Daiva Sankalpa Project ದಕ್ಷಿಣದ ಜಿಲ್ಲೆಗಳ 23 ದೇಗುಲಗಳಿಗೆ ಮಣೆ, ಉತ್ತರ ಕರ್ನಾಟಕದ 14 ಜಿಲ್ಲೆಗಳು ಸಂಪೂರ್ಣ ಅವಗಣನೆ!

  • ಮುಜರಾಯಿ ಇಲಾಖೆ ದೇಗುಲಗಳ ಪ್ರಗತಿಗೆ ದೈವ ಸಂಕಲ್ಪ ಯೋಜನೆ
  • ಅನುದಾನದಲ್ಲಿ ತಾರತಮ್ಯ, ಉತ್ತರ ಕರ್ನಾಟಕದ ನಿರ್ಲಕ್ಷ್ಯ
  • ಉತ್ತರ ಕರ್ನಾಟಕದ 2 ದೇಗುಲಕ್ಕೆ ಮಾತ್ರ ಅನುದಾನ
Fund allocation Discrimination on Ministry of Muzarai Daiva Sankalpa Project to North karnataka Temples ckm

ಕಲಬುರಗಿ(ಫೆ.07):  ಹಲವಾರು ಅಭಿವೃದ್ಧಿ ಯೋಜನೆಗಳಿಂದ ವಂಚಿತವಾಗುತ್ತಿರುವ ಉತ್ತರ ಕರ್ನಾಟಕ(North Karnataka) ಇದೀಗ ಮುಜರಾಯಿ ಇಲಾಖೆಯ(Ministry of Muzarai) ’ದೈವ ಸಂಕಲ್ಪ’ ಯೋಜನೆಯಿಂದಲೂ ವಂಚಿತವಾಗಿದೆ.

ಮುಜರಾಯಿ ಇಲಾಖೆ ದೇಗುಲಗಳ ಪ್ರಗತಿಗೆ ದೈವ ಸಂಕಲ್ಪ ಯೋಜನೆಯಡಿಯಲ್ಲಿ(Daiva Sankalpa Project) ನೀಡುವ ಅನುದಾನದಲ್ಲಿ ದಕ್ಷಿಣದ ದೇಗುಲಗಳಿಗೆ ಮಣೆ ಹಾಕಿದ್ದು, ಉತ್ತರ ಕರ್ನಾಟಕ ಭಾಗವನ್ನೇ ಕಡೆಗಣಿಸಿದೆ. ಮಂಜೂರಾದ 1,143.61 ಕೋಟಿ ಅನುದಾನಲ್ಲಿ 1,050 ಕೋಟಿ ಅನುದಾನ ದಕ್ಷಿಣದ ದೇಗುಲಗಳಿಗೆ ಹಂಚಿಕೆಯಾಗಿದ್ದು, ಈ ಪೈಕಿ ಕೇವಲ 93 ಕೋಟಿ ರು. ಉತ್ತರದ 2 ದೇಗುಲಕ್ಕೆ ನೀಡಿದೆ.

ಇಲಾಖೆ ಸುತ್ತೋಲೆಯಂತೆ ಕಲ್ಯಾಣ ನಾಡಿನ ಕೊಪ್ಪಳ ಜಿಲ್ಲೆಯ ಹುಲಗಿ ಹುಲಿಗೆಮ್ಮ ದೇಗುಲ, ಕಿತ್ತೂರು ನಾಡಿನ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರು ರೇಣುಕಾ ಯಲ್ಲಮ್ಮ ದೇವಿ ಗುಡ್ಡ ಹೊರತುಪಡಿಸಿದರೆ ಉತ್ತರದ ಇನ್ಯಾವ ದೇಗುಲಗಳಿಗೂ ದೈವ ಸಂಕಲ್ಪದ ಅನುದಾನ ದೊರಕಿಲ್ಲ. ಆಯ್ಕೆಯಾದ 25 ದೇಗುಲಗಳಲ್ಲಿ ಸವದತ್ತಿ ಯಲ್ಲಮ್ಮ, ಹುಲಗಿಯ ಹುಲಗೆಮ್ಮ ದೇವಿ ಮಂದಿರ ಹೊರತುಪಡಿಸಿದರೆ ಉಳಿದ 23 ದೇಗುಲಗಳು ದಕ್ಷಿಣ ಕರ್ನಾಟಕ ಹಾಗೂ ಹಳೆ ಮೈಸೂರು ಹಾಗೂ ಬೆಂಗಳೂರು, ಮಂಡ್ಯ ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ಭಾಗದ್ದೇ ಆಗಿವೆ.

Temple Development: ಕರ್ನಾಟಕದ  ದೇಗುಲ ಅಭಿವೃದ್ಧಿಗೆ ‘ದೈವ ಸಂಕಲ್ಪ’ ಯೋಜನೆ, ಏನು ವಿಶೇಷ?

ಹಂಚಿಕೆಯಾದ ಅನುದಾನದ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಿದಾಗಲೂ ದೈವ ಸಂಕಲ್ಪದಡಿ ಆಯ್ಕೆಯಾಗಿರುವ ದಕ್ಷಿಣ ಭಾಗದ ಎಲ್ಲಾ 23 ದೇಗುಲಗಳಿಗೆ ಇಲಾಖೆ 1,050 ಕೋಟಿ ಅನುದಾನ ನೀಡಿದರೆ, ಸವದತ್ತಿ ಯಲ್ಲಮ್ಮ ದೇಗುಲ, ಕೊಪ್ಪಳದ ಹುಲಿಗೆಮ್ಮ ಮಂದಿರ ಎರಡಕ್ಕೆ 94 ಕೋಟಿ ರು. ನೀಡಿದೆ.

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತಿರುವ ಉತ್ತರ ಕರ್ನಾಟಕದಲ್ಲಿ ಅತ್ಯಂತ ಪ್ರಾಚೀನ, ಶಿಲ್ಪಕಲಾ ವೈಭವವಿರುವ, ಅವಸಾನದ ಅಂಚಿಲ್ಲಿರುವ, ಮೂಲ ಸವಲತ್ತು ವಂಚಿತ ಸಾಕಷ್ಟುದೇಗುಲಗಳಿದ್ದರೂ ಮುಜರಾಯಿ ಇಲಾಖೆಗೆ ಅವು ಯಾವುವೂ ಕಾಣಲೇ ಇಲ್ಲವೆ? ಎಂದು ಜನ ತಾರತಮ್ಯದ ಅನುದಾನ ಹಂಚಿಕೆಯನ್ನೇ ಪ್ರಶ್ನಿಸುತ್ತಿವಂತಾಗಿದೆ.

Hindu Temples: ಕಾಶ್ಮೀರದಲ್ಲಿ ಎಷ್ಟೊಂದು ದೇವಾಲಯಗಳಿವೆ ಎಂದು ಕೇಳಿದ್ರೆ ಅಚ್ಚರಿ ಪಡ್ತೀರಿ!

ದತ್ತಾತ್ರೇಯ ದೇವಸ್ಥಾನ, ಘತ್ತರಗಿ ಭಾಗ್ಯವಂತಿ ಮಂದಿರ, ನಾಗಾವಿ ಯಲ್ಲಮ್ಮ ದೇವಿ, ಬಾದಾಮಿ ಬನಶಂಕರಿ ಮಂದಿರ ಸೇರಿದಂತೆ ಅನೇಕ ಪುರಾತನ, ಹೆಸರಾಂತ ಮಂದಿರಗಳು ಕಲ್ಯಾಣ ನಾಡು, ಕಿತ್ತೂರ ಕರ್ನಾಟಕದಲ್ಲಿದ್ದರೂ ಮುಜರಾಯಿ ಇಲಾಖೆಯ ಅನುದಾನ ಹಂಚಿಕೆಯಲ್ಲಿನ ಮಲತಾಯಿ ಧೋರಣೆ ಜನತೆ ಖಂಡಿಸುತ್ತಿದ್ದಾರೆ.

ಏನಿದು ದೈವ ಸಂಕಲ್ಪ ಯೋಜನೆ
ದೇವಸ್ಥಾನಗಳಿಗೆ ಅನುದಾನ ನೀಡುವ ಮೂಲಕ ಅವುಗಳ ಸರ್ವತೋಮುಖ ಪ್ರಗತಿಗೆ ಮುಜರಾಯಿ ಇಲಾಖೆ ದೈವ ಸಂಕಲ್ಪ ಯೋಜನೆ ಎಂದು ಹೆಸರಿಟ್ಟಿದೆ. ದೈವ ಸಂಕಲ್ಪ ಯೋಜನೆಯಡಿ ಈ ಬಾರಿ ಮುಜರಾಯಿ ಇಲಾಖೆ ಎ ಪಟ್ಟಿಯಲ್ಲಿರುವ ರಾಜ್ಯದ 25 ಆಯ್ದ ದೇಗುಲಗಳನ್ನು ಅಭಿವೃದ್ಧಿ ಪಡಿಸಲು 1,143.61 ಕೋಟಿ ರು ಅನುದಾನ ಹಂಚಿಕೆ ಮಾಡಿದೆ.

ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಸ್ವಾಮಿ ದೇಗುಲ-130, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ-339.99, ಮುಕಾಬಿಂಕಾ ದೇವಾಲಯ- 102.42, ಚಾಮುಂಡೇಶ್ವ್ವರಿ ದೇವಾಲಯ ಮತ್ತು ಅರಮನೆ ಮುಜರಾಯಿ ದೇಗುಲಗಳು-102.42, ಶ್ರೀಕಂಠೇಶ್ವರ ಸ್ವಾಮಿ ದೇವಾಲಯ- 137.93, ದುರ್ಗ ಪರಮೇಶ್ವರಿ ದೇವಾಲಯ- 11.31, ಘಾಟಿ ಸುಬ್ರಹ್ಮಣ್ಯ-18. 86, ಬನಶಂಕರಿ ದೇವಸ್ಥಾನ-47.94, ಯಡಿಯೂರ ಸಿದ್ದಲಿಂಗೇಶ್ವರ- 42. 84, ಉಡುಪಿಯ ಬ್ರಹ್ಮಲಿಂಗ್ವೇರ-5.90, ಸೌತಡ್ಕ ಮಹಾಗಣಪತಿ- 2. 75, ಬ್ರಾಹ್ಮಿ ದುರ್ಗಾಪರಮೇಶ್ವರಿ- 1. 42, ನಿಮಿಷಾಂಬಾ ದೇಗುಲ-23. 46, ಕದ್ರಿ ಮಂಜುನಾಥ- 4. 53, ಮಿಂಟೋ ಆಂಜನೇಯ- 4. 99, ಜನಾರ್ಧನ ಮತ್ತು ಮಹಾಕಾಳಿ ದೇವಾಲಯ- 8. 54, ಕಬ್ಬಾಳಮ್ಮ ದೇವಸ್ಥಾನ- 9. 96, ಕೋಲಾರದ ಪ್ರಸನ್ನ ವೆಂಕಟಸ್ವಾಮಿ-8. 18, ಶ್ರೀರಂಗಪಟ್ಟಣ ರಂಗನಾಥ ದೇಗುಲ- 13.63, ದೊಡ್ಡ ಗಣಪತಿ ಮತ್ತು ಮಲ್ಲಿಕಾರ್ಜುನ ಮಂದಿರ- 11. 82, ಮೇಲುಕೋಟೆ ಚಲುವನಾರಾಯಣಸ್ವಾಮಿ- 5. 51, ಮಹಾಲಿಂಗೇಶ್ವರ ದೇವಸ್ಥಾನ- 3. 79, ಚೆನ್ನಕೇಶವ ಸ್ವಾಮಿ ದೇವಸ್ಥಾನ-2. 67 ಸೇರಿ , ದಕ್ಷಿಣ ಕರ್ನಾಟಕದ ದೇಗುಲಗಳಿಗೆ ಒಟ್ಟು 1, 050 ಕೋಟಿ ರು. ನೀಡಿದೆ.

ಆದರೆ, ಉತ್ತರ ಕರ್ನಾಟಕದ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ 47. 48, ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ 46. 01 2 ದೇಗುಲಗಳಿಗೆ ಮಾತ್ರ ದೈವ ಸಂಕಲ್ಪ ಯೋಜನೆಯಡಿ ಅನುದಾನ ನೀಡಿದೆ.

ಉತ್ತರ ಕರ್ನಾಕದಲ್ಲಿಯೂ ಪ್ರಾಚೀನವಾದ, ಅಭಿವೃದ್ಧಿ ನಿರೀಕ್ಷೆಯಲ್ಲಿ ಸಾಕಷ್ಟುದೇವಸ್ಥಾನಗಳಿದ್ದರೂ ಮುಜರಾಯಿ ಇಲಾಖೆ ಅನುದಾನ ಹಂಚಿಕೆಯಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ನಾಡನ್ನು ಕಡೆಗಣಿಸಿದೆ. ಉತ್ತರದ ಕಡೆ ಮತ್ತೆ ಸರ್ಕಾರದ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಕನ್ನಡಿ ಬೇಕೆ? ತಾರತಮ್ಯ ವಿರೋಧಿಸಿಯೇ ಪ್ರತ್ಯೇಕ ರಾಜ್ಯದ ಕೂಗು ಹಾಕಿದ್ದೇವು. ತಾರತಮ್ಯ ಹಾಗೇ ಮುಂದುವರಿದಿದೆ. ಹೀಗಾಗಿ ನಾವು ಮತ್ತೆ ಹೋರಾದ ದಾರಿ ಹಿಡಿಯಲೇಬೇಕಾಗಿದೆ.
- ಮಹಾದೇವಪ್ಪ ಗೌಡ ಪಾಟೀಲ್‌ ನರಿಬೋಳ್‌, ಹೋರಾಟಗಾರ, ಕಲಬುರಗಿ

ಶೇಷಮೂರ್ತಿ ಅವಧಾನಿ
ಕನ್ನಪ್ರಭ ವಾರ್ತೆ 

Latest Videos
Follow Us:
Download App:
  • android
  • ios