ಚಿಕ್ಕಬಳ್ಳಾಪುರ ತಹಶೀಲ್ದಾರ್ ಕಚೇರಿಗೆ ನಕಲಿ ಲೋಕಾಯುಕ್ತ ದಾಳಿ, ಐಡಿಕಾರ್ಡ್ ಕೇಳಿದ್ದೇ ಕಾಲ್ಕಿತ್ತ!
ನಾನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ತಾಲ್ಲೂಕು ಕಚೇರಿಗೆ ಈ ನಕಲಿ ಲೋಕಾಯುಕ್ತ ದಾಳಿ ನಡೆಸಿ ಕೆಲ ಕಾಲ ಎಲ್ಲರನ್ನೂ ಭಯಭೀತಗೊಳಿಸಿದ ಘಟನೆ ಚಿಕ್ಕಬಳ್ಳಾಪುರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ (ಸೆ.23): ರಾಜ್ಯದಲ್ಲಿ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಬಲ ಗೊಳಿಸುತ್ತಿದ್ದಂತೆ ಇದರ ದುರ್ಬಳಕೆ ಕೂಡ ಹೆಚ್ಚಾಗುತ್ತಿವೆ. ಹೀಗೆ ನಾನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ತಾಲ್ಲೂಕು ಕಚೇರಿಗೆ ಈ ನಕಲಿ ಲೋಕಾಯುಕ್ತ ದಾಳಿ ನಡೆಸಿ ಕೆಲ ಕಾಲ ಎಲ್ಲರನ್ನೂ ಭಯಭೀತಗೊಳಿಸಿದ ಘಟನೆ ಚಿಕ್ಕಬಳ್ಳಾಪುರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ನಾನು ಲೋಕಾಯುಕ್ತ ಅಧಿಕಾರಿ ನನಗೆ ಈ ದಾಖಲೆ ಕೊಡಿ ಆ ದಾಖಲೆ ಕೊಡಿ ಅಂತ ಇಡೀ ತಾಲ್ಲೂಕು ಕಛೇರಿಯನ್ನೇ ಸುತ್ತಾಡಿದ ಈ ಭೂಪ ಚಿಕ್ಕಬಳ್ಳಾಪುರ ತಾಲ್ಲೂಕು ಸೊಪ್ಪಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ ನ ದಾಖಲಾತಿಗಳನ್ನ ಪಡೆದುಕೊಂಡಿದ್ದಾನೆ. ಅಲ್ಲದೆ ಸರ್ವೆ ಕಚೇರಿಗೂ ತೆರಳಿ ಅಲ್ಲಿಯೂ ಕೆಲವೊಂದು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾನೆ. ದಾಖಲೆಗಳ ಪರಿಶೀಲನೆ ವೇಳೆ ಈ ನಕಲಿ ಲೋಕಾಯುಕ್ತ ನ ಹಾವಭಾವಗಳನ್ನು ಗುರುತಿಸಿದ ಖಡಕ್ ತಹಶೀಲ್ದಾರ್ ಎಂದೇ ಹೆಸರು ಪಡೆದಿರುವ ಗಣಪತಿಶಾಸ್ತ್ರಿ ಆತನನ್ನ ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿ ನೀವು ಲೋಕಾಯುಕ್ತ ದಾಳಿ ನಡೆಸಲು ಬಂದಿದ್ದೀರಿ ನಿಮ್ಮ ಬಳಿ ಅನುಮತಿ ಪತ್ರ ಇದೆಯಾ ದಾಖಲೆ ಕೊಡಿ ಎಂದು ಪ್ರಶ್ನಿಸಿದ್ದಾರೆ.
ಹೀಗೆ ಪ್ರಶ್ನೆ ಮಾಡುತ್ತಿದ್ದಂತೆ ನಿಬ್ಬೆರಗಾದ ನಕಲಿ ಲೋಕಾಯುಕ್ತ ನನಗೆ ಆ ರೀತಿ ಏನೂ ಕೊಟ್ಟಿಲ್ಲ ನಾನು ಲೋಕಾಯುಕ್ತ ಅಧಿಕಾರಿ ಎಂದು ಕಾಲು ಮೇಲೆ ಕಾಲು ಹಾಕ್ಕೊಂಡು ಉತ್ತರ ಕೊಟ್ಟಿದ್ದಾನೆ. ಕನಿಷ್ಠ ನಿಮ್ಮ ಐಡಿ ಕಾರ್ಡ್ ಆದರೂ ಕೊಡಿ ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಕೇಳುತ್ತಿದ್ದಂತೆ ಕಚೇರಿಯಿಂದ ನಕಲಿ ಲೋಕಾಯುಕ್ತ ಪೇರಿ ಕಿತ್ತಿದ್ದಾನೆ.
ಲೋಕಾಯುಕ್ತ ದಾಳಿ: ಲಂಚ ಸಮೇತ ಪೊಲೀಸ್ ಪೇದೆ, ಸಿಪಿಐ ವಾಹನ ಚಾಲಕನ ಬಂಧನ
ಈತ ನಕಲಿ ಲೋಕಾಯುಕ್ತ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಗಣಪತಿಶಾಸ್ತ್ರಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಕಲಿ ಯಾಗಿ ದಾಳಿ ನಡೆಸಿದ್ದಲ್ಲದೆ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ್ದಾನೆಂದು ದೂರಿನಲ್ಲಿ ದಾಖಲಿಸಿದ್ದಾರೆ. ಇನ್ನೂ ಈ ನಕಲಿ ಲೋಕಾಯುಕ್ತ ಇಡೀ ತಾಲ್ಲೂಕು ಕಚೇರಿಯಲ್ಲಿ ಸುತ್ತಾಟ ನಡೆಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ನಕಲಿ ಲೋಕಾಯುಕ್ತ ಅಧಿಕಾರಿ ಗಾಗಿ ಬಲೆ ಬೀಸಿದ್ದಾರೆ.
ಬಾಗ್ಮನೆ ಒತ್ತುವರಿ ತೆರವಿಗೆ ‘ಲೋಕಾ ತಡೆ’ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ
ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ದಾಳಿ: ಪೊಲೀಸ್ ಪೇದೆ ಶಿವರಾಯ, ಸಿಪಿಐ ವಾಹನ ಚಾಲಕ ಅವ್ವಣ್ಣ ಬಂಧನ
ಕಲಬುರಗಿ/ ಜೇವರ್ಗಿ: ಮರಳು ವ್ಯವಹಾರದಲ್ಲಿ ಲಂಚವಾಗಿ .30 ಸಾವಿರ ಸ್ವೀಕರಿಸುತ್ತಿರುವಾಗ ಜೇವರ್ಗಿಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿ ಪೊಲೀಸ್ ಪೇದೆ ಶಿವರಾಯ, ಜೇವರ್ಗಿ ಸಿಪಿಐ ವಾಹನ ಚಾಲಕ ಅವ್ವಣ್ಣ ಇವರನ್ನು ತಕ್ಷಣ ಸ್ಥಳದಲ್ಲೇ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಈ ಪ್ರಕರಣದಲ್ಲಿ ಸಿಪಿಐ ಅವರ ಹೆಸರು ಬಂಧಿತರಿಬ್ಬರೂ ಪ್ರಸ್ತಾಪಿಸಿದ್ದರಿಂದ ಲೋಕಾಯುಕ್ತ ಅಧಿಕಾರಿಗಳು ಜೇವರ್ಗಿ ಸಿಪಿಐ ಶಿವಪ್ರಸಾದ್ ಇವರನ್ನೂ ವಿಚಾರಣೆಗೆ ಕರೆದೊಯ್ದಿದ್ದಾರೆ.
ಇವರನ್ನೆಲ್ಲ ಜೇವರ್ಗಿ ಹೊರವಲಯದಲ್ಲಿರುವ ಅತಿಥಿ ಗೃಹಕ್ಕೆ ಕರೆದೊಯ್ದು ಲೋಕಾಯುಕ್ತ ತಂಡ ವಿಚಾರಣೆ ನಡೆಸುತ್ತಿದೆ. ಇನ್ನೂ ವಿಚಾರಣೆ ಮುಂದುವರಿದಿರೋದರಿಂದ ಸಂಪೂರ್ಣ ಮಾಹಿತಿ ಇಂದು ಹೊರಬೀಳುವ ನಿರೀಕ್ಷೆ ಇದೆ.
ಮರಳು ವ್ಯವಹಾರದಲ್ಲಿ ಅಖಿಲ್ ಎಂಬುವವರಿಂದ ಪೊಲೀಸ್ ಪೇದೆ ಹಾಗೂ ಚಾಲಕ ಹಣ ಕೇಳಿದ್ದರೆಂಬ ಮಾಹಿತಿ ಗೊತ್ತಾಗಿದ್ದು ಈ ದೂರಿನ ಮೇಲೆಯೇ ಲೋಕಾಯುಕ್ತರು ದಾಳಿ ಮಾಡಿ ಬಂಧಿಸಿದ್ದಾರೆಂದು ಗೊತ್ತಾಗಿದೆ.
ಸಿನಿಮಿಯ ರೀತಿಯಲ್ಲಿ ಬಂಧನ: ಬಂಧಿತ ಜೇವರ್ಗಿ ಪೊಲೀಸ್ ಪೇದೆ ಶಿವರಾಯ ಪೊಲೀಸ್ ವಸತಿ ಗೃಹದಿಂದಲೇ ಹಣ ಸಮೇತ ಪರಾರಿಯಾಗಲು ಯತ್ನಿಸಿದ್ದು ಸಿನಿಮೀಯ ರೀತಿಯಲ್ಲಿ ಬೆನ್ನು ಹತ್ತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಸೇರಿದಂತೆ ಪಿಐ ದೃವತಾರೆ, ಅಕ್ಕಮಹಾದೇವಿ, ನಾನಾಗೌಡ, ಸಿಬ್ಬಂದಿ ಪ್ರದೀಪ್ ಮತ್ತು ಸಿದ್ದಲಿಂಗ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.