Asianet Suvarna News Asianet Suvarna News

ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸ್ವಾಮೀಜಿ ಅಸಮಾಧಾನ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ವೀರಶೈವ ಲಿಂಗಾಯತ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಆದ್ರೆ, ಇದಕ್ಕೆ ಅಸಮಾಧಾನಗಳು ವ್ಯಕ್ತವಾಗುತ್ತಿವೆ.

Gadag Tontadarya Siddaram Swamy express disappointment For Veerashaiva Lingayat Corporation rbj
Author
Bengaluru, First Published Nov 17, 2020, 4:41 PM IST

ಗದಗ, (ನ.17): ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಆದೇಶಕ್ಕೆ ಪರ-ವಿರೋಧಗಳು ಚರ್ಚೆಯಾಗುತ್ತಿವೆ.

 ಕೆಲವರು ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಸಂತಸ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

 ಹೌದು...ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಗದಗನ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ಧರಾಮ ಸ್ವಾಮೀಜಿಗಳು
ಅಸಮಾಧಾನಗೊಂಡಿದ್ದಾರೆ. 

'ವೀರಶೈವ-ಲಿಂಗಾಯತ ನಿಗಮ‌ ಸ್ಥಾಪನೆ ನಾನು ಸ್ವಾಗತ ಮಾಡಲ್ಲ'

ಸರ್ಕಾರ ಒಂದಷ್ಟು ಸಂಘಟನೆಗಳಿಗೆ ಮನ್ನಣೆ ನೀಡಿದೆ ಎಂದು ಅನಿಸುತ್ತದೆ. ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಯಾವುದೇ ಗೊತ್ತು ಗುರಿಗಳು ಸಹ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.

ವೀರಶೈವ- ಲಿಂಗಾಯತ ನಿಗಮದಿಂದ ಯಾರಿಗೆ ಪ್ರಯೋಜನ..? ಇದರ ಫಲಾನುಭವಿಗಳು ಯಾರು ಅಂತಾ ಸ್ಪಷ್ಟತೆ ಇಲ್ಲ. ನಿಗಮಕ್ಕೆ ಅನುದಾನ ಸಹ ಘೋಷಣೆ ಮಾಡಿಲ್ಲ. ಸಣ್ಣಪುಟ್ಟ ಅನುದಾನ ಘೋಷಣೆ ಮಾಡಿದರೆ ಪ್ರಯೋಜನ ಇಲ್ಲ ಎಂದರು.

 ಈ ನಿಗಮದ ಪ್ರಯೋಜನ ವೀರಶೈವರಿಗೋ..? ಅಥವಾ ಲಿಂಗಾಯತರಿಗೋ..? ವೀರಶೈವ- ಲಿಂಗಾಯತ ಅಂತಾ ಪ್ರಮಾಣ ಪತ್ರವನ್ನು ಹೊಂದಿದವರಿಗೆ ಮಾತ್ರ ಎನ್ನುವ ಕುರಿತು ಸ್ಪಷ್ಟತೆ ಇಲ್ಲ ಎಂದು ತಿಳಿಸಿದರು.

ನಿಯಮ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಮಾಡಬೇಕು. ಕಡಿಮೆ ಅನುಧಾನ ಬಿಡುಗಡೆ ಮಾಡಿದ್ರೆ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಲಿಂಗಾಯತರಿಗೆ ಪ್ರಯೋಜನ ಇಲ್ಲ.ಮಹಾರಾಷ್ಟ್ರ ಸರ್ಕಾರದ ಬಹುಸಂಖ್ಯಾತ ಮರಾಠರಿಗೆ ಅಭಿವೃದ್ಧಿ ನಿಗಮ ಮಾಡದೇ,  ಮೀಸಲಾತಿ ಘೋಷಣೆ ಮಾಡಿದೆ ಎಂದು ಹೇಳಿದರು.

ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲಿ ಸಹ  ಬಹುಸಂಖ್ಯಾತ ಲಿಂಗಾಯತರಿಗೆ ಶೇಕಡಾ 16 ರಷ್ಟು ಮೀಸಲಾತಿ ಘೋಷಣೆ ಮಾಡಬೇಕು ಎಂದು ಡಾ. ಸಿದ್ಧರಾಮ ಸ್ವಾಮೀಜಿ ಆಗ್ರಹಿಸಿದರು.

Follow Us:
Download App:
  • android
  • ios