗಿ ನಾನು ಅವರಿಗೆ ಅರ್ಧ ಗಂಟೆ ಮನವಿ ಮಾಡಿದೆ. ವಿವಿಯಲ್ಲಿ ಹಣದ ಕೊರತೆ ಇದೆ ಅಂತ ವಿಸಿ ನನಗೆ ಹೇಳಿದ್ರು. ಇಲ್ಲಿ ಹುಟ್ಟಿ, ಇಲ್ಲಿ ಬದುಕಿ ಇವರಿಗೆ ಗಣಪತಿ ಹಬ್ಬಕ್ಕೆ ಕೊಡಲು 1.5ಲಕ್ಷ ಇಲ್ವಂತೆ. ನೀವು ಗಣಪತಿ ಹಬ್ಬ ಮಾಡಲ್ಲ ಅಂದ್ರೆ ನಾವು ಏನು ಮಾಡ್ತೀವಿ ಅಂತ ಅವರಿಗೆ ಹೇಳಿದ್ದೆ. ಸಾರ್ವಜನಿಕವಾಗಿ ಸಂಘಪರಿವಾರ ಜೊತೆ ಸೇರಿ ಪ್ರತಿಭಟನೆ ಮಾಡ್ತೇನೆ ಅಂದೆ. ಆಗ ಸರ್ಕಾರ ಧಾರ್ಮಿಕ ಕಾರ್ಯಕ್ರಮ ಮಾಡಬಾರದು ಅಂತ ಸೂಚಿಸಿದೆ ಅಂತ ಹೇಳಿದ್ರು. ಗಣಪತಿ ಹಬ್ಬ ಆಚರಣೆಗೆ ಆರಂಭದಲ್ಲೇ ವಿಸಿ ವಿರೋಧ ಮಾಡಿದ್ದರು. ಅವರು ದೆಹಲಿಯ ಜೆಎನ್ಯೂ ವಿವಿಯಿಂದ ಬಂದವರು, ಅವರಲ್ಲಿ ಅಲ್ಲಿನ ಮಾನಸಿಕತೆ ಇದೆ. ಅದರ ಜೊತೆ ಅವರು ಸದ್ಯ ಹಂಗಾಮಿ ಉಪಕುಲಪತಿ. ನಾಡಿದ್ದು ಹೊಸ ವಿಸಿ ನೇಮಕ ಆಗಲಿದೆ, ಅದಕ್ಕೆ ಇವರು ಕೂಡ ಅರ್ಜಿ ಹಾಕಿದ್ದಾರೆ. ಗಣಪತಿ ಹಬ್ಬ ತಡೆದ್ರೆ ಸಿದ್ದರಾಮಯ್ಯ ಇವರಿಗೆ ವಿಸಿ ಪೋಸ್ಟ್ ಕೊಡ್ತಾರೆ ಅಂತ ಇವರ ತಲೆಯಲ್ಲಿ ಇದೆ.
ಮಂಗಳೂರು: ಕಸ್ಟಮ್ಸ್ ವಶಕ್ಕೆ ಪಡೆದ ರಕ್ತಚಂದನ 28 ಕೋಟಿಗೆ ಹರಾಜು!
ಒಂದು ವೇಳೆ ಗಣಪತಿ ಹಬ್ಬಕ್ಕೆ ಅವಕಾಶ ಕೊಡದೇ ಇದ್ರೆ ನಾನು ಪ್ರತಿಭಟನೆ ಮಾಡಿಯೇ ಸಿದ್ದ. ಹಿಜಾಬ್ ವಿಚಾರದ ತೀರ್ಪು ಇದಕ್ಕೆ ಅನ್ವಯ ಆಗಲ್ಲ. ಹಳೆಯ ನಿಯಮ ಬದಲಿಸಿ ಅಂತ ಕೋರ್ಟ್ ಹೇಳಿಲ್ಲ. ಹೊಸ ಆಚರಣೆ ಮಾಡಬೇಡಿ ಅಂತ ಕೋರ್ಟ್ ಆದೇಶ ಮಾಡಿದ್ದು. ದೇವರಿಲ್ಲ ಎನ್ನುವುದು ಈ ಕಮ್ಯುನಿಸ್ಟರ ವಾದ. ಈಗ ಡಿವೈಎಫ್ ಐನವರು ಈ ವಿಚಾರದ ಬಗ್ಗೆ ಮಾತನಾಡ್ತಾರೆ. ನಮ್ಮ ಹಿಂದೂ ನಂಬಿಕೆಗೆ ಅಡ್ಡಿಯಾದವರಿಗೆ ಅವರು ಬೆಂಬಲ ಕೊಡ್ತಾರೆ. ಮಂಗಳೂರು ವಿವಿ ಗಣಪತಿ ಆಚರಣೆಗೆ ಹಣ ಇಲ್ಲ ಅಂದಿರೋದು ದುರ್ದೈವ. ಆದರೆ ಹಣ ಇಲ್ಲ ಅಚರಣೆಗೆ ಅಂತ ಹೇಳಿದ್ರೆ ನಾನು ಹಣ ಕೊಡ್ತೇನೆ ಪ್ರತೀ ವರ್ಷ ಡೊನೇಷನ್ ಮಾಡಿ 2-3 ಲಕ್ಷ ಹಣ ನಾನು ಕೊಡ್ತೇನೆ. ಆದರೆ ಇವರತ್ರ ಭ್ರಷ್ಟಾಚಾರ ಮಾಡಲು ಹಣ ಇದೆ, ಅನಗತ್ಯ ಕೆಲಸಕ್ಕೆ ಹಣ ಇದೆ. ಮೊನ್ನೆಯೂ ಎಡಪಂಥೀಯರ ಕಾರ್ಯಕ್ರಮ ಹಣ ಖರ್ಚು ಮಾಡಿ ಮಾಡಿದ್ದರು ಎಂದು ದೂರಿದ್ದಾರೆ.