ಗಣೇಶ ಮೆರವಣಿಗೆ ವೇಳೆ ಮಸೀದಿಗೆ ಕಲ್ಲು ತೂರಾಟ ಆರೋಪ; ಎರಡು ಕೋಮುಗಳ ನಡುವೆ ಸಂಘರ್ಷ
ಪಟ್ಟಣದ ಬ್ರಾಹ್ಮಣ ಬೀದಿಯ ಗಣಪತಿ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ಗಲಾಟೆ ನಡೆದು ಮಸೀದಿ ಮೇಲೆ ಕಲ್ಲುತೂರಾಟ ನಡೆದಿದೆ ಎಂದು ಆರೋಪಿಸಿ ಎರಡು ಕೋಮುಗಳ ನಡುವೆ ಸಂಘರ್ಷ ನಡೆದಿದೆ.
ಹೊಳೆಹೊನ್ನೂರು (ಸೆ.23) : ಪಟ್ಟಣದ ಬ್ರಾಹ್ಮಣ ಬೀದಿಯ ಗಣಪತಿ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ಗಲಾಟೆ ನಡೆದು ಮಸೀದಿ ಮೇಲೆ ಕಲ್ಲುತೂರಾಟ ನಡೆದಿದೆ ಎಂದು ಆರೋಪಿಸಿ ಎರಡು ಕೋಮುಗಳ ನಡುವೆ ಸಂಘರ್ಷ ನಡೆದಿದೆ.
ಇಲ್ಲಿನ ಬ್ರಾಹ್ಮಣ ಬೀದಿಯ ಗಣಪತಿ ಮೆರವಣಿಗೆ ಸಾಗುವಾಗ ಮಸೀದಿ ಬಳಿ ದೊಡ್ಡ ಗಾತ್ರದ ಸಿಡಿಮದ್ದುಗಳನ್ನು ಸಿಡಿಸಿದ್ದರಿಂದ ಆರಂಭವಾದ ಗಲಭೆಯಲ್ಲಿ ಮಸೀದಿ ಮೇಲೆ ಕಲ್ಲು ತೂರುವ ಹಂತ ತಲುಪಿದೆ ಎನ್ನಲಾಗುತ್ತಿದೆ. ಹೊಳೆಹೊನ್ನೂರಿನಲ್ಲಿ ಪ್ರಕ್ಷುಬ್ದ ವಾತವರಣ ನಿರ್ಮಾಣವಾಗಿದೆ.
ಬೆಂಗಳೂರು: ತಮಿಳುನಾಡು ನಾಲ್ಕುಬಸ್‌ಗಳ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು!
ಮೆರವಣಿಗೆ ಸಾಗುವಾಗ ಮಸೀದಿ ಮುಂಭಾಗ ರಸ್ತೆಯಲ್ಲಿ ದೊಡ್ಡ ಗಾತ್ರದ ಪಟಾಕಿಗಳನ್ನು ಸಿಡಿಸಿದ ಪರಿಣಾಮ ಗಲಭೆ ಆರಂಭವಾಗಿದೆ. ಪೊಲೀಸರು ಮೆರವಣಿಗೆಯನ್ನು ಮುಂದಕ್ಕೆ ಕಳಿಸಿದ್ದಾರೆ. ಮಸೀದಿಯಲ್ಲಿ ನಮಾಜ್‌ಗೆ ತೆರಳಿದವರು ಹೆಳುವಂತೆ ಬೇರೆಡೆಯಿಂದ ಬಂದವರು ಮಸೀದಿಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ನಮ್ಮ ಬಳಿ ಕಲ್ಲು ತೂರಾಟದ ವಿಡೀಯೊಗಳಿವೆ ಎನ್ನುತ್ತಿದ್ದಾರೆ. ಕಲ್ಲು ತೂರಾಟ ಸುದ್ದಿ ಹರಡುತ್ತಿದ್ದಂತೆ ಮುಸ್ಲಿಂ ಸಮುದಾಯದವರು ಮಸೀದಿ ಆವರಣದಲ್ಲಿ ಜಮಾಯಿಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಪ್ರತಿಭಟನೆ ಆರಂಭಿಸಿದರು.
ಸ್ಥಳಕ್ಕೆ ಗ್ರಾಮಾಂತರ ಶಾಸಕಿ ಶಾರದ ಪೂರ‍್ಯಾನಾಯ್ಕ್ ಭೇಟಿ ನೀಡಿ ಘಟನೆಯ ಬಗ್ಗೆ ಪೊಲೀಸ್ ಹಾಗೂ ಮುಸ್ಲಿಮರೊಂದಿಗೆ ಕೆಲಕಾಲ ಚರ್ಚಿಸಿದ್ದಾರೆ. ಮೆರವಣಿಗೆಯಲ್ಲಿದ ಸ್ಥಳೀಯರು ಕಲ್ಲು ತೂರಾಟ ಮಾಡಿಲ್ಲ, ಬೇರೆಡೆಯಿಂದ ಬಂದವರು ಪಟ್ಟಣದ ಶಾಂತಿ ಕದಡುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರಿಗೆ ಸೂಕ್ತ ಕ್ರಮ ಜರುಗಿಸುವಂತೆ ಹೇಳಲಾಗಿದ್ದು, ತಪ್ಪಿತಸ್ಥರನ್ನು ಸುಮ್ಮನೆ ಬಿಡುವ ಮಾತಿಲ್ಲ ಎಂದು ಹೇಳಿದರು.
Kolar ಅರಣ್ಯ ಭೂಮಿ ಒತ್ತುವರಿ ತೆರವಿಗೆ ಬಂದವರ ಮೇಲೆ ಕಲ್ಲೆಸೆತ: ಪ್ರಾಣ ಉಳಿಸಿಕೊಳ್ಳಲು ಸರ್ಕಾರಿ ಸಿಬ್ಬಂದಿ ಪರದಾಟ
ಸ್ಥಳಕ್ಕೆ ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್ ಭೂಮಾರೆಡ್ಡಿ ಭೇಟಿ ನೀಡಿ ಎರಡು ಗುಂಪುಗಳ ನಡುವೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಮುಸ್ಲಿಮರು ಪ್ರತಿಭಟನೆ ನಿಲ್ಲಿಸಿದ್ದಾರೆ.
ಆದರೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಸಮುದಾಯದವರು ತಿಳಿಸಿದ್ದಾರೆ. ಇದರಿಂದ ಹೊಳೆಹೊನ್ನೂರಿನಲ್ಲಿ ಬೀಗುವಿನ ವಾತವರಣ ನಿರ್ಮಾಣವಾಗಿದೆ.