ಪೇಜಾವರ ಶ್ರೀ ಅಂತ್ಯಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳ ಫುಲ್ ಡಿಟೇಲ್
ನಾಡು ಕಂಡ ಮಹಾನ್ ಸಂತ ಉಡುಪಿ ಮಠದ ಪೇಜಾವರ ಶ್ರೀಗಳು ಇಂದು (ಭಾನುವಾರ) ಲಿಂಗೈಕ್ಯರಾಗಿದ್ದು, ಅವರ ಅಂತ್ಯಕ್ರಿಯೆ ಇಂದು (ಭಾನುವಾರ) ಸಂಜೆ ನಡೆಯಲಿದೆ. ಹಾಗಾದ್ರೆ, ಶ್ರೀಗಳ ಅಂತ್ಯಕ್ರಿಯೆ ಹೇಗೆಲ್ಲ ನಡೆಯುತ್ತೆ...? ಅಂತ್ಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳು ಹೇಗಿರುತ್ತದೆ? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಡಿ. 29): ಕಳೆದ 10 ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಪೇಜಾವರ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದ್ರೆ, ಆರೋಗ್ಯದಲ್ಲಿ ಸುಧಾರಣೆ ಕಾರಣದಿರುವುದರಿಂದ ಇಂದು (ಭಾನುವಾರ) ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಕೃಷ್ಣ ಮಠಕ್ಕೆ ಶ್ರೀಗಳನ್ನು ಶಿಫ್ಟ್ ಮಾಡಲಾಗಿತ್ತು.
"
ಬಳಿಕ ಅವರು ಕೃಷ್ಣೈಕ್ಯರಾದರು. ತದನಂತರ ಮಠದಲ್ಲಿಯೇ ಶ್ರೀಗಳ ಪಾರ್ಥಿವ ಶರೀರಕ್ಕೆ ವಿವಿಧ ಸ್ವಾಮೀಜಿಗಳು ಪೂಜೆ ನೆರವೇರಿಸಿ, ಉಡುಪಿಯ ಅಜ್ಜರ ಕಾಡು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ನಂತರ ಉಡುಪಿಯಿಂದ ಬೆಂಗಳೂರಿಗೆ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತರಲಾಗಿದ್ದು, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.
ವೆಂಕಟರಮಣ ‘ವಿಶ್ವೇಶ ತೀರ್ಥ’ರಾಗಿದ್ದು ಹೇಗೆ..?
ಇದಾದ ಬಳಿಕ ಇಂದು (ಭಾನುವಾರ) ಸಂಜೆ ಹೊತ್ತಿಗೆ ವಿದ್ಯಾಪೀಠದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಪೇಜಾವರ ಶ್ರೀಗಳ ಅಂತ್ಯ ಸಂಸ್ಕಾರ ನೆರವೇರಲಿದೆ.
ಅಂತ್ಯಕ್ರಿಯೆಯ ವಿಧಿ-ವಿಧಾನಗಳು
ಪೇಜಾವರ ಶ್ರೀಗಳ ಪಾರ್ಥಿವ ಶರೀರಕ್ಕೆ ಗಂಗಾ ಜಲದಿಂದ ಸ್ನಾನ ಮಾಡಿಸಿದ ಬಳಿಕ ಮಧ್ವ ಸಂಪ್ರದಾಯದಂತೆ ನಾಮ ಇಡಲಾಗುತ್ತದೆ. ಬಳಿಕ ಮುದ್ರೆ, ಅಕ್ಷತೆ, ಅಂಗಾರಕ, ತುಳಸಿ ವನಮಾಲೆ ಧಾರಣೆ ಮಾಡಿಸಲಾಗುತ್ತದೆ.
ಪರ್ಯಾಯದಲ್ಲಿ ಅಪರೂಪದ ದಾಖಲೆಯ ಮಾಡಿದ್ದ ಪೇಜಾವರ ಶ್ರೀಗಳು
ಬಳಿಕ ಕೃಷ್ಣ ಮಂದಿರದಲ್ಲಿ ದೇವರಿಗೆ ಆರತಿ ಬೆಳಗಿಸಿ, 5×5 ಅಳತೆಯಲ್ಲಿ ಅಗೆದ ಗುಂಡಿಯಲ್ಲಿ ಸ್ವಸ್ತಿಕಾಸನದಲ್ಲಿ ಪಾರ್ಥಿವ ಶರೀರವನ್ನು ಯೋಗಾರೂಢ ಸ್ಥಿತಿಯಲ್ಲಿ ಕೂಡಿಸಲಾಗುತ್ತದೆ.
ಪಂಚಗವ್ಯ ಪ್ರೋಕ್ಷಣೆ, ಗೋಮಯ ಲೇಪನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 5 ಕಲಶಗಳಿಗೆ ಗಂಗಾ ಸನ್ನಿಧಾನ ಆವಾಹಿಸಿ ಅಭಿಷೇಕ ಮಾಡಿ ಜಪಾನುಷ್ಠಾನ ಸಾಧನಗಳನ್ನು ಪಾರ್ಥಿವ ಶರೀರದ ಮುಂದಿಡಲಾಗುತ್ತದೆ.
ನಂತರ 5 ಪ್ರಮುಖ ದ್ರವ್ಯಗಳಾದ ಉಪ್ಪು, ಸಾಸಿವೆ, ಕರ್ಪುರ, ಕರಿಮೆಣಸು, ಹತ್ತಿ ಹಾಕಿ ಕೊನೆಯಲ್ಲಿ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಲಾಗುತ್ತದೆ.