ಬೆಂಗಳೂರು/ತುಮಕೂರು, [ಜ.01]: ಪ್ರಧಾನಿ ನರೇಂದ್ರ ಮೋದಿ ನಾಳೆ [ಗುರುವಾರ] ತುಮಕೂರಿಗೆ ಆಗಮಿಸಲಿದ್ದು, ರೈತರ ಸಮಾವೇಶದಲ್ಲಿ  ಅಭಿವೃದ್ಧಿ ಯೋಜನೆಗಳ ಬಗ್ಗೆ  ಭಾಷಣ ಮಾಡಲಿದ್ದಾರೆ. 

ಅದಕ್ಕೂ ಮೊದಲು ಅವರು ಬೆಂಗಳೂರಿನ ಯಲಹಂಕ ಏರ್ಪೋರ್ಸ್ ಗೆ ಬಂದಿಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗಲಿದ್ದು, ಅದಕ್ಕೆ ವಾಹನ ಸವಾರರು ಬೇರೆ ಮಾರ್ಗ ನೋಡಿಕೊಳ್ಳುವುದು ಸೂಕ್ತ.

ತುಮಕೂರಿಗೆ ಮೋದಿ: ಸಿದ್ಧಗಂಗಾ ಮಠಕ್ಕೆ ಭೇಟಿ, ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ!

ಹಾಗಾದ್ರೆ, ಮೋದಿ ಅವರ ಗುರುವಾರದ ದಿನಚರಿ ಹೇಗಿದೆ..? ಯಾವೆಲ್ಲ ಮಾರ್ಗಗಳಲ್ಲಿ ಸಂಚರಿಸಲಿದ್ದಾರೆ. ಎನ್ನುವ  ಸಂಪೂರ್ಣ ಟೈಮ್ ಲೈನ್ ಈ ಕೆಳಗಿನಂತಿದೆ. 

ಮೋದಿ time line
* ನಾಳೆ [ಗುರುವಾರ] ಮಧ್ಯಾಹ್ನ 1:20ಕ್ಕೆ ನವದೆಹಲಿಯಿಂದ ಬೆಂಗಳೂರಿನ ಯಲಹಂಕ ಏರ್ಪೋರ್ಸ್ ಗೆ ಆಗಮನ.
* ಮಧ್ಯಾಹ್ನ1:25 ಕ್ಕೆ ಯಲಹಂಕ ಏರ್ಫೊರ್ಸ್  ನಿಂದ ಮಿಗ್-17 ಮೂಲಕ ತುಮಕೂರು ಕಡೆ ಪ್ರಯಾಣ.
* ಮಧ್ಯಾಹ್ನ 2:00 ಗಂಟೆಗೆ ತುಮಕೂರು ವಿವಿ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ಲ್ಯಾಡಿಂಗ್.
* ಮಧ್ಯಾಹ್ನ 2:05 ನಿಮಿಷಕ್ಕೆ ತುಮಕೂರು ವಿವಿ ಹೆಲಿಪ್ಯಾಡ್ ನಿಂದ ಸಿದ್ದಗಂಗಾ ಮಠಕ್ಕೆ ಪ್ರಯಾಣ (ಸುಮಾರು 15 ನಿಮಿಷಗಳ ಕಾಲ ರಸ್ತೆ ನಿರ್ಬಂಧ).
* ಮಧ್ಯಾಹ್ನ 2:15 ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ, ಶ್ರೀ ಗಳ ಗದ್ದುಗೆಗೆ ಗೌರವ ಸಲ್ಲಿಕೆ ನಂತರ ಸಿದ್ದಲಿಂಗ ಸ್ವಾಮೀಜಿಗಳ ಜತೆ ಮಾತುಕತೆ (3:20 ಕ್ಕೆ ಸಿದ್ದಗಂಗಾ ಮಠದಿಂದ ನಿರ್ಗಮನ).
* ಮಧ್ಯಾಹ್ನ 3:30 ನಿಮಿಷಕ್ಕೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 6 ಕೋಟಿ ರೈತ ಕುಟುಂಬಗಳಿಗೆ ನೇರ ವರ್ಗಾವಣೆ ಹಾಗೂ ಕೃಷಿ ಕರ್ಮಣ್ ಪ್ರಶಸ್ತಿ ವಿತರಣೆ ಹಾಗೂ ಮೀನು ಸಾಗಣಿಕೆದಾರರ ಸೌಲಭ್ಯಗಳ ವಿತರಣೆ ಸಮಾರಂಭಕ್ಕೆ ಚಾಲನೆ.
* ಸಂಜೆ 5:05.ಕ್ಕೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ನಿರ್ಗಮನ
* ಸಂಜೆ 5:10 ತುಮಕೂರು ವಿವಿ ಹೆಲಿಪ್ಯಾಡ್ ಗೆ ಆಗಮಿಸಿ ಬೆಂಗಳೂರಿಗೆ ಪ್ರಯಾಣ.
* ಸಂಜೆ 5:50 ಕ್ಕೆ ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ ಗೆ ಆಗಮನ. 
* ಸಂಜೆ 5:50 ಕ್ಕೆ ಹೆಚ್ ಎಎಲ್ ನಿಂದ ಸುರಂಜನ ದಾಸ್ ರಸ್ತೆಯ ಡಿಆರ್ ಡಿಓ ಯುವ ವಿಜ್ಙಾನಗಳ ಕಾರ್ಯಕ್ರಮದಲ್ಲಿ ಭಾಗಿ.
* ಸಂಜೆ 7:05 ನಿಮಿಷಕ್ಕೆ DRDOದಿಂದ ರಸ್ತೆ ಮೂಲಕ ನಿರ್ಗಮನ.
* ಸಂಜೆ 7:20 ಕ್ಕೆ ರಾಜಭವನಕ್ಕೆ ಆಗಮನ. (ಸುರಂಜನ ದಾಸ್ ರಸ್ತೆ,ಹೆಚ್ ಎಎಲ್ ರಸ್ತೆ, ಎಂ.ಜಿ ರಸ್ತೆ, ರಾಜಭವನ, ಸಂಚಾರ ನಿಷೇಧ)

* ಮರುದಿನ (ಶುಕ್ರವಾರ) (3/1/2020) 
* ಬೆಳಗ್ಗೆ 9:40 ಕ್ಕೆ ರಾಜಭವನದಿಂದ ರಸ್ತೆ‌ಮೂಲಕ ಜಿಕೆವಿಕೆಗೆ ಆಗಮನ
* ಬೆಳಗ್ಗೆ 10:00 ರಿಂದ 11:05 ನಿಮಿಷದವರೆಗೆ 107 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ.
* ಬೆಳಗ್ಗೆ 11:10 ಕ್ಕೆ ರಸ್ತೆ ಮೂಲಕ HALಗೆ 
ವ ಬೆಳಗ್ಗೆ 11:30 ಕ್ಕೆ  HALನಿಂದ ದೆಹಲಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ.

ಬಳ್ಳಾರಿ ರಸ್ತೆ, ಹೆಬ್ಬಾಳ ಫ್ಲೈ ಓವರ್, ಮೇಕ್ರಿ ಸರ್ಕಲ್, ಟ್ರಿನಿಟಿ ಸರ್ಕಲ್ ಮಾರ್ಗವಾಗಿ HALಗೆ ತೆರಳಲಿದ್ದಾರೆ.  ಈ ಹಿನ್ನಲೆ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬದಲಿ ಮಾರ್ಗ ಬಳಸುವುದು ಒಳಿತು.