ರಾಜ್ಯದ 176 ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ
- ರಾಜ್ಯದ 176 ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ
- ಜಿಲ್ಲೆಯ ಕೋನಪಲ್ಲಿ, ವಾಟದಹೊಸಹಳ್ಳಿ, ಆನೂರು, ಸೋಮನಾಥಪುರ, ಕುಪ್ಪಳ್ಳಿ, ಬೀಚಗಾನಹಳ್ಳಿ ಆಯ್ಕೆ
- ಕಾಗತಿ ನಾಗರಾಜಪ್ಪ. ಉತ್ತಮ ಆಡಳಿತ
- -ಪರಿಣಾಮಕಾರಿ ಆಡಳಿತ ನೀಡಿದ ಗ್ರಾಪಂಗೆ ಪುರಸ್ಕಾರ
- -ಪ್ರತಿ ಗ್ರಾಪಂಗೆ ಪ್ರಶಸ್ತಿ .5 ಲಕ್ಷ ನಗದು ನೀಡಿ ಗೌರವ
- -ರಾಜ್ಯದ 176 ತಾಲೂಕುಗಳಲ್ಲಿ ತಲಾ 1 ಗ್ರಾಪಂಗೆ ಪುರಸ್ಕಾರ
- 2 ವರ್ಷ ಬಳಿಕ ಗಾಂಧಿ ಪುರಸ್ಕಾರ ಘೊಷಿಸಿದ ಸರ್ಕಾರ
ಚಿಕ್ಕಬಳ್ಳಾಪುರ (ಸೆ.24) : ರಾಜ್ಯ ಸರ್ಕಾರ 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿರುವ ಗ್ರಾಪಂಗಳ ಪಟ್ಟಿಬಿಡುಗಡೆಗೊಳಿಸಿದ್ದು ಜಿಲ್ಲೆಯ ಆರು ಗ್ರಾಪಂಗಳಿಗೆ 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿವೆ. ರಾಜ್ಯ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ (ಪಂ.ರಾಜ್) ನಿರ್ದೇಶಕರಾದ ಕೆ.ಬಿ.ಅಂಜನಪ್ಪ , ರಾಜ್ಯದಲ್ಲಿನ ಒಟ್ಟು 31 ಜಿಲ್ಲೆಗಳ ಬರೋಬ್ಬರಿ 176 ತಾಲೂಕುಗಳಲ್ಲಿ ತಲಾ ಒಂದು ಗ್ರಾಪಂಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿರುವ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಚಿಕ್ಕಬಳ್ಳಾಪುರ ತಹಶೀಲ್ದಾರ್ ಕಚೇರಿಗೆ ನಕಲಿ ಲೋಕಾಯುಕ್ತ ದಾಳಿ, ಐಡಿಕಾರ್ಡ್ ಕೇಳಿದ್ದೇ ಕಾಲ್ಕಿತ್ತ!
ಪರಿಣಾಮಕಾರಿ ಆಡಳಿತಕ್ಕೆ ಪ್ರಶಸ್ತಿ
ಗ್ರಾಮ ಪಂಚಾತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸದುದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಪಂಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ 2013-14ನೇ ಸಾಲಿನಿಂದ ಪ್ರತಿ ತಾಲೂಕಿಗೆ ಒಂದರಂತೆ ಗ್ರಾಪಂಯನ್ನು ಗಾಂಧಿ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಂಡು ಬರಲಾಗುತ್ತಿದ್ದು. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಪಂಗಳನ್ನು ಆಯ್ಕೆ ಮಾಡಿರಲಿಲ್ಲ.
ಹೀಗಾಗಿ 2020-21ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡ 176 ಗ್ರಾಪಂಗಳನ್ನು ಪ್ರಕಟಿಸಿದ್ದು ಆ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ತಲಾ ಒಂದರಂತೆ ಒಟ್ಟು 6 ಗ್ರಾಪಂಗಳನ್ನು ಜಿಲ್ಲೆಯ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಮೂಲಕ ಶಿಪಾರಸ್ಸು ಮಾಡಲಾದ 6 ಗ್ರಾಪಂಗಳನ್ನು ರಾಜ್ಯ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿವೆ.
ಪ್ರತಿ ಗ್ರಾಪಂಗೆ 5 ಲಕ್ಷ ನೆರವು:
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿರುವ ಪ್ರತಿ ಗ್ರಾಪಂಗೆ ರಾಜ್ಯ ಸರ್ಕಾರ 2021-22ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಅಗ್ರ ಪ್ರಶಸ್ತಿ ಲೆಕ್ಕ ಶಿರ್ಷಿಕೆಯಡಿ 2515-00-102-0011 ಅಡಿ ಒದಗಿಸಲಾದ ಪ್ರಸ್ತುತ ಎಸ್‌ಬಿಐ ಖಾತೆಯಲ್ಲಿ ಇರಿಸಲಾಗಿರುವ 8.80 ಕೋಟಿ ರುನ ಅನುದಾನದಲ್ಲಿ ಪ್ರತಿ ಗ್ರಾಪಂಗೆ ತಲಾ 5 ಲಕ್ಷ ರು, ಪ್ರಶಸ್ತಿ ಹಣ ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ಕೋವಿಡ್ ಸೃಷ್ಠಿಸಿದ ಆರ್ಥಿಕ ಸಂಕಷ್ಟದ ಪರಿಣಾಮ ಎರಡು ವರ್ಷದಿಂದ ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ಸರ್ಕಾರ ಘೋಷಿಸಿರಲಿಲ್ಲ. ಇದೀಗ ಘೋಷಣೆ ಆಗಿರುವ 176 ಗ್ರಾಪಂಗಳಿಗೆ ತಲಾ 5 ಲಕ್ಷ ರು, ಆರ್ಥಿಕ ನೆರವು ಘೋಷಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡೆಂಘೀ 216, ಚಿಕನ್ ಗುನ್ಯಾ 14 ಕೇಸ್, ಹೆಚ್ಚಿದ ಆತಂಕ
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡ ಗ್ರಾಪಂಗಳು
ತಾಲೂಕು ಗ್ರಾಪಂ ಹೆಸರು
- ಗುಡಿಬಂಡೆ ಬೀಚಗಾನಹಳ್ಳಿ
- ಚಿಕ್ಕಬಳ್ಳಾಪುರ ಕುಪ್ಪಹಳ್ಳಿ
- ಗೌರಿಬಿದನುರು ವಾಟದಹೊಸಹಳ್ಳಿ
- ಶಿಡ್ಲಘಟ್ಟ ಆನೂರು
- ಚಿಂತಾಮಣಿ ಕೋನಪಲ್ಲಿ
- ಬಾಗೇಪಲ್ಲಿ ಸೋಮನಾಥಪುರ